ಭಟ್ಕಳ: ಮುರ್ಡೇಶ್ವರದ (Murudeshwara) ಖಾಸಗಿ ಹೋಮ್‌ಸ್ಟೇ (private homestay)ಯೊಂದರಲ್ಲಿ ಶಿವಮೊಗ್ಗ (Shivamogga) ಜಿಲ್ಲೆಯ ಯುವಕನೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ನಡೆದಿದ್ದು, ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ (Suspicious death).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಕಲ್ಮನೆ ಗ್ರಾಮದ ರುದ್ರಪ್ಪ ಚನ್ನಬಸಪ್ಪ (೫೫) ಅವರು ಮುರ್ಡೇಶ್ವರ (Murdeshwar( ಪೊಲೀಸ್ ಠಾಣೆಗೆ (police station) ನೀಡಿದ ದೂರಿನ ಪ್ರಕಾರ, ಅವರ ಪುತ್ರ ವಿರೇಶ ಆರ್ (೨೫) ಆಯನೂರು ಕೆಇಬಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಆಶಾ ಎಂಬ ಮಹಿಳೆಯೊಂದಿಗೆ ಮುರ್ಡೇಶ್ವರಕ್ಕೆ ಬಂದು ಮನು ಡಿಲಕ್ಸ್ ಹೋಮ್‌ಸ್ಟೇಯಲ್ಲಿ ತಂಗಿದ್ದರು. ಜುಲೈ ೨೮ರಂದು ಮಧ್ಯಾಹ್ನ ೧೨.೩೦ರ ವೇಳೆಗೆ ಹೋಮ್‌ಸ್ಟೇ ಕೊಠಡಿಯ ಫ್ಯಾನ್ ಗೆ ಬೆಡ್‌ಶೀಟ್ ಕವರ್‌ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿರೇಶ ಮೃತಪಟ್ಟಿರುವುದು ಪತ್ತೆಯಾಗಿದೆ.

Fisherman missing/ ದೋಣಿ ಪಲ್ಟಿಯಾಗಿ ಸಮುದ್ರದಲ್ಲಿ ಮೀನುಗಾರ ನಾಪತ್ತೆ

ತಮ್ಮ ಮಗ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದರ ಕುರಿತು ಸಂಶಯವಿದ್ದು, ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ತಂದೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (case registered), ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Chaturmasya/ ಬೈಂದೂರಿನಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮಿ ಚಾತುರ್ಮಾಸ್ಯ