ಭಟ್ಕಳ: ರಂಜಾನ್ ಪೇಟೆಯ (Ramzan Market) ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹೆಚ್ಚಾಗುವ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಭಟ್ಕಳ (Bhatkal) ಶಹರ ಪೊಲೀಸ್ ಠಾಣೆ ವತಿಯಿಂದ ಕೆಲವು ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ (Traffic changes) ಮಾಡಲಾಗಿದೆ. ಭಟ್ಕಳ ಡಿವೈಎಸ್ಪಿ ಬಿ ಗಿರೀಶ ಮತ್ತು ಭಟ್ಕಳ ಶಹರ ಠಾಣೆಯ ಇನ್ಸ್ಪೆಕ್ಟರ್ ದಿವಾಕರ ಈ ಕುರಿತು ಮಾಹಿತಿ ನೀಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಳೆ ಬಸ್ ನಿಲ್ದಾಣ–ನಾಗಬನ–ಕಳಿ ಹನುಮಂತ ದೇವಸ್ಥಾನ ರಸ್ತೆ–ವಿ ವಿ ರೋಡ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಲ್ತಾನ್ ಸ್ಟ್ರೀಟ್‌ನ ಮುಸ್ಬಾ ಕ್ರಾಸ್‌ನಿಂದ ರಂಜಾನ್ ಮಾರ್ಕೆಟ್ ಕಡೆಗೆ ಬರುವ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾರಿಕಟ್ಟೆಯಿಂದ ಹೂವಿನ ಚೌಕವರೆಗಿನ ರಸ್ತೆಯನ್ನು ಏಕಮುಖ ಸಂಚಾರವಾಗಿ ಘೋಷಿಸಲಾಗಿದೆ. ಅಲ್ಲದೇ ಮಾರಿಕಟ್ಟೆಯಿಂದ ನಾಗಬನದ ಕಡೆಗೆ ಬರುವ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ (Traffic changes).

MDS exam/ ದಂತ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಭಟ್ಕಳದ ಯುವಕಗೆ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್

ಹಳೆ ಬಸ್ ನಿಲ್ದಾಣದಿಂದ ನಾಗಬನ ರಸ್ತೆಯವರೆಗೆ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೂ ನಿರ್ಬಂಧ ವಿಧಿಸಲಾಗಿದೆ. ವಾಹನ ಪಾರ್ಕಿಂಗ್‌ಗಾಗಿ ಪುರಸಭೆಯ ಹಿಂಭಾಗದಲ್ಲಿರುವ ಅಂಜುಮಾನ್ ಆಂಗ್ಲೋ ಮಾಧ್ಯಮ ಪ್ರೌಢಶಾಲೆಯ ಮೈದಾನ ಹಾಗೂ ಆಟೋರಿಕ್ಷಾ ಚಾಲಕ ಮಾಲಕ ಸಂಘದ ಮೈದಾನದಲ್ಲಿ ಸಂಜೆ ೪ರಿಂದ ರಾತ್ರಿ ೩ರವರೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Annual General Meeting/ ನಿವೃತ್ತ ಸರಕಾರಿ ನೌಕರರ ಸಂಘದ “ವಾರ್ಷಿಕ ಮಹಾಸಭೆ”

ನಾಗಬನದಿಂದ ಮಾರಿಕಟ್ಟೆವರೆಗಿನ ರಸ್ತೆಯಲ್ಲಿ ಇರುವ ಮನೆಗಳಿಗೆ ವಾಹನ ಪಾಸ್ ವಿತರಿಸಲಾಗುತ್ತದೆ. ಪಾಸ್ ಪಡೆದವರು ಸಂಜೆ ೮ರವರೆಗೆ ಮಾತ್ರ ದ್ವಿಚಕ್ರ ವಾಹನ ಬಳಸಲು ಅವಕಾಶವಿದ್ದು, ನಾಲ್ಕು ಚಕ್ರ ಹಾಗೂ ಭಾರಿ ವಾಹನಗಳನ್ನು ಬಳಸಬಾರದು ಎಂದು ಸೂಚಿಸಲಾಗಿದೆ. ಇದೇ ಮಾರ್ಗದಲ್ಲಿರುವ ಅಂಗಡಿಗಳಿಗೆ ಪಾಸ್ ನೀಡಲಾಗುತ್ತಿದ್ದು, ಪ್ರತಿ ಅಂಗಡಿಗೆ ಒಂದು ದ್ವಿಚಕ್ರ ವಾಹನ ಮಾತ್ರ ಬಳಸಲು ಅವಕಾಶ ಇದೆ.

Ramadan stalls/ ೩೬ ರಂಜಾನ್ ಮಳಿಗೆಗೆ ೧೩೫೯ ಅರ್ಜಿ: ಲಾಟರಿ ಮೂಲಕ ಹಂಚಿಕೆ

ಅಂಗಡಿಗಳಿಗೆ ಅಗತ್ಯ ವಸ್ತುಗಳನ್ನು ಬೆಳಿಗ್ಗೆ ೬ರಿಂದ ೧೦ ಗಂಟೆಯೊಳಗೆ ಸಾಗಿಸಲು ಸೂಚಿಸಲಾಗಿದ್ದು, ಸಂಚಾರ ಸುಗಮತೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು ಎಂದು ಪೊಲೀಸ್ ಅ ಧಿಕಾರಿಗಳು ತಿಳಿಸಿದ್ದಾರೆ.

Woman hit by bike/ ಕಡವೆ ತಪ್ಪಿಸಲು ಹೋಗಿ ಮಹಿಳೆಗೆ ಬೈಕ್ ಡಿಕ್ಕಿ