ಭಟ್ಕಳ: ಆಟೋದಲ್ಲಿ ಹೆಚ್ಚುವರಿ ಜನರನ್ನು ಹತ್ತಿಸಿಕೊಂಡಿದ್ದಕ್ಕೆ ಇನ್ನೊಬ್ಬ ಆಟೋ ಚಾಲಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ (clashes) ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ತಲಗೋಡ ಗ್ರಾಮದ ಒಂಕನ ಮನೆ ನಿವಾಸಿ ರಾಮಾ ಮಂಜಪ್ಪ ನಾಯ್ಕ ಹಲ್ಲೆಗಳಾದ ಆಟೋ ಚಾಲಕ. ಈ ಕುರಿತು ಅವರ ಪತ್ನಿ ಪಾರ್ವತಿ ರಾಮಾ ನಾಯ್ಕ (೪೦) ತಲಗೋಡ ಗ್ರಾಮದ ಹನುಮಂತ ಸುಬ್ರಾಯ ನಾಯ್ಕ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನು ಓದಿ: Youth died/ ಭಟ್ಕಳದಲ್ಲಿ ರೈಲು ಡಿಕ್ಕಿ ಹೊಡೆದು ಯುವಕ ಸಾವು 

ದೂರಿನಲ್ಲಿ ತಿಳಿಸಿರುವಂತೆ, ದಿನಾಂಕ ೦೩/೦೨/೨೦೨೬ ರಂದು ಸಾಯಂಕಾಲ ೪-೪೫ ಗಂಟೆಗೆ ಭಟ್ಕಳದ ಬಂದರ ರಸ್ತೆಯಲ್ಲಿರುವ ಆಟೋ ರಿಕ್ಷಾ ನಿಲ್ದಾಣದಲ್ಲಿ ಆಟೋ ಚಾಲಕ ರಾಮ ನಾಯ್ಕ ತಮ್ಮ ಆಟೋ ರಿಕ್ಷಾದಲ್ಲಿ ೩ ಜನ ಪ್ರಯಾಣಿಕರನ್ನು ಹತ್ತಿಸಿದ್ದು ನಂತರ ಇಬ್ಬರೂ ಶಾಲಾ ಮಕ್ಕಳಿಗೆ ಹೆಚ್ಚುವರಿಯಾಗಿ ಹತ್ತಿಸಿಕೊಂಡಿದ್ದಾರೆ. ಆಗ ಇದನ್ನು ನೋಡಿ ಅಲ್ಲೇ ಅಟೋ ರಿಕ್ಷಾ ಸರತಿಯಲ್ಲಿದ್ದ ಆರೋಪಿತನಾದ ಹನುಮಂತ ಸುಬ್ರಾಯ ನಾಯ್ಕ ಎಂಬವರು ರಾಮಾ ಮಂಜಪ್ಪ ನಾಯ್ಕರನ್ನು ಅಡ್ಡಗಟ್ಟಿ ತಡೆದಿದ್ದಾರೆ (clashes). ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಅಟೋ ರಿಕ್ಷಾದಲ್ಲಿ ಇದ್ದ ಸ್ಟೀಲ್ ಬಾಟಲಿಯಿಂದ ಎದೆಗೆ ಹೊಡೆದಿದ್ದಾರೆ. ಕೈಯಿಂದ ಹೊಡೆದು ಉಗುರಿನಿಂದ ಕುತ್ತಿಗೆಯ ಭಾಗದಲ್ಲಿ ಪರಚಿ ದೂಡಿ ಹಾಕಿದಲ್ಲದೇ ಎಡಕೈಯನ್ನು ತಿರುವಿ ನೋವು ಪಡಿಸಿದ್ದು, ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: Suicide/ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ