ಭಟ್ಕಳ: “ಜಗತ್ತಿನಲ್ಲಿ ಎಲ್ಲರ ಒಳಿತನ್ನು ಬಯಸುವ ಧರ್ಮ ಇದ್ದರೆ ಅದು ಹಿಂದೂ ಧರ್ಮ (Hinduism) ಮಾತ್ರವಾಗಿದ್ದು, ಹಿಂದೂ ಸಮಾಜವು ಹಿಂಸೆ ಮಾಡಿದ ಚರಿತ್ರೆ ಇಲ್ಲ” ಎಂದು ಬಂಟ್ವಾಳ (Bantwal) ತಾಲೂಕಿನ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮಿ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಭಟ್ಕಳ (Bhatkal) ನಗರದ ಹಳೆಯ ಬಸ್ ನಿಲ್ದಾಣದ ಸಾರ್ವಜನಿಕ ಗಣೇಶೋತ್ಸವ ಪ್ರಾಂಗಣದಲ್ಲಿ ‘ನಗರ ಹಿಂದೂ ಸಂಗಮ’ದ (Hindu Sangam) ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. “ಹಿಂದೂ ಎನ್ನುವ ಪದಕ್ಕೂ, ಭಗವಧ್ವಜಕ್ಕೂ ಅಪಾರ ಶಕ್ತಿ ಇದೆ. ಶಕ್ತಿಯ ಅರಿವು ನಮಗಾಗಬೇಕಿದೆ. ವರ್ಷಗಟ್ಟಲೆ ಪರಕೀಯರು ದೇಶವನ್ನು ಲೂಟಿ ಮಾಡಿದರೂ ಹಿಂದೂಗಳ ರಾಷ್ಟ್ರವನ್ನು ನಾಶ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಈ ನೆಲದ ಶಕ್ತಿಯೇ ಅಂತಹುದು” ಎಂದರು.
Anantkumar Hegde/ ನಿಗೂಢವಾಗಿಯೇ ಉಳಿದ ಅನಂತಕುಮಾರ ಹೆಗಡೆ ರಾಜಕೀಯ ನಡೆ: ಕಾರ್ಯಕರ್ತರಿಗೆ ನಿರಾಸೆ
“ನಮ್ಮ ದೇಶದ ತಾಯಂದಿರ ಗರ್ಭದಲ್ಲಿ ಹುಟ್ಟಿದ ಅನೇಕ ಚೇತನಗಳು ವಿಶ್ವದಾದ್ಯಂತ ತಮ್ಮ ಕೀರ್ತಿಯನ್ನು ಪಸರಿಸಿದೆ. ಸ್ವಾಮಿ ವಿವೇಕಾನಂದರಂತಹ (Swami Vivekanand) ಮಹಾಚೇತನ ಜಗತ್ತನ್ನು ನಮ್ಮಡೆಗೆ ನೋಡುವಂತೆ ಮಾಡಿದ್ದರು. ಹಿಂದೂ (Hinduism) ಸಮಾಜದಲ್ಲಿ ವಿಕೃತಿಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಮ್ಮಲ್ಲಿರುವ ದೌರ್ಬಲ್ಯಗಳನ್ನು ತೊರೆದು ಒಂದಾಗಬೇಕಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಉಂಟಾಗಿರುವ ಅಸ್ವಸ್ಥತೆ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡುವ ಅಗತ್ಯವಿದೆ” ಎಂದು ಹೇಳಿದರು.
Margosa Mahal/ ಭಟ್ಕಳ ತಾಲೂಕಿನ ಸುತ್ತಮುತ್ತ ‘ಮರ್ಗೋಸ ಮಹಲ್’ ಚಿತ್ರೀಕರಣ
ಶ್ರೀಧರ ನಾಯ್ಕ ಆಸರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪವಿತ್ರಾ ನಾಯ್ಕ ವೈಯಕ್ತಿಕ ಗೀತೆ ಹಾಡಿದರು. ಶಿಕ್ಷಕ ನಾರಾಯಣ ಶಿರೂರು ನಿರೂಪಿಸಿದರು. ಸುರೇಂದ್ರ ಪೂಜಾರಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಆರಂಭದಲ್ಲಿ ಶೋಭಾಯಾತ್ರೆ ನಡೆಯಿತು. ಸುಮಾರು ೩,೦೦೦ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Vidya Vahini Express/ ಗ್ರಾಮಸ್ಥರ ಪಾಲಿನ ಅಕ್ಷರ ದೇಗುಲ: ಮಾದರಿ ‘ವಿದ್ಯಾವಾಹಿನಿ ಎಕ್ಸ್‌ಪ್ರೆಸ್’
ಇದಕ್ಕೂ ಮುನ್ನ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು. ವಿವಿಧ ಟ್ಯಾಬ್ಲೊಗಳು, ಮಹಿಳೆಯರ ಭಜನಾ ತಂಡಗಳು, ಪೂರ್ಣಕುಂಭ ಸ್ವಾಗತ ಹಾಗೂ ಪುಟಾಣಿಗಳ ವಿವಿಧ ವೇಷಭೂಷಣಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಶೋಭಾಯಾತ್ರೆಯನ್ನು ಸ್ಥಳೀಯರು ಉತ್ಸಾಹದಿಂದ ವೀಕ್ಷಿಸಿದರು. ಭದ್ರತಾ ದೃಷ್ಟಿಯಿಂದ ಭಟ್ಕಳ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಕಟ್ಟುನಿಟ್ಟಾಗಿ ಮಾಡಲಾಗಿತ್ತು.


