ಭಟ್ಕಳ: ಇಲ್ಲಿನ ಸೋನಾರಕೇರಿಯ ದೈವಜ್ಞ ಸಭಾಭವನದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (Women’s Day) ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮವನ್ನು ದೈವಜ್ಞ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ಶೇಟ ಉದ್ಘಾಟಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಳಿಯ ಅಧ್ಯಕ್ಷೆ ಪರಿಮಳ ರಾಜಶೇಖರ ಮಾತನಾಡಿ, ಮಹಿಳೆಯರು ಒಟ್ಟಾಗಿ ಸಹಕಾರ ಮನೋಭಾವದಿಂದ ಸಮಾಜವನ್ನು ಸುಂದರ ಉದ್ಯಾನವನದಂತೆ ರೂಪಿಸಬೇಕು ಎಂದರು. ಉಪಾಧ್ಯಕ್ಷೆ ವಿದ್ಯಾ ನಾಗರಾಜ ಕೊಲ್ಲೆ, ಸಮಾಜದ ಪ್ರತಿಯೊಬ್ಬರೂ ಇಂತಹ ಸಾಂಸ್ಕೃತಿಕ ಹಾಗೂ ಪ್ರೇರಣಾತ್ಮಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು. ಹಿರಿಯ ಸದಸ್ಯೆ ಪ್ರೇಮಾ ಮಾರುತಿ ಶೇಟ, ಜ್ಞಾನೇಶ್ವರಿ ಮಹಿಳಾ ಸಂಘದ ಚಟುವಟಿಕೆಗಳು ಮತ್ತು ಸಾಧನೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
PhD degree/ ಪಿಎಚ್‌ಡಿ ಪದವಿ ಸ್ವೀಕರಿಸಿದ ವಸಿಮ್ ಅಹ್ಮದ್ ಹಲ್ವೆಗರ್
ವೇದಿಕೆಯಲ್ಲಿ ಶೀಲಾ ಸುಧಾಕರ ಶೇಟ್, ಶ್ಯಾಮಲಾ ನಾಗರಾಜ ರಾಯ್ಕರ, ಖಜಾಂಜಿ ಪದ್ಮ ಉದಯ ಶೇಟ, ಜಯಲಕ್ಷ್ಮಿ ಮಂಜುನಾಥ ಶೇಟ, ಶೈಲಾ ನಾಗರಾಜ ಶೇಟ, ಸಂಧ್ಯಾ ಸುಧೀರ ಕೊಲ್ಲೆ ಹಾಗೂ ಸುವರ್ಣ ರಾಜೇಶ ರಾಯ್ಕರ ಉಪಸ್ಥಿತರಿದ್ದರು. ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲಾ ಕಾರ್ಯಕ್ರಮಗಳಲ್ಲಿ ದೀಪಾಲಂಕಾರವನ್ನು ನಿರ್ವಹಿಸುತ್ತ ಬಂದಿರುವ ಸುಪ್ರಿಯಾ ಉದಯ ಮಾನಕಾಮೆ ಮತ್ತು ಸವಿತಾ ಹರೀಶ ಕೊಲ್ಲೆ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಹಿರಿಯ ದಂಪತಿಗಳಾದ ಜಯಶ್ರೀ ಜಯಾನಂದ ಶೇಟ ಹಾಗೂ ಬೇಬಿ ಸೂರ್ಯಕಾಂತ ಶೇಟ ಅವರನ್ನು ಗೌರವಿಸಲಾಯಿತು.
Makkala Santhe/ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (Women’s Day) ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಮಹಿಳೆಯರಿಂದ ನಡೆದ ನೃತ್ಯ, ಕೋಲಾಟ, ಫ್ಯಾಶನ್ ಶೋ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಸುಪ್ರಿಯಾ ಉದಯ ಮಾನಕಾಮೆ ವರದಿ ವಾಚಿಸಿದರು. ಕಾರ್ಯಕ್ರಮ ನಿರ್ವಹಿಸಿದ ಸವಿತಾ ರತ್ನಾಕರ ಶೇಟ ಸ್ವಾಗತಿಸಿ, ವಂದಿಸಿದರು.
firewood/ ಎಲ್‌ಪಿಜಿ ಸಿಲಿಂಡರ್ ಕೊರತೆ: ಉರುವಲಿಗೆ ಹೆಚ್ಚಿದ ಬೇಡಿಕೆ
ಕಾರ್ಯಕ್ರಮದ ನಡುವೆ ಹಾಸ್ಯಭರಿತ ಪ್ರಶ್ನೆಗಳ ಮೂಲಕ ಮಹಿಳೆಯರನ್ನು ಮನರಂಜಿಸುವಲ್ಲಿ ಸಂಘಟಕರು ಯಶಸ್ವಿಯಾದರು. ಒಟ್ಟಾರೆ, ಮಹಿಳಾ ಶಕ್ತಿ, ಏಕತೆ ಮತ್ತು ಸೃಜನಶೀಲತೆಯ ಸಂಭ್ರಮವನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮ ಎಲ್ಲರ ಮನದಲ್ಲಿ ಮುದ್ರೆಯೊತ್ತಿತು.
Consumer awareness program/ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಹಕರ ಜಾಗೃತಿ ಕಾರ್ಯಕ್ರಮ



