ಭಟ್ಕಳ: ಸಾರ್ವಜನಿಕ ಶಾಂತಿ ಭಂಗದ ಆರೋಪದಡಿ ಮುರುಡೇಶ್ವರದ (Murudeshwar) ಮೂವರ ವಿರುದ್ಧ ಭಟ್ಕಳ ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಗಡಿಪಾರು ಆದೇಶವನ್ನು (Deportation order) ಧಾರವಾಡದ (Dharwad) ಹೈಕೋರ್ಟ್ ಪೀಠ (highcourt bench) ರದ್ದುಪಡಿಸಿದೆ (High Court verdict).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜು ನಾಯ್ಕ, ಕೇಶವ ನಾಯ್ಕ, ಗಣೇಶ ಜಯಂತ ನಾಯ್ಕ, ಗಣೇಶ ಬಾಬು ನಾಯ್ಕ ಹಾಗೂ ಭಾಸ್ಕರ ಮಾದೇವ ನಾಯ್ಕ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ ೫೪ರಿಂದ ೫೮ರ ಅಡಿಯಲ್ಲಿ ಭಟ್ಕಳ (Bhatkal) ಉಪ ವಿಭಾಗಾಧಿಕಾರಿ ಏಪ್ರಿಲ್ ೨ರಂದು ಗಡಿಪಾರು ಆದೇಶ ಹೊರಡಿಸಿದ್ದರು. ಆರೋಪಿಗಳು ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣರಾಗಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
cricket tournament/ ಕೊಂಕಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ
ಈ ಆದೇಶವನ್ನು ಪ್ರಶ್ನಿಸಿ ಆರೋಪಿತರು ಧಾರವಾಡದ ಹೈಕೋರ್ಟ್ ಪೀಠದ ಮೊರೆ ಹೋಗಿ ರಿಟ್ ಪಿಟಿಷನ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ದಾಖಲೆಗಳು ಹಾಗೂ ವಾದಗಳನ್ನು ಪರಿಶೀಲಿಸಿ ಏಪ್ರಿಲ್ ೨೭ರಂದು ಗಡಿಪಾರು ಆದೇಶವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ (High Court verdict). ಆರೋಪಿತರ ಪರವಾಗಿ ಭಟ್ಕಳ ಮೂಲದ ನ್ಯಾಯವಾದಿ ದತ್ತು ನಾಯ್ಕ (ಡಿ ಜೆ ನಾಯ್ಕ) ವಾದ ಮಂಡಿಸಿದ್ದರು.
Deputy Divisional Officer/ ಭಟ್ಕಳ ಉಪ ವಿಭಾಗಾಧಿಕಾರಿ ಹುದ್ದೆ ಭರ್ತಿ: ಜೆ ಮಹೇಶ ಅಧಿಕಾರ ಸ್ವೀಕಾರ



