ಭಟ್ಕಳ: “ಸಮಾಜ ಸೇವೆಯೇ ರೋಟರಿಯ(Rotary) ಮೂಲ ಧ್ಯೇಯವಾಗಿದ್ದು ಶಿಕ್ಷಣ , ಆರೋಗ್ಯ, ಪರಿಸರ ಸಂರಕ್ಷಣೆ, ಯುವಜನ ಹಾಗು ಮಹಿಳಾ ಸಬಲೀಕರಣ, ವಿಪತ್ತು ಪರಿಹಾರ ಮತ್ತು ಸಮುದಾಯದ ಸಮಗ್ರ ಅಭಿವೃದ್ಧಿಗೆ ರೋಟರಿ (Rotary) ನಿರಂತರವಾಗಿ ಸೇವಾ ಕಾರ್ಯ ಕೈಗೊಳ್ಳುತ್ತಿದೆ” ಎಂದು ರೋಟರಿಯ ಮೆಡಿಕಲ್ ಕ್ಯಾಂಪ್ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ಡಾ ದಿನೇಶ ಹೆಗಡೆ ಹೇಳಿದರು. ನಗರದ ಅಮೀನಾ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿದ ೨೦೨೬-೨೭ನೇ ಸಾಲಿನ ರೋಟರಿ ಮತ್ತು ಇಂಟರಾಕ್ಟ್ ಕ್ಲಬ್‌ಗಳ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರೋಟರಿ ಜಿಲ್ಲೆ ೩೧೭೦ ಉಪ ಗವರ್ನರ್ ಜೈವಿಠಲ ಕುಬಾಲ ಮಾತನಾಡಿ, “ಮುಂಬರುವ ರೋಟರಿ ವರ್ಷವೂ ಅರ್ಥಪೂರ್ಣ ಸೇವಾ ಯೋಜನೆಗಳು, ಸಮಾಜಮುಖಿ ಕಾರ್ಯಗಳು ಮತ್ತು ಜನೋಪಯೋಗಿ ಸಾಧನೆಗಳಿಂದ ಯಶಸ್ವಿಯಾಗಲಿ” ಎಂದು ಹಾರೈಸಿದರು.
Mari jatre/ ಅಮಟೆ ಮರಕ್ಕೆ ಕಂಪು; ಮಾರಿ ಮೂರ್ತಿ ತಯಾರಿಕೆಗೆ ಚಾಲನೆ
ಈ ಸಂಧರ್ಭದಲ್ಲಿ ಶೈಕ್ಷಣಿಕ ವರ್ಷ ೨೦೨೫-೨೬ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ (SSLC exam) ಶೇಕಡಾ ೯೯.೩೬ ಅಂಕಗಳಿಸಿದ ತೆರ್ನಮಕ್ಕಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸಾನಿಕಾ ಬೈಲೂರು ಅವರಿಗೆ ಶ್ರೀ ಎಂ ಎ ಘನಿ ಸ್ಮಾರಕ ವಿದ್ಯಾರ್ಥಿ ವೇತನ ಮತ್ತು ಶಾಲೆಗೆ ಶ್ರೀ ಜಯರಾಮ್ ಕೊಲ್ಲೆ ಸ್ಮಾರಕ ರೋಲಿಂಗ್ ಟ್ರೋಫಿ ನೀಡಿ ಗೌರವಿಸಲಾಯಿತು. ವೃತ್ತಿಪರ ಕ್ಷೇತ್ರದ ಸಾಧನೆಗಾಗಿ ಪತ್ರಿಕೆ ವಿತರಕರಾದ ಫ್ರಾನ್ಸಿಸ್ ಡಿಸೋಜಾ, ಹೆಸ್ಕಾಂ ಲೈನ್ ಮ್ಯಾನ್ ಗೊಯ್ದ ಸಣ್ಣು ಗೊಂಡ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕದಲ್ಲಿ ನಿರಂತರ ಆರೋಗ್ಯ ಕ್ಷೇತ್ರದ ಸೇವೆಗಾಗಿ ಭಾಸ್ಕರ ನಾಯ್ಕ ಮತ್ತು ಭವಾನಿ ರಘು ಶೆಟ್ಟಿ ಅವರಿಗೆ ೨೦೨೬-೨೭ನೇ ಸಾಲಿನ ರೋಟರಿ ವೊಕೇಶನಲ್ ಪ್ರಶಸ್ತಿ (Vocational award) ನೀಡಿ ಗೌರವಿಸಲಾಯಿತು. ಇದರ ಜೊತೆಗೆ ದಿವ್ಯಾಂಗರಿಗೆ ಪ್ರೇರಣೆಯಾಗಿರುವ ಸಂಗೀತ ಕ್ಷೇತ್ರದ ಸಾಧಕ ವಿಶೇಷ ವಿದ್ಯಾರ್ಥಿ ಶಾಯಲ್ ಗೋಮ್ಸ್ ಅವರನ್ನು ಸನ್ಮಾನಿಸಲಾಯಿತು ಮತ್ತು ನೂತನ ಸದಸ್ಯರನ್ನು ಬರಮಾಡಿಕೊಳ್ಳಲಾಯಿತು.
Chaturmasya/ ಬೈಂದೂರಿನಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮಿ ಚಾತುರ್ಮಾಸ್ಯ
ರೋಟರಿ ನಿಕಟಪೂರ್ವ ಅಧ್ಯಕ್ಷ ಶಾಖಿರ್ ಹುಸೈನ್ ತಾಹಿರ್ ಸ್ವಾಗತಿಸಿದರು. ರೋಟರಾಕ್ಟ್ ಭಟ್ಕಳ ನಿಕಟಪೂರ್ವ ಅಧ್ಯಕ್ಷೆ ನೇಹಾ ನಿರೂಪಿಸಿದರು. ರೋಟರಿ ನಿಕಟಪೂರ್ವ ಕಾರ್ಯದರ್ಶಿ ಮಿಸ್ಬಾ ಉಲ್ ಹಕ್ ಶೇಖೋಮರ್ ೨೦೨೫-೨೬ನೇ ಸಾಲಿನ ರೋಟರಿ ಚಟುವಟಿಕೆಗಳ ಕುರಿತು ವಾರ್ಷಿಕ ವರದಿ ವಾಚಿಸಿದರು. ರೋಟರಿ ಕಾರ್ಯದರ್ಶಿ ಅನಂ ಅಲಾ ವಂದಿಸಿದರು. ಭಟ್ಕಳ (Bhatkal) ತಾಲೂಕಿನ ವಿವಿಧ ರೋಟರಿ, ರೋಟರಾಕ್ಟ್, ಇಂಟರಾಕ್ಟ್ ಕ್ಲಬ್ ಸದಸ್ಯರು ಮತ್ತು ಸಂಯೋಜಕರು ಉಪಸ್ಥಿತರಿದ್ದರು. ೨೦೨೬-೨೭ನೇ ಸಾಲಿನ ರೋಟರಿ ಕ್ಲಬ್ ಅಧ್ಯಕ್ಷರಾಗಿ ಶ್ರೀನಾಥ ಪೈ, ಕಾರ್ಯದರ್ಶಿಯಾಗಿ ಅನಂ ಅಲಾ ಮತ್ತು ಖಜಾಂಚಿಯಾಗಿ ಮೊಹಮ್ಮದ್ ತಲಾ ಶೇಖ್ ಅಧಿಕಾರ ವಹಿಸಿಕೊಂಡರು.
condolences/ ಮೃತರ ಮನೆಗೆ ಸಂತಾಪ ಸೂಚಿಸಲು ತೆರಳಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್!

