ಭಟ್ಕಳ: ಮಹಾಶಿವರಾತ್ರಿ (Mahashivaratri) ಅಂಗವಾಗಿ ಪ್ರಸಿದ್ಧ ಶಿವಕ್ಷೇತ್ರವಾದ ಮುರ್ಡೇಶ್ವರ ದೇವಸ್ಥಾನಕ್ಕೆ (Murdeshwar temple)೧೬ನೇ ವರ್ಷದ ಪಾದಯಾತ್ರೆ ಫೆ ೧೫ರ ಭಾನುವಾರ ಬೆಳಗಿನ ಜಾವ ೪ ಗಂಟೆಗೆ ನಗರದ ಚೋಳೇಶ್ವರ ದೇವಸ್ಥಾನದಿಂದ ಆರಂಭಗೊಳ್ಳಲಿದೆ ಎಂದು ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೫ ವರ್ಷಗಳಿಂದ ಮಹಾಶಿವರಾತ್ರಿ (Mahashivaratri) ದಿನದಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯ ನೆಲೆಯಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಕೆಲವೇ ಭಕ್ತರಿಂದ ಆರಂಭವಾದ ಈ ಯಾತ್ರೆ, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಇದೀಗ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: Car Parking/ ತೆರವಿನ ಭೀತಿಯಲ್ಲಿ ಕಾರು ನಿಲ್ದಾಣ

ಈ ಬಾರಿ ಬೈಂದೂರು(Byndooru), ಶಿರೂರು (Shirur), ಹೊನ್ನಾವರ (Honnavar) ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸುಮಾರು ೧೦ ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಇದನ್ನು ಓದಿ: Timely action/ಭಟ್ಕಳದಲ್ಲಿ ನಾಪತ್ತೆಯಾಗಿದ್ದ ಕುಮಟಾ ವ್ಯಕ್ತಿ ತುಮಕೂರಿನಲ್ಲಿ ಪತ್ತೆ

ಪಾದಯಾತ್ರೆ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡಲಿವೆ. ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ಲಿಂಬು ಪಾನಕ ವಿತರಣೆ ನಡೆಯಲಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತರಿಗೆ ಹಣ್ಣು, ನೀರು ಹಾಗೂ ಡೈಪುಟ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದನ್ನು ಓದಿ: Hit and run/ ಡಿಕ್ಕಿ ಹೊಡೆದು ಕಾರು ಪರಾರಿ: ಆಟೋರಿಕ್ಷಾ ಪಲ್ಟಿ; ಗರ್ಭಿಣಿ ಸಹಿತ ಆರು ಜನರು ಆಸ್ಪತ್ರೆಗೆ

ಮುರ್ಡೇಶ್ವರದಲ್ಲಿ ಶಿವನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ದೇವಸ್ಥಾನದ ವತಿಯಿಂದ ಉಪಹಾರ ವಿತರಿಸಲಾಗುತ್ತದೆ. ಮಹಿಳೆಯರು ಹಾಗೂ ಮಕ್ಕಳ ಹೆಚ್ಚಿನ ಭಾಗವಹಿಸುವಿಕೆ ಗಮನದಲ್ಲಿಟ್ಟುಕೊಂಡು, ವಾಪಸ್ಸು ಪ್ರಯಾಣಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಬಸ್ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ತರಬೇಕೆಂದು ಮನವಿ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಪಾದಯಾತ್ರೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಶಿವಾನಿ ಶಾಂತಾರಾಮ ತಿಳಿಸಿದರು. ಈ ಸಂದರ್ಭದಲ್ಲಿ ಶಾಂತಾರಾಮ ಭಟ್ಕಳ, ಕುಮಾರ ನಾಯ್ಕ, ಕಿರಣ ಚಂದಾವರಕರ, ಇತರರು ಉಪಸ್ಥಿತರಿದ್ದರು.

ಇದನ್ನು ಓದಿ: Makkala Santhe/ ಹಡೀನ ಶಾಲೆಯಲ್ಲಿ ಮಕ್ಕಳ ಸಂತೆ ಯಶಸ್ವಿ