ಭಟ್ಕಳ: ತಾಲೂಕಿನ ಕೈಕಿಣಿ ಬಸ್ತಿ ಮೂಲಿಗದ್ದೆಯಲ್ಲಿ ಸಹೋದರರ ನಡುವಿನ ಕಲಹ (Property dispute) ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರು ಪೈಂಟರ್ ಮಂಜುನಾಥ ವಾಮನ ಆಚಾರಿ (೫೮) ಸಹೋದರ ರಾಜು ವಾಮನ ಆಚಾರಿ ವಿರುದ್ಧ ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೂರಿನಲ್ಲಿ ತಿಳಿಸಿರುವಂತೆ, ’ಅರ್ಜಿದಾರರು ಕಳೆದ ೨೦೦೯ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೀತಾರಾಮ ತಂದೆ ವೆಂಕಟೇಶ ಆಚಾರಿ ಇವರಿಂದ ೩೫ ಗುಂಟೆ ಜಾಗವನ್ನು ಖರೀದಿ ಮಾಡಿದ್ದು, ಅದನ್ನು ಅರ್ಜಿದಾರರು ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಸದರಿ ಜಮೀನಿನ ಸಂಬಂಧ ಅವರ ತಮ್ಮನಾದ ರಾಜು ತಂದೆ ವಾಮನ ಆಚಾರಿ ಸದರಿ ಜಮೀನು ತನ್ನದೇ ಅಂತಾ ಅರ್ಜಿದಾರರ ಜೊತೆ ತಂಟೆ ತಕರಾರು ಮಾಡಿಕೊಳ್ಳುತ್ತಾ ಬಂದಿದ್ದಾರೆ (Property dispute).
ಇದನ್ನು ಓದಿ: Dhanurmasa/ ಸಾರದಹೊಳೆಯಲ್ಲಿ ಧನುರ್ಮಾಸ ಪೂಜಾ ಕೈಂಕರ್ಯ ಸಂಪನ್ನ
ದಿನಾಂಕ: ೧೧-೦೧-೨೦೨೬ರಂದು ಮಧ್ಯಾಹ್ನ ೦೧:೩೦ ಗಂಟೆಯ ಸಮಯಕ್ಕೆ ಅರ್ಜಿದಾರರು ತನ್ನ ಜಾಗದಲ್ಲಿ ಜೆಸಿಬಿ ತಂದು ಸ್ವಚ್ಛ ಮಾಡುತ್ತಿರುವಾಗ ಎದುರುದಾರನು ಅರ್ಜಿದಾರಿಗೆ ಅವಾಚ್ಯ ಶಬ್ದಗಳಿಂದ ಬೈದು ಕತ್ತಿ ಹಿಡಿದುಕೊಂಡು ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: fisherman/ ರಸ್ತೆ ದಾಟಲು ನಿಂತಿದ್ದ ಮೀನುಗಾರನಿಗೆ ಕಾರು ಡಿಕ್ಕಿ
ದೂರನ್ನು ಸ್ವೀಕರಿಸಿಕೊಂಡು ಠಾಣಾ ಎನ್.ಸಿ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಪಿರ್ಯಾದಿಯವರು ಸದರಿ ಎನ್.ಸಿ ಪ್ರಕರಣವನ್ನು ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳುಂತೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ಹಾಜರು ಪಡಿಸಿದಂತೆ, ಸದರಿ ಎನ್.ಸಿ ಪ್ರಕರಣದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇದನ್ನು ಓದಿ: Assaulted/ ದೂರು ಹಿಂಪಡೆಯದಿದ್ದಕ್ಕೆ ನಡೆಯಿತು ಹಲ್ಲೆ


