ಭಟ್ಕಳ: ತಾಲೂಕಿನ ಮುಂಡಳ್ಳಿ ಮೊಗೇರಕೇರಿಯ ಶ್ರೀ ವಲ್ಮೀಕ ನಾಗ-ಚೌಡೇಶ್ವರಿ ದೇವಸ್ಥಾನದ ೫ನೇ ವರ್ಷದ ವರ್ಧಂತಿ ಉತ್ಸವ (vardhanthi utsava) ಏಪ್ರಿಲ್ ಒಂದರಂದು ಜರುಗಲಿದೆ. ಅಂದು ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮತ್ತು ೧ ಗಂಟೆಗೆ ಮಹಾಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ೬ಕ್ಕೆ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ವರ್ಧಂತಿ ಉತ್ಸವ (vardhanthi utsava) ಕಾರ್ಯಕ್ರಮಕ್ಕೆ ಸದ್ಭಕ್ತರು ಇಷ್ಟಮಿತ್ರರೊಡಗೂಡಿ ಆಗಮಿಸಿ ತನು-ಮನ-ಧನ ಸಹಕಾರದೊಂದಿಗೆ ಈ ಮಹತ್ತರವಾದ ಸೇವತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ಕೋರಲಾಗಿದೆ.

autorickshaws/ ಭಟ್ಕಳದಲ್ಲಿ ಎಲ್‌ಪಿಜಿ ಪೂರೈಕೆ ಸ್ಥಗಿತ: ರಸ್ತೆಗಿಳಿಯದ ಆಟೋರಿಕ್ಷಾಗಳು