ಭಟ್ಕಳ: ಮಾರಿಜಾತ್ರೆ (Mari jatre) ಹಿನ್ನೆಲೆ ಮಾರಿಯಮ್ಮನ ಮೂರ್ತಿ (Mari Idol) ತಯಾರಿಕೆಗೆ ಚಾಲನೆ ದೊರೆತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಮುಂಡಳ್ಳಿಯ ಹೊನ್ನಯ್ಯನಮನೆ ಕುಟುಂಬದವರ ಜಮೀನಿನಲ್ಲಿರುವ ಅಮಟೆ ಮರಕ್ಕೆ ವಿಶ್ವಕರ್ಮ ಸಮಾಜದ ಕುಟುಂಬದ ಸದಸ್ಯರಿಂದ ಮಂಗಳವಾರ ಜು ೨೮ರಂದು ಮರಕ್ಕೆ ಕಂಪು ಹಾಕಲಾಯಿತು. ತನ್ಮೂಲಕ ಮರವನ್ನು ಧಾರ್ಮಿಕ ವಿಧಿವಿಧಾನಗಳಿಂದ ಕಡಿಯಲಾಯಿತು. ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು, ಹೊನ್ನಯ್ಯನಮನೆ ಕುಟುಂಬದವರು, ಭಕ್ತರು ಉಪಸ್ಥಿತರಿದ್ದರು.

Chaturmasya/ ಬೈಂದೂರಿನಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮಿ ಚಾತುರ್ಮಾಸ್ಯ

ಶ್ರೀದೇವಿಯ ಪೂರ್ವ ಬಿಂಬ ರೂಪವನ್ನು ಜುಲೈ ೩೧ರವರೆಗೆ ಇದೇ ಜಾಗದಲ್ಲಿ ಕೆತ್ತನೆ ಮಾಡಲಾಗುತ್ತದೆ. ನಂತರ ಮಾರಿಯ ತವರುಮನೆ ಎಂದೇ ಕರೆಯುವ ಮಣ್ಕುಳಿಯ ಆಚರಿಮನೆಯಲ್ಲಿರುವ ಮಾರಿ ಗದ್ದುಗೆಗೆ ತೆಗೆದುಕೊಂಡು ಬರಲಾಗುತ್ತದೆ. ಅಲ್ಲಿಂದ‌ ಆ ೪ರವರೆಗೆ ದೇಹದ ಅಂಗಾಗಗಳನ್ನು ರಚಿಸಿ ಪೂರ್ಣಗೊಳಿಸಲಾಗುತ್ತದೆ. ಮರುದಿನದಿಂದ ಎರಡು ದಿನಗಳ ಕಾಲ ಮಾರಿ ಜಾತ್ರೆ (Mari jatre) ನಡೆಯಲಿದೆ.

condolences/ ಮೃತರ ಮನೆಗೆ ಸಂತಾಪ ಸೂಚಿಸಲು ತೆರಳಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್!