ಭಟ್ಕಳ: ಸಚಿವ ಮಂಕಾಳ ವೈದ್ಯ (Minister Mankal Vaidya) ತಪ್ಪು ಮಾಡಿದ್ದರೆ ಬಿಜೆಪಿಯಲ್ಲಿ (BJP) ಕಾಣಿಸಿಕೊಂಡಿರುವ ಮಾಸ್ತಪ್ಪ ನಾಯ್ಕ, ಮಂಕಾಳ ವೈದ್ಯರ ವಿರುದ್ಧ ಇ ಡಿ ತನಿಖೆ ಸಂಸ್ಥೆಯಲ್ಲಿ ದೂರು ನೀಡಲಿ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿದೆ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ (Congress) ಅಧ್ಯಕ್ಷ ಗೋವಿಂದ ನಾಯ್ಕ ಸವಾಲು ಎಸೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಲ್ಲಿನ ಭಟ್ಕಳ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಭಟ್ಕಳ – ಮಂಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಒಬ್ಬ ಮನುಷ್ಯನ ತೇಜೋವಧೆ ಮಾಡುವುದು ಸರಳ ಹಾಗೂ ಕಡಿಮೆ ಸಮಯ ಸಾಕು. ಸಚಿವ ಮಂಕಾಳ ವೈದ್ಯ (Minister Mankal Vaidya) ಅವರ ಬಗ್ಗೆ ಇತ್ತೀಚೆಗೆ ಶಿವಮೊಗ್ಗದ ಕಡೆಗೆ ಆಸ್ತಿ ಮಾಡುತ್ತಿದ್ದಾರೆ. ನಾಲೈದು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದಾರೆಂಬ ಆರೋಪ ಅವರು ಮಾಡಿದ್ದಾರೆ. ಇವೆಲ್ಲ ಆಸ್ತಿ ಈ ಭಾಗದ ಜನರಿಗೆ ಮೋಸ ಮಾಡಿ ಮಾಡುತ್ತಿದ್ದಾರೆ ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Hotels inspected/ ಎಲ್ಪಿಜಿ ದುರ್ಬಳಕೆ ತಡೆಗೆ ಭಟ್ಕಳದಲ್ಲಿ ಹೋಟೆಲ್ಗಳ ತಪಾಸಣೆ
ಶರಾವತಿ ಪಂಪ್ ಸ್ಟೋರೆಜ್ ವಿಚಾರದಲ್ಲಿ ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಅಂದಿನ ಜಿಲ್ಲೆಯ ಶಾಸಕರು ಇದಕ್ಕೆ ವಿರೋಧ ಮಾಡಿಲ್ಲ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದರು. ಅದಕ್ಕೆ ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಸುಳ್ಳು ಹೇಳಿದರೆ ಆಗುವುದಿಲ್ಲ ಎಂದು ಸುನೀಲ ನಾಯ್ಕ ಕ್ಷಮೆ ಕೇಳಿದ್ದಾರೆ ಎಂದು ಗೋವಿಂದ ನಾಯ್ಕ ಹೇಳಿದರು.
Traffic changes/ ಭಟ್ಕಳ ರಂಜಾನ್ ಪೇಟೆಯ ಹಿನ್ನೆಲೆ ರಸ್ತೆಗಳಲ್ಲಿ ಸಂಚಾರ ಬದಲಾವಣೆ
ಮಂಕಾಳ ವೈದ್ಯ ಅವರು ಹೇಳಿದಂತೆ ಈ ಯೋಜನೆಯು ರಾಜ್ಯ ಮತ್ತು ಕೇಂದ್ರದ ಸರಕಾರದ ಜಂಟಿ ಯೋಜನೆ. ಇದಕ್ಕೆ ಸಂಸದ ಕಾಗೇರಿ ಅವರೊಂದಿಗೆ ನಾವು ದೆಹಲಿಗೆ ಹೋಗಿ ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ಸಚಿವ ವೈದ್ಯ ಅವರು ತಿಳಿಸಿದ್ದಾರೆ. ಕೇಂದ್ರದ ೧೩ ಇಲಾಖೆಯ ಒಪ್ಪಿಗೆ ಅವಶ್ಯಕತೆ ಇದೆ. ಕೇಂದ್ರದ ಸಂಸದರನ್ನೊಳಗೊಂಡಂತೆ ಮಾಸ್ತಪ್ಪ ನಾಯ್ಕ ಅವರು ಹೋಗಿ, ಇದರ ವಿಚಾರ ಅಧ್ಯಯನ ಮಾಡಿ ಹೋರಾಟ ಮಾಡಲಿ. ಅದನ್ನು ಬಿಟ್ಟು ಸುಳ್ಳು ಹೇಳಬೇಡಿ ಎಂದರು.
MDS exam/ ದಂತ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಭಟ್ಕಳದ ಯುವಕಗೆ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್ಯಾಂಕ್
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ‘ಸುಳ್ಳು ಹೇಳಲು ಹೋಗಿ ಜನರಿಂದ ಚಪ್ಪಾಳೆ ಗಿಟ್ಟಿಸಲು ಹೋಗಿ ವೇದಿಕೆಯಲ್ಲಿ ಮಾಸ್ತಪ್ಪ ನಾಯ್ಕ ಅವರು ಮಾತನಾಡಿರುವುದು ಕಾಣಿಸುತ್ತದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗದಿದ್ದರೆ ಅದಕ್ಕೆ ನಿಮ್ಮ ಹೋರಾಟ ಇರಲಿ. ಅದನ್ನು ಬಿಟ್ಟು ತೇಜೋವಧೆ ಹಾಗೂ ನಕಲಿ ಪೇಸ್ಬುಕ್ ಖಾತೆಯಲ್ಲಿ ಹೆಣ್ಣಿನ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಇದೇ ಮುಂದುವರೆದಲ್ಲಿ ಮುಂದೆ ಜನರು ಕಾನೂನು ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ ತೇಜು ನಾಯ್ಕ ವಂದನಾ ಪೂಜಾರಿ ಎಂಬ ಹೆಸರಿನಲ್ಲಿ ನಕಲಿ ಖಾತೆ ಮಾಡಿದವರನ್ನು ಬಂಧಿಸಲಾಗಿದೆ ಎಂದರು.
Annual General Meeting/ ನಿವೃತ್ತ ಸರಕಾರಿ ನೌಕರರ ಸಂಘದ “ವಾರ್ಷಿಕ ಮಹಾಸಭೆ”
ನಕಲಿ ಪೇಸ್ಬುಕ್ ಖಾತೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಸಾಲು ಸಾಲು ನಕಲಿ ಫೇಸ್ಬುಕ್ ಖಾತೆಯ ವಿರುದ್ದ ಪೋಲಿಸ್ ಇಲಾಖೆ ತನಿಖೆ ನಡೆಸುತ್ತಿದೆ. ಪ್ರಕರಣವೊಂದರಲ್ಲಿ ಎ೧ ಪುರಂದರ ಎ೨ ಯಾರು ಎನ್ನುವುದು ಸದ್ಯದಲ್ಲೇ ತಿಳಿಯಲಿದೆ ಎಂದರು.
Ramadan stalls/ ೩೬ ರಂಜಾನ್ ಮಳಿಗೆಗೆ ೧೩೫೯ ಅರ್ಜಿ: ಲಾಟರಿ ಮೂಲಕ ಹಂಚಿಕೆ
ಭಟ್ಕಳ ಮಹಿಳಾ ಬ್ಲಾಕ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ ಮಾತನಾಡಿ ‘ಮಹಿಳೆಯರ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಹಿಂದಿನಿಂದಲೂ ಮಹಿಳೆಗೆ ಗೌರವ ಇದೆ. ಸರಕಾರ 50% ಮೀಸಲಾತಿ ನೀಡಿದ್ದರು ಸಹ ನಮಗೆ ಕಷ್ಟವಾಗಿದೆ. ರಾಜಕೀಯವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಮಹಿಳೆಯರ ವಿಚಾರದಲ್ಲಿ ಬೇಡ. ಮತ್ಸ್ಯ ಮೇಳ, ಶಿವರಾತ್ರಿ ಜಾಗರಣೆ, ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಮಹಿಳೆಯರ ತೇಜೋವಧೆ ಮಾಡಿದ್ದಾರೆ. ಹೀಗಾದರೆ ನಾವು ಹೇಗೆ ಮನೆಯಿಂದ ಹೊರಗಡೆ ಬರಬೇಕು. ನಮ್ಮ ಸಹೋದರಿ ಭರತನಾಟ್ಯ ಮಾಡಿದ ವಿಡಿಯೋವನ್ನು ಸಹ ಕೆಟ್ಟದಾಗಿ ಬಳಸಿಕೊಂಡು ವಿಡಿಯೋ ಮಾಡಿದ್ದಾರೆ. ಹಳೆ ವಿಡಿಯೋ ಮಾಡಿ ಬೀನಾ ವೈದ್ಯ ಮನೆಯಲ್ಲಿನ ಚಿನ್ನ ಬೆಳ್ಳಿ ಕಳ್ಳತನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇವೆಲ್ಲವನ್ನು ನಿಲ್ಲಿಸಿ ಎಂದರು.
Woman hit by bike/ ಕಡವೆ ತಪ್ಪಿಸಲು ಹೋಗಿ ಮಹಿಳೆಗೆ ಬೈಕ್ ಡಿಕ್ಕಿ
ಮಂಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ನಾಯ್ಕ ಮಾತನಾಡಿ ‘ಬುದ್ದಿವಂತ ಮತದಾರರ ಕ್ಷೇತ್ರ ಭಟ್ಕಳ- ಹೊನ್ನಾವರ ಆಗಿದೆ. ಆದರೆ ಇಂತಹ ವ್ಯಕ್ತಿಗಳಿಂದ ಕೆಟ್ಟ ಹೆಸರು ಮಹಿಳೆಯರು ಸಾಮಾಜಿಕ ಜಾಲತಾಣ ಬಳಸದಂತೆ ಆಗಿದೆ. ನಿಮಗೆ ಹೆಣ್ಣು ಮಕ್ಕಳೇ ಬುದ್ದಿ ಕಲಿಸಲಿದ್ದಾರೆ ಎಂದರು.
arrested/ ಅಕ್ರಮವಾಗಿ ಜಾನುವಾರು ಸಾಗಣೆ: ಮುಟ್ಟಳ್ಳಿ ಯುವಕ ವಶಕ್ಕೆ
ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಕಾಂಗ್ರೆಸ್ ಪ್ರಮುಖರಾದ ವಾಮನ ನಾಯ್ಕ, ರಾಜು ನಾಯ್ಕ, ಮಂಜುನಾಥ ನಾಯ್ಕ, ಸುಧಾಕರ ನಾಯ್ಕ, ಅಣ್ಣಪ್ಪ ನಾಯ್ಕ ಮಂಕಿ ಮುಂತಾದವರು ಇದ್ದರು.


