ಭಟ್ಕಳ: ರಾಜ್ಯದಾದ್ಯಂತ ಸರ್ಕಾರಿ ಕನ್ನಡ ಶಾಲೆಗಳು (Government School) ವಿದ್ಯಾರ್ಥಿಗಳ ಕೊರತೆಯಿಂದ ಒಂದೊಂದಾಗಿ ಮುಚ್ಚುತ್ತಿರುವ ಕಾಲಘಟ್ಟದಲ್ಲಿ, ಭಟ್ಕಳದ (Bhatkal) ರಥಬೀದಿಯಲ್ಲಿರುವ ೧೬೩ ವರ್ಷಗಳ ಇತಿಹಾಸ ಹೊಂದಿದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ (Government School) ಹೊಸ ಚೈತನ್ಯದೊಂದಿಗೆ ಮುನ್ನಡೆಯುತ್ತಿದೆ. ಇದಕ್ಕೆ ಕಾರಣವಾಗಿರುವುದು ಶಾಲೆಯ ಹಳೆ ವಿದ್ಯಾರ್ಥಿಗಳ ಅಪೂರ್ವ ಕಾಳಜಿ ಮತ್ತು ತವರು ಶಾಲೆಯ ಮೇಲಿನ ಅಭಿಮಾನ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಲಿತ ಶಾಲೆಯ ಋಣ ತೀರಿಸಬೇಕೆಂಬ ಸಂಕಲ್ಪದೊಂದಿಗೆ ಒಂದಾದ ಹಳೆಯ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿ ಶಾಲೆಯ ಸಮಗ್ರ ಅಭಿವೃದ್ಧಿಯ ಹೊಣೆ ಹೊತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೂ ಮುಂದಾಗಿದ್ದಾರೆ.
AB-RK project/ ಎಬಿ-ಆರ್ಕೆ ಯೋಜನೆಯ ಪ್ರಗತಿಯಲ್ಲಿ ಭಟ್ಕಳ ಆಸ್ಪತ್ರೆ ಜಿಲ್ಲೆಗೆ ಪ್ರಥಮ
ಪ್ರಸ್ತುತ ಶಾಲೆಯಲ್ಲಿ ೧೧೧ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ದಾಖಲಾತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಗಮನಾರ್ಹ. ಈಗಿರುವ ನಾಲ್ಕು ಕೊಠಡಿಗಳು ಸಾಲದ ಕಾರಣ ಅಂದಾಜು ರೂ ೪೦ ಲಕ್ಷ ವೆಚ್ಚದಲ್ಲಿ ೧೬೦೦ ಚದರ ಅಡಿ ವಿಸ್ತೀರ್ಣದಲ್ಲಿ ಮೂರು ನೂತನ ತರಗತಿ ಕೊಠಡಿಗಳು, ಒಂದು ಸಭಾಂಗಣ ಹಾಗೂ ಸುಸಜ್ಜಿತ ಅಡುಗೆ ಕೋಣೆ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ದಾನಿಗಳು ಹಾಗೂ ಸಂಘ-ಸಂಸ್ಥೆಗಳ ನೆರವಿನ ನಿರೀಕ್ಷೆಯಿದೆ.
Various problems/ ಆಜಾದ್ ನಗರದಲ್ಲಿ ನಾನಾ ಸಮಸ್ಯೆ: ಏಳನೇ ಕ್ರಾಸ್ ನಿವಾಸಿಗಳ ಪರದಾಟ
ಎಸ್‌ಡಿಎಂಸಿ (SDMC) ಅಧ್ಯಕ್ಷ ರಾಮಚಂದ್ರ ದೇವಾಡಿಗ, ಉಪಾಧ್ಯಕ್ಷೆ ಪಾರ್ವತಿ ನಾಯ್ಕ, ಮುಖ್ಯಾಧ್ಯಾಪಕ ಜನಾರ್ಧನ ಮೊಗೇರ ಸಹಯೋಗದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಯಂತ ಬಡಾಳ, ಉಪಾಧ್ಯಕ್ಷ ಶಾಂತರಾಮ ಭಟ್ಕಳ, ಕಾರ್ಯದರ್ಶಿ ಸಂಜಯ ಗುಡಿಗಾರ, ಖಜಾಂಚಿ ವಿನೋದ ಭಟ್ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಹಿರಿಯ ಹಳೆ ವಿದ್ಯಾರ್ಥಿಯಾಗಿರುವ ದಂತ ವೈದ್ಯ ಡಾ ರವಿ ಅಧ್ಯಕ್ಷತೆಯಲ್ಲಿ ಕಟ್ಟಡ ನಿರ್ಮಾಣ ಸಮಿತಿಯನ್ನೂ ರಚಿಸಲಾಗಿದೆ. ರಾಮದಾಸ ಪ್ರಭು ಗೌರವಾಧ್ಯಕ್ಷರಾಗಿದ್ದು, ನಾಗೇಶ ಪೈ, ಕಿರಣ ಶ್ಯಾನಭಾಗ, ಕಿರಣ ಚಂದಾವರ, ಪರಮೇಶ್ವರ ನಾಯ್ಕ, ಸುಭಾಷ ಶೆಟ್ಟಿ ಹಾಗೂ ವಕೀಲ ನಾಗೇಶ ಗದ್ದೆಮನೆ ಸೇರಿದಂತೆ ಹಲವರು ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಶಾಶ್ವತ ನಿಧಿಯನ್ನೂ ಸ್ಥಾಪಿಸಲಾಗಿದೆ.
RNSPU College/ ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರಂಭ
ಶಾಲೆಯಲ್ಲಿ ಈಗಾಗಲೇ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ನೋಟ್‌ಪುಸ್ತಕಗಳು, ಸ್ಪೋಕನ್ ಇಂಗ್ಲಿಷ್ ತರಬೇತಿ, ಬೆಂಚ್-ಡೆಸ್ಕ್, ಮೇಜು-ಕುರ್ಚಿ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸುಸಜ್ಜಿತ ಬಿಸಿಯೂಟದ ಕೊಠಡಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
Coaching/ ಸಿಎ ಫೌಂಡೇಶನ್, ಸಿಎಸ್ ಪ್ರವೇಶ ಪರೀಕ್ಷೆ ತರಬೇತಿ ಉದ್ಘಾಟನೆ
ಸರ್ಕಾರಿ ಕನ್ನಡ ಶಾಲೆಗಳ ಉಳಿವಿನ ಕುರಿತು ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ಹಳೆಯ ವಿದ್ಯಾರ್ಥಿಗಳ ಸಂಘದ ಈ ಪ್ರಯತ್ನ ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗದೆ, ಸರ್ಕಾರಿ ಶಾಲೆಗಳ ಮೇಲಿನ ಸಮಾಜದ ವಿಶ್ವಾಸವನ್ನು ಮತ್ತೊಮ್ಮೆ ಬಲಪಡಿಸುವ ಮಾದರಿಯಾಗಿದೆ. ತಾವು ಕಲಿತ ಶಾಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪವಿದ್ದರೆ ಸರ್ಕಾರಿ ಶಾಲೆಗಳಿಗೂ ಹೊಸ ಭವಿಷ್ಯ ನಿರ್ಮಿಸಬಹುದು ಎಂಬುದನ್ನು ಭಟ್ಕಳದ (Bhatkal) ಈ ಹಳೆಯ ವಿದ್ಯಾರ್ಥಿಗಳ ತಂಡ ಕಾರ್ಯರೂಪದಲ್ಲಿ ತೋರಿಸಿದೆ.
Commando/ ೧೭ ವರ್ಷ ದೇಶಸೇವೆ ಬಳಿಕ ತವರಿಗೆ ಕಮಾಂಡೋ ವಾಪಸ್: ಯಾರಿವರು ಗೊತ್ತಾ?


