ಭಟ್ಕಳ: ತಾಲೂಕಿನ ಜಾಲಿ ಸಮುದ್ರ ತೀರದಲ್ಲಿ (beach) ಮೀನುಗಾರಿಕೆಗೆ (fishing) ತೆರಳಿದ್ದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮೃತರನ್ನು ಜಾಲಿ ಬೀಚ್ ರೋಡ್ ನಿವಾಸಿಯಾದ ಈರಯ್ಯ ತಂದೆ ಮಾಸ್ತಪ್ಪ ಮೊಗೇರ (೬೫) ಎಂದು ಗುರುತಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಾಹಿತಿಯ ಪ್ರಕಾರ, ಅವರು ಎಂದಿನಂತೆ ಮೀನುಗಾರಿಕೆಗೆ (fishing) ತೆರಳಿದ್ದ ವೇಳೆ ಅನಾಹುತವಾಗಿ ಸಮುದ್ರದಲ್ಲಿ ಮುಳುಗಿದರೆಂದು ತಿಳಿದುಬಂದಿದೆ. ಈ ಕುರಿತು ಮೃತರ ಪುತ್ರ ಮನೋಹರ ಮೊಗೇರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

football tournament/ ಎಐಟಿಎಂನಲ್ಲಿ ವಿಟಿಯು ಅಂತರ-ಕಾಲೇಜು ಮಂಗಳೂರು ವಿಭಾಗ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ