ಭಟ್ಕಳ: ಬೈಂದೂರು (Byndoor) ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಏಳನೇ ವರ್ಷದ ಚಾತುರ್ಮಾಸ್ಯ (Chaturmasya) ವ್ರತಾಚರಣೆ ಜುಲೈ ೨೯ರಿಂದ ಸೆ ೧೪ರವರೆಗೆ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿ (Brahmanand Saraswati Swami) ಕೈಗೊಳ್ಳಲಿದ್ದಾರೆ ಎಂದು ಶ್ರೀರಾಮ ಸೇವಾಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಟ್ಟಣದ ಆಸರಕೇರಿ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಚಾತುರ್ಮಾಸ್ಯ (Chaturmasya) ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬೆಳಿಗ್ಗೆ ೭ರಿಂದ ೯ ಗಂಟೆಯವರೆಗೆ ಚಾತುರ್ಮಾಸ್ಯ ವ್ರತ ಸಂಕಲ್ಪದ ಅಂಗವಾಗಿ ರಾಮತಾರಕ ಯಜ್ಞ ನಡೆಯಲಿದೆ. ಬಳಿಕ ಬೆಳಿಗ್ಗೆ ೧೦ ಗಂಟೆಗೆ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಶ್ರೀಗಳ ಪುರಪ್ರವೇಶ ಮೆರವಣಿಗೆ ನಡೆಯಲಿದೆ. ಪೂರ್ವಾಹ್ನ ೧೧.೦೫ರ ಶುಭ ಮುಹೂರ್ತದಲ್ಲಿ ಶ್ರೀಗಳ ವ್ಯಾಸಪೀಠದ ಪಿತಾರೋಹಣದ ಜೊತೆ ಪೀಠವನ್ನು ಅಲಂಕರಿಸಲಿದ್ದಾರೆ ಎಂದು ಹೇಳಿದರು.
condolences/ ಮೃತರ ಮನೆಗೆ ಸಂತಾಪ ಸೂಚಿಸಲು ತೆರಳಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್!
ತದನಂತರ ಗುರುಪಾದುಕಾ ಪೂಜೆ, ಆಶೀರ್ವಚನ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮಗಳು ಜರುಗಲಿವೆ. ಚಾತುರ್ಮಾಸ್ಯದ ಪರ್ವ ಕಾಲದಲ್ಲಿ ಪ್ರತಿದಿನ ಭಜನಾ ಕಾರ್ಯಕ್ರಮ, ಗುರುಪಾದುಕ ಪೂಜೆ ಹಾಗೂ ಆಶೀರ್ವಚನದ ಜೊತೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದರು. ಪ್ರತಿ ಅಮಾವಾಸ್ಯೆ, ಹುಣ್ಣಿಮೆ ಹಾಗೂ ಏಕಾದಶಿಯಂದು ಶ್ರೀಗಳು ಮೌನ ವ್ರತದಲ್ಲಿ ಇರುವುದರಿಂದ ಸೂರ್ಯಸ್ತದ ನಂತರ ಗುರುಗಳ ದರ್ಶನ ಸಿಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ ೧೯ರಂದು ಶ್ರೀಗಳ ಚಾತುರ್ಮಾಸ್ಯದ ಸೀಮೋಲ್ಲಂಘನೆಯು ಮುಕುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಸುಮನನಾವತಿ ನದಿಯ ತಟದಲ್ಲಿ ನಡೆಯಲಿದೆ ಎಂದರು.
Case registered/ ಜಾಲಿ ಯುವಕನ ವಿರುದ್ಧ ಕೇಸು ದಾಖಲು: ಯಾಕೆ ಗೊತ್ತಾ?
೮ನೇ ವರ್ಷದ ಚಾತುರ್ಮಾಸ್ಯವು ಬರುವ ವರ್ಷ ಮಹಾರಾಷ್ಟ್ರ ನಾಸಿಕ್ ನಲ್ಲಿ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಬರುವಂತಹ ಎಲ್ಲರ ಭಕ್ತಾದಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಮಧಾರಿ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಉಪಾಧ್ಯಕ್ಷ ಎಂ ಕೆ ನಾಯ್ಕ, ಪ್ರಧಾನ ಕಾರ್ಯದರ್ಶಿ ಡಿ ಎಲ್ ನಾಯ್ಕ, ಮಹೇಶ ನಾಯ್ಕ, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಟ್ರಸ್ಟಿ ಕೆ ಆರ್ ನಾಯ್ಕ, ಪ್ರಮುಖರಾದ ಈರಪ್ಪ ನಾಯ್ಕ ಗರ್ಡಿಕರ, ವಿಠ್ಠಲ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

