ಭಟ್ಕಳ: ನಗರದ ಕಿದ್ವಾಯಿ ರಸ್ತೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಭಟ್ಕಳ (Bhatkal) ನಗರ ಪೊಲೀಸರು ಯಶಸ್ವಿಯಾಗಿದ್ದು, ₹೪.೫೦ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹೨೦ ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ (arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೇ ೮ರಂದು ಕಿದ್ವಾಯಿ ರಸ್ತೆಯ ೧ನೇ ಕ್ರಾಸ್ ನಿವಾಸಿ ನಾಹಿದ್ ಅಕ್ತರ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ದುಷ್ಕರ್ಮಿಗಳು ಮನೆಯ ಹಿಂಭಾಗದ ಕಿಟಕಿಯ ಗಾಜು ಒಡೆದು ಒಳನುಗ್ಗಿ ೫೫ ಗ್ರಾಂ ತೂಕದ ಸುಮಾರು ₹೫.೫೦ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹೧೦ ಸಾವಿರ ನಗದು ಕಳವು ಮಾಡಿದ್ದರು. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

accident/ ಬೆಂಗಳೂರು ಅಪಘಾತದಲ್ಲಿ ಭಟ್ಕಳದ ಯುವತಿ ದುರ್ಮರಣ

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಭಟ್ಕಳದ ಬದ್ರಿಯಾ ಕಾಲೋನಿ ನಿವಾಸಿ, ೨೧ ವರ್ಷದ ಫೌಜಾನ್ ಅಹ್ಮದ್‌ನನ್ನು ಬಂಧಿಸಿ (arrested) ವಿಚಾರಣೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣವನ್ನು ಬೆಂಗಳೂರಿನ (Bengaluru) ಕೆ ಆರ್ ರಸ್ತೆಯ ಮಣಪ್ಪುರಂ ಫೈನಾನ್ಸ್ (Manappuram finance) ಶಾಖೆಯಲ್ಲಿ ಗಿರವಿ ಇಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ೨೯.೦೧ ಗ್ರಾಂ ತೂಕದ ₹೪.೫೦ ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ₹೨೦ ಸಾವಿರ ರೂ ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

educational materials/ ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಣೆ 

ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ಅಧೀಕ್ಷಕ (SP)ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಕೃಷ್ಣಮೂರ್ತಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ, ಡಿವೈಎಸ್ಪಿ (DySP) ಗಿರೀಶ್ ಬಿ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ ಪಿ ಎಂ ನೇತೃತ್ವದಲ್ಲಿ ಪಿಎಸ್‌ಐ ನವೀನ ಎಸ್ ನಾಯ್ಕ ಹಾಗೂ ಸಿಬ್ಬಂದಿ ದಿನೇಶ ನಾಯ್ಕ, ಸತೀಶ ಭಟ್ಟ, ರವಿ ಪಟಗಾರ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗುಣಶಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Talent award/ ಎಸ್ ಎಸ್ ಎಲ್ ಸಿ, ಪಿ ಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ