ಭಟ್ಕಳ: ಪರವಾನಗಿ ಇಲ್ಲದೆ ೧೧ ಜಾನುವಾರುಗಳನ್ನು ಅಮಾನವೀಯವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ (Illegal cattle transport) ಆರೋಪದಡಿ ನಾಲ್ವರನ್ನು ಭಟ್ಕಳ (Bhatkal) ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, ಜಾನುವಾರುಗಳನ್ನು ರಕ್ಷಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತರು ಭಟ್ಕಳದ ಕೋಕ್ತಿ ನಗರದ ಮೊಹಮ್ಮದ್ ಔಫ್ ಅಬು ಮೊಹಮ್ಮದ್ ಹೈದರ, ಗುಜರಾತ್ ರಾಜ್ಯದ ಬೋಟಾಡ ಜಿಲ್ಲೆಯ ವಿಜಯಬಾಯ್ ಜನಕಬಾಯ್ ಮಕ್ಕಾನ, ತೇಜಾಬಾಯ್ ಸಾಜನಬಾಯ್ ಶಿಯಾಲಿಯಾ ಹಾಗೂ ದಿಲೀಪ್‌ಬಾಯ್ ನಾರ್ದಬಾಯ್ ರಾಠೋಡ್ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಇಚರ್ ಕಂಪನಿಯ ಲಾರಿಯಲ್ಲಿ ಸುಮಾರು ₹೪.೬೦ ಲಕ್ಷ ಮೌಲ್ಯದ ೧೧ ಜಾನುವಾರುಗಳನ್ನು ಯಾವುದೇ ಪರವಾನಗಿ ಪಡೆಯದೆ ಸಾಗಿಸುತ್ತಿದ್ದರು (Illegal cattle transport).

World Devadiga Convention/ ವಿಶ್ವ ದೇವಡಿಗ ಸಮಾವೇಶ: ಭಟ್ಕಳದಲ್ಲಿ ಪೂರ್ವಭಾವಿ ಸಭೆ

ಜಾನುವಾರುಗಳನ್ನು ಒಂದಕ್ಕೊಂದು ಬಿಗಿಯಾಗಿ ಕಟ್ಟಿ, ನೀರು ಮತ್ತು ಮೇವು ನೀಡದೆ ಅಮಾನವೀಯವಾಗಿ ಸಾಗಿಸಲಾಗುತ್ತಿತ್ತು. ಅವುಗಳನ್ನು ವಧೆ ಮಾಡುವ ಉದ್ದೇಶದಿಂದ ಮುರ್ಡೇಶ್ವರ (Murdeshwar) ಕಡೆಯಿಂದ ಭಟ್ಕಳದತ್ತ ಕರೆದೊಯ್ಯಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಲಾರಿಯನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಬಳಿಕ ಜಾನುವಾರುಗಳನ್ನು ರಕ್ಷಿಸಿ, ಲಾರಿಯನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಲಾಯಿತು.

Religious programs/ ಕಿತ್ರೆ ದೇವಿಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ 

ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪಿಎಸ್ಐ ಭರಮಪ್ಪ ಬೆಳಗಲಿ ಮುಂದುವರಿಸಿದ್ದಾರೆ. ಜಾನುವಾರುಗಳ ಸಾಗಾಟದ ಮೂಲ ಹಾಗೂ ಇದರ ಹಿಂದಿರುವ ಜಾಲದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಪೋಲಿಸ್ ಸಿಬ್ಬಂದಿಯಾದ ವಿನೋದಕುಮಾರ್, ಸಂತೋಷ ನಾಯ್ಕ, ಕಿರಣ ತಿಳಗಂಜಿ, ಮಂಜುನಾಥ ಸಿ ಖಾರ್ವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Karate Competition/ ತುಷಾರ ಮಹಾಲೆ ಸಹಿತ ೧೬ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ