ಭಟ್ಕಳ: ರಾಯಲ್ ಎನ್‌ಫಿಲ್ಡ್ ಬೈಕಿಗೆ  ಹಿಂಬದಿಯಿಂದ ಕಾರು ಡಿಕ್ಕಿಯಾಗಿ (car collision) ಬೈಕ್ ಸವಾರ (bike rider) ಹಣ್ಣಿನ ವ್ಯಾಪಾರಿ (fruit seller) ಗಾಯಗೊಂಡ ಘಟನೆ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಟ್ಕಳದ (Bhatkal) ಗುಳ್ಮಿ ಬಿಲಾಲಖಂಡದ ನಿವಾಸಿ, ಹಣ್ಣಿನ ವ್ಯಾಪಾರಿ ಮಹ್ಮದ್ ರಫೀಕ್ ಶೇಖ್ ತಂದೆ ಇಬ್ರಾಹಿಂ ದಸ್ತಗೀರ್ ಶೇಖ್ (೩೭) ಗಾಯಗೊಂಡವರು. ಕಾರು ಚಾಲಕ ಬಂದರ್ ರಸ್ತೆಯ ಇಮಾದುಲ್ಲಾ ಜೈಲಾನಿ ಗವಾಯಿ (೫೦) ವಿರುದ್ಧ ದೂರು ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಏ ೧ರಂದು ಸಂಜೆ ೫.೩೦ರ ಸುಮಾರಿಗೆ ಸಾಗರ ರಸ್ತೆಯ ಅಮಿತಾ ಹಾಸ್ಪಿಟಲ್ ಕ್ರಾಸ್ ಹತ್ತಿರ ಸಂಶುದ್ದಿನ್ ವೃತ್ತದ ಕಡೆಯಿಂದ ಸಾಗರ ರಸ್ತೆಯ ಕಡೆಗೆ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಾಲಕ ಕಾರು ಚಲಾಯಿಸಿಕೊಂಡು ಬಂದು ಒಮ್ಮೇಲೆ ಕಾರನ್ನು ಬಲಕ್ಕೆ ತಿರುಗಿಸಿದ್ದರಿಂದ ಅದೇ ಮಾರ್ಗವಾಗಿ ತನ್ನ ಮುಂದೆ ಹೋಗುತ್ತಿದ್ದ ರಾಯಲ್ ಎನ್‌ಫಿಲ್ಡ್ ಬೈಕಿಗೆ ಕಾರು ಡಿಕ್ಕಿ ಹೊಡೆದಿದೆ. ಬೈಕ್ ಸವಾರ ರಸ್ತೆ ಮೇಲೆ ಬಿದ್ದು ಕೈಗೆ ಮತ್ತು ಕಾಲಿಗೆ ಪೆಟ್ಟು ತಗುಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Case filed/ ಆಟೋ ಚಾಲಕನಿಂದ ಟಿಪ್ಪರ್ ಚಾಲಕನ ಮೇಲೆ ಹಲ್ಲೆ