ಭಟ್ಕಳ ಡೈರಿ ಫಾಲೋಅಪ್ 

ಭಟ್ಕಳ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (MPLADS) ಅನುದಾನ ಬಳಸಿಕೊಳ್ಳುವಲ್ಲಿ (grant allocation) ಉತ್ತರ ಕನ್ನಡ (Uttara Kannada) ಕ್ಷೇತ್ರದ ಅನುಭವಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishveshwara Hegde Kageri) ವಿಫಲರಾದ ವರದಿ ಓದಿದ್ದೀರಾ. ಆದರೆ, ಶಿಫಾರಸು ಮಾಡಲಾದ ಕೆಲವೇ ಕಾಮಗಾರಿಗಳ ವಿತರಣೆಯಲ್ಲಿಯೂ ತಾಲೂಕುವಾರು ವ್ಯತ್ಯಾಸ ಕಂಡುಬರುತ್ತದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಶಿಫಾರಸು ಮಾಡಲಾದ ೨೦ ಕಾಮಗಾರಿಗಳಲ್ಲಿ ಹೊನ್ನಾವರಕ್ಕೆ ಅಗ್ರಸ್ಥಾನ. ಹೊನ್ನಾವರ ತಾಲೂಕಿನಲ್ಲಿ ಅತ್ಯಧಿಕ ೫ ಕಾಮಗಾರಿಗಳು ಕೈಗೊಂಡಿದ್ದರೆ, ಯಲ್ಲಾಪುರ ಮತ್ತು ಮುಂಡಗೋಡು ತಾಲೂಕಿಗೆ ತಲಾ ಮೂರು, ಶಿರಸಿ ಮತ್ತು ಕುಮಟಾ ತಾಲೂಕಿಗೆ ತಲಾ ೨, ಉಳಿದಂತೆ ಹಳಿಯಾಳ, ಕುಮಟಾ, ಕಾರವಾರ, ಅಂಕೋಲಾ ತಾಲೂಕಿಗೆ ತಲಾ ೧ ಕಾಮಗಾರಿ ಶಿಫಾರಸು ಮಾಡಲಾಗಿದೆ.

grant allocation/ ಅನುದಾನ ಹಂಚಿಕೆಯಲ್ಲಿ ಸಂಸದ ಕಾಗೇರಿ ನಿರಾಸಕ್ತಿ

ಭಟ್ಕಳಕ್ಕಿಲ್ಲ ಅನುದಾನ!

ಗಮನಾರ್ಹ ಸಂಗತಿಯೆಂದರೆ, ಭಟ್ಕಳ (Bhatkal) ತಾಲೂಕಿಗೆ ಒಂದೇ ಒಂದು ಕಾಮಗಾರಿಯನ್ನೂ ಶಿಫಾರಸು ಮಾಡಲಾಗಿಲ್ಲ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಇತರ ತಾಲೂಕುಗಳಿಗೆ ಕನಿಷ್ಠ ಒಂದು ಯೋಜನೆಯಾದರೂ ನೀಡಲಾಗಿರುವಾಗ ಭಟ್ಕಳ ಸಂಪೂರ್ಣವಾಗಿ ಹೊರಗುಳಿದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕುವಂತಾಗಿದೆ.

Guru Purnima/ ಜಾಲಿಯಲ್ಲಿ ಅರ್ಥಪೂರ್ಣವಾಗಿ ನಡೆದ ಗುರು ಪೂರ್ಣಿಮೆ

ಯಾವ್ಯಾವ ತಾಲೂಕಿಗೆ ಎಷ್ಟೆಷ್ಟು?:

ಹೊನ್ನಾವರ (Honnavar) ತಾಲೂಕಿನ ಹೊಸಕುಳಿ, ಮಾವಿನಕುರ್ವ, ಬಳಕೂರು, ಗುಣವಂತೆ ಹಾಗೂ ಮುಗಳಿ-ಗುಣವಂತೆ ಭಾಗಗಳಲ್ಲಿ ರಸ್ತೆ, ತಡೆಗೋಡೆ, ಸಮುದಾಯ ಭವನ, ರಂಗಮಂದಿರ ಹಾಗೂ ಸಾಂಸ್ಕೃತಿಕ ಸಭಾಂಗಣ ನಿರ್ಮಾಣಕ್ಕೆ ತಲಾ ರೂ ೬ ಲಕ್ಷದಿಂದ ರೂ ೧೦ ಲಕ್ಷದವರೆಗೆ ಅನುದಾನವನ್ನು ಸಂಸದ (Member of Parliament) ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಶಿಫಾರಸು ಮಾಡಿದ್ದಾರೆ.

ಯಲ್ಲಾಪುರ (Yellapur) ತಾಲೂಕಿನಲ್ಲಿ ಮಾದೇವಕೊಪ್ಪ ರಸ್ತೆ ನಿರ್ಮಾಣ, ಬಳಗಾರ-ಇಡಗುಂದಿ ಸಿಸಿ ರಸ್ತೆ ಹಾಗೂ ಚಿನ್ನಾಪುರ ಸಭಾಭವನ ನಿರ್ಮಾಣಕ್ಕೆ ತಲಾ ರೂ ೬ ಲಕ್ಷದ ಯೋಜನೆಗಳನ್ನು ಶಿಫಾರಸು ಮಾಡಲಾಗಿದೆ.

ಮುಂಡಗೋಡ (Mundgod) ತಾಲೂಕಿನಲ್ಲಿ ಧ್ಯಾನ ಮಂದಿರ, ಸಿಸಿ ರಸ್ತೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣ ಸೇರಿದಂತೆ ಮೂರು ಕಾಮಗಾರಿಗಳಿಗೆ ರೂ ೫ ರಿಂದ ರೂ ೬ ಲಕ್ಷದವರೆಗೆ ಅನುದಾನ ಶಿಫಾರಸು ಮಾಡಲಾಗಿದೆ.

ಶಿರಸಿ (Sirsi) ತಾಲೂಕಿನ ಹುಲೇಕಲ್ ರಸ್ತೆ ಸುಧಾರಣೆ ಹಾಗೂ ಅಚ್ಚನಳ್ಳಿ ಹರಿಜನಕೇರಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಶಿಫಾರಸು ಮಾಡಲಾಗಿದೆ. ಕುಮಟಾ (Kumta) ತಾಲೂಕಿನಲ್ಲಿ ದೇವಗಿರಿ ನಾಗತೀರ್ಥ ದೇವಸ್ಥಾನ ರಸ್ತೆ ಹಾಗೂ ಮುಕ್ರಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಾಗಿ ೫ ಲಕ್ಷ ರೂ ಮತ್ತು ೧೦ ಲಕ್ಷ ರೂ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕಾರವಾರದಲ್ಲಿ ಹಿಂದೂ ಗಾಬಿತ ಸಮಾಜ ಸಭಾಭವನ, ಅಂಕೋಲಾ(Ankola)ದಲ್ಲಿ ಕಾತ್ಯಾಯಿನಿ ಪ್ರೌಢಶಾಲೆ ಮೇಲ್ಛಾವಣಿ ದುರಸ್ತಿ, ಹಳಿಯಾಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಹಂಚಿಕೆಯಾಗಿದೆ.

missing fisherman/ ನಾಪತ್ತೆಯಾಗಿದ್ದ ಮೀನುಗಾರನ ಶವ ಪತ್ತೆ

ಡ್ಯಾಶ್‌ಬೋರ್ಡ್ನಲ್ಲಿ, ಹರಿಗೋಸಾವಿ ಮಠ ಟ್ರಸ್ಟ್ ಸಮುದಾಯ ಭವನ ನಿರ್ಮಾಣ ಮತ್ತು ಕನ್ಮುಲೆ ಸರ್ವೆ ನಂ ೨೫ರ ಕೆರೆ ಏರಿ ಬಳಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ತಲಾ ೧೦ ಲಕ್ಷ ರೂ ಹಂಚಿಕೆಯಾಗಿದ್ದರೂ ಅವು ಯಾವ ತಾಲೂಕಿನ ವ್ಯಾಪ್ತಿಗೆ ಸೇರಿವೆ ಎಂಬ ಮಾಹಿತಿ ನಮೂದಿಸಲಾಗಿಲ್ಲ. ಸಾರ್ವಜನಿಕ ಮಾಹಿತಿಯಲ್ಲಿ ಈ ರೀತಿಯ ಅಪೂರ್ಣತೆ ಕೂಡ ಪಾರದರ್ಶಕತೆಯ ದೃಷ್ಟಿಯಿಂದ ಪ್ರಶ್ನಾರ್ಹವಾಗಿದೆ.

Guru Purnima/ ಶ್ರೀವಲ್ಲಿ ಸಾಹಿತ್ಯ ಸಂಘದಿಂದ ಗುರುಪೂರ್ಣಿಮೆ ಉತ್ಸವ

ಸಮತೋಲನ ಹಂಚಿಕೆ ಇಲ್ಲ: ತಾಲೂಕುವಾರು ಅನುದಾನ ಹಂಚಿಕೆಯಲ್ಲಿ (grant allocation) ಸಮತೋಲನ ಕಾಣುತ್ತಿಲ್ಲ. ಹೊನ್ನಾವರಕ್ಕೆ (Honnavar) ಐದು ಕಾಮಗಾರಿಗಳು ದೊರೆತಿದ್ದರೆ, ಭಟ್ಕಳಕ್ಕೆ ಒಂದೂ ಇಲ್ಲ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಜೋಯಿಡಾ (Joida), ದಾಂಡೇಲಿ (Dandeli) ಮತ್ತು ಸಿದ್ದಾಪುರ (Siddhapur) ತಾಲೂಕಿನ ಉಲ್ಲೇಖವೂ ಇಲ್ಲ. ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು (Kittur), ಖಾನಾಪುರ (Khanapur) ವಿಷಯವಂತೂ ದೂರದ ಮಾತು.

Suspicious death/ ಶಿವಮೊಗ್ಗದ ಯುವಕ ಮುರ್ಡೇಶ್ವರದಲ್ಲಿ ಶಂಕಾಸ್ಪದ ಸಾವು