ಭಟ್ಕಳ: ಇಲ್ಲಿನ  ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ಸಂತೆಯನ್ನು (Makkala Santhe) ವಿಶೇಷವಾಗಿ ಆಯೋಜಿಸಲಾಗಿದ್ದು, ಪಾಲಕರು ಜೊತೆಗೆ ಸಾರ್ವಜನಿಕರು ಸಂತೆಯಲ್ಲಿ ಪಾಲ್ಗೊಂಡು ಮಕ್ಕಳಿಂದ ಖರೀದಿ ಮಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಕ್ಕಳ ಸಂತೆ (Makkala Santhe) ಕಾರ್ಯಕ್ರಮವನ್ನು ಶಾಲೆ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ನಾಗೇಶ ಪೈ ಉದ್ಘಾಟಿಸಿ ಮಾತನಾಡಿ “ಮಕ್ಕಳಲ್ಲಿ ವ್ಯವಹಾರ ಜ್ಞಾನ ಅತಿ ಮುಖ್ಯ. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ವ್ಯವಹಾರದ ಮಾನಸಿಕವಾಗಿ ಸಂಘಟರಾಗಬೇಕು ಮತ್ತು ಕಲಿತ ಶಾಲೆಯನ್ನು ಮರೆಯಬಾರದೆಂದು ಹೇಳಿದರು.

Makkala Santhe/ಸಾವಯವ ಕೃಷಿ ಉತ್ಪನ್ನಗಳೇ ಮಕ್ಕಳ ಸಂತೆಯ ಆಕರ್ಷಣೆ

ಮುಖ್ಯ ಅತಿಥಿಗಳಾಗಿ ಸೋನಾರಕೇರಿ  ಕ್ಲಸ್ಟರ್ ವಿಭಾಗದ ಸಿ.ಆರ್.ಪಿ. ಹಾಗೂ ಇಲಾಖೆ ಅನುಷ್ಠಾನಾಧಿಕಾರಿ  ಗೋಪಾಲ ನಾಯ್ಕ ಮಾತನಾಡಿ “ಗಂಡು ಮಕ್ಕಳ ಶಾಲೆಯು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇರುವ ಚಿಕ್ಕ ಜಾಗದಲ್ಲಿಯೇ ಚೊಕ್ಕದಾಗಿ ವ್ಯವಸ್ಥಿತವಾಗಿ ಶಿಸ್ತು ಬದ್ಧವಾಗಿ ಕಾರ್ಯಕ್ರಮ ಸಂಘಟಿಸಿದ್ದಾರೆ. ಹಳ್ಳಿಯ ಸೊಗಡನ್ನು ತರಲು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ವಿ ಸಹ ಆಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಯಾರು ಹೆಚ್ಚು ಚೌಕಾಸಿ ಮಾಡಬಾರದೆಂದು ಈ ಮಾತು ಹೇಳಿದರು.

Vardhanthi utsav/ ಫೆ ೧೯, ೨೦ರಂದು ಸರ್ಪನಕಟ್ಟೆ ಶ್ರೀ ವಾಸುಕಿ ಸರ್ಪ ದೇವಸ್ಥಾನದ ವರ್ಧಂತಿ ಉತ್ಸವ

ಇನ್ನೋರ್ವ ಅತಿಥಿಗಳಾದ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕಿರಣ ಶಾನಭಾಗ ಮಾತನಾಡಿ “ಶಾಲೆಯಲ್ಲಿ ವಿನೂತನವಾಗಿ ಪ್ರಥಮ ಬಾರಿಗೆ ಮಕ್ಕಳ ಸಂಖ್ಯೆಯನ್ನು ಆಯೋಜಿಸಿ ಮಕ್ಕಳಲ್ಲಿ ವ್ಯವಹಾರ ಜನ ಬೆಳೆಯಲಿಸಲು ಅತಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ ಎಂದು ಪ್ರಶಂಶಿಸಿದರು.

bike hit/ ಬೈಕ್ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಗಂಭೀರ

ವೇದಿಕೆಯಲ್ಲಿ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ  ರಾಮಚಂದ್ರ ದೇವಾಡಿಗ, ಉಪಾಧ್ಯಕ್ಷೆ ಪಾರ್ವತಿ ನಾಯ್ಕ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಜನಾರ್ಧನ ಮೊಗೇರ ನಿರೂಪಿಸಿದರು.

Mankal Vaidya/ `ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆ ತಲೆದೋರಿದರೆ ಗ್ರಾಮ ಆಡಳಿತ ಅಧಿಕಾರಿಗಳೇ ನೇರ ಹೊಣೆ’

ಮಕ್ಕಳ ಸಂತೆಯಲ್ಲಿ ವಿಭಿನ್ನವಾದ ಗಿಳಿ ಮಾರಾಟ,  ಸ್ವದೇಶಿ ಉತ್ಪನ್ನಗಳು, ಬೆಂಕಿ ರಹಿತ ಅಡುಗೆ, ಬಟ್ಟೆ ಮಾರಾಟ, ಮಾವಿನ ಮಿಡಿ, ವಿವಿಧ ತರಕಾರಿಗಳು, ಸೊಪ್ಪುಗಳು, ಹಣ್ಣಿನ ಮಳೆಗೆ, ತಂಪು ಪಾನೀಯ ಮಳಿಗೆ, ವಿಡಿಯೋ ಗೇಮ್ ಗಳು, ಸಣ್ಣ ಪ್ರಮಾಣದ ಜಾತ್ರೆಯ ವಾತಾವರಣ ಮೂಡಿತ್ತು.

Furniture donation/ಅಂಗನವಾಡಿಗೆ ರೋಟರಿ ಕ್ಲಬ್ ಪೀಠೋಪಕರಣ ಕೊಡುಗೆ