ಭಟ್ಕಳ: ಉತ್ತರ ಕನ್ನಡ (Uttara Kannada) ಲೋಕಸಭಾ ಕ್ಷೇತ್ರದ ಸಂಸದ (Member of Parliament) ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwara Hegde Kageri) ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ (MPLADS) ತಮ್ಮ ಕ್ಷೇತ್ರದಲ್ಲಿ ಒಟ್ಟು ೨೦ ಕಾಮಗಾರಿಗಳನ್ನು ಕೈಗೊಂಡು ಅನುದಾನ ಹಂಚಿಕೆ  (Grant allocation) ಮಾಡಿದ್ದಾರೆ. ಎಂಪಿಲ್ಯಾಡ್ಸ್ ಡ್ಯಾಶ್ ಬೋರ್ಡ್ ನಲ್ಲಿ ಇರುವ ಮಾಹಿತಿಯಂತೆ ಅವುಗಳ ವಿವರ ಕೆಳಗಿನಂತಿದೆ:

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ (Honnavar) ತಾಲೂಕಿನ ಹೊಸಕುಳಿ ಗ್ರಾಮದ ಹೆಬ್ಬತ್ತಕೇರಿ ಕೆಳಗಿನಕೇರಿ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ಹೊಸಕುಳಿ ಜಿ.ಪಂ. ರೂ ೬,೦೦,೦೦೦, ಮಾವಿನಕುರ್ವ ಜಿ.ಪಂ.ನ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಹೊನ್ನದಿಬ್ಬದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ ೬,೦೦,೦೦೦, ಬಳಕೂರು ಬಾಲಕಿಯರ ಶಾಲೆಗೆ ಅಡುಗೆ ಕೋಣೆ ಮತ್ತು ರಂಗ ಮಂದಿರ ನಿರ್ಮಾಣಕ್ಕೆ ರೂ ೭,೦೦,೦೦೦, ಗುಣವಂತೆ ಗ್ರಾ ಪಂ.ನಲ್ಲಿ ಶ್ರೀ ಕೆರೆಮನೆ ಶಿವರಾಮ ಹೆಗಡೆ ರಂಗ ಮಂದಿರ ನಿರ್ಮಾಣಕ್ಕೆ ರೂ ೧೦,೦೦,೦೦೦, ಮುಗಳಿ ಗುಣವಂತೆ ಕೆಳಗಿನೂರು ಜಿಪಿಯಲ್ಲಿ ನಾಮಧಾರಿ ಸಾಂಸ್ಕೃತಿಕ ಸಭಾಂಗಣ ನಿರ್ಮಾಣಕ್ಕೆ ರೂ ೬,೦೦,೦೦೦ ಶಿಫಾರಸು ಮಾಡಲಾಗಿದೆ.

grant allocation/ ಅನುದಾನ ಹಂಚಿಕೆಯಲ್ಲಿ ಸಂಸದ ಕಾಗೇರಿ ನಿರಾಸಕ್ತಿ

ಯಲ್ಲಾಪುರ (Yellapur) ತಾಲೂಕಿನ ಮದ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇವಕೊಪ್ಪ ಗ್ರಾಮದ ಪಿಡಬ್ಲ್ಯೂಡಿ ರಸ್ತೆಯಿಂದ ವಿಥು ಕೊಕ್ಕರೆಮನೆಗೆ ರಸ್ತೆ ನಿರ್ಮಾಣಕ್ಕೆ ರೂ ೬,೦೦,೦೦೦, ಇಡಗುಂದಿ ಬಳಗಾರ ಮುಖ್ಯರಸ್ತೆಯಿಂದ ಸಿದ್ದಿಕೇರಿವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ರೂ ೬,೦೦,೦೦೦, ಇಡಗುಂದಿ ಚಿನ್ನಾಪುರ ಶ್ರೀ ಶಿನ್ನೇಶ್ವರ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಸಭಾಭವನ ನಿರ್ಮಾಣಕ್ಕೆ ರೂ ೬,೦೦,೦೦೦ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

grant allocation/ ಭಟ್ಕಳಕ್ಕೆ ಕೊಟ್ಟ ಅನುದಾನ ಕೇಳಿದ್ರೆ ದಂಗಾಗ್ತೀರ!

ಮುಂಡಗೋಡ (Mundgod) ತಾಲೂಕಿನ ಸಾಲಗಾಂವ್ ಬಳಿ ಶ್ರೀ ವೃಪಾಕ್ಷೇಶ್ವರ ಮಹಾರಾಜ ಮಠದ ಧ್ಯಾನ ಮಂದಿರ ನಿರ್ಮಾಣಕ್ಕೆ ರೂ ೬,೦೦,೦೦೦, ಸಾಲಗಾಂವದಲ್ಲಿ ಸಿಸಿ ರಸ್ತೆ ಕರಗಿನಕೊಪ್ಪ ಪ್ರಗತಿ ನಗರ ನಿರ್ಮಾಣ ರೂ ೬,೦೦,೦೦೦, ಕಲ್ಕೇರಿ ಗೌಡರಕೇರಿಯಿಂದ ಪಿಡಬ್ಲ್ಯೂಡಿ ರಸ್ತೆಯವರೆಗೆ ಸಂಪರ್ಕ ರಸ್ತೆ ನಿರ್ಮಾಣ ರೂ ೫,೦೦,೦೦೦ ಶಿಫಾರಸು ಮಾಡಲಾಗಿದೆ.

Guru Purnima/ ಜಾಲಿಯಲ್ಲಿ ಅರ್ಥಪೂರ್ಣವಾಗಿ ನಡೆದ ಗುರು ಪೂರ್ಣಿಮೆ

ಶಿರಸಿ (Sirsi) ತಾಲೂಕಿನ ಹುಲೇಕಲ್ ನಕ್ಷೆ ಗ್ರಾಮದಲ್ಲಿ ಕೆಳಗಿನಕೇರಿ ರಸ್ತೆ ಸುಧಾರಣೆಗೆ ರೂ ೩,೦೦,೦೦೦, ದೊಡ್ನಳ್ಳಿ ವ್ಯಾಪ್ತಿಯ ನಟರಾಜ್ ಕಾನಡೆ ಮನೆಯಿಂದ ಅಶೋಕಕಾನಡೆ ಮನೆಯಿಂದ ಅಚ್ಚನಳ್ಳಿ ಹರಿಜನಕೇರಿಗೆ ಸಿಸಿ ರಸ್ತೆ ನಿರ್ಮಾಣಕ್ಕೆ ರೂ ೬,೦೦,೦೦೦, ಕಾರವಾರ (Karwar)  ನಗರದ ನಂದನಗದ್ದಾದಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹಿಂದೂ ಗಬಿತ ಸಮಾಜ ಸಭಾಭವನದ ನಿರ್ಮಾಣಕ್ಕೆ ರೂ ೬,೦೦,೦೦೦, ಅಂಕೋಲಾ (Ankola) ತಾಲೂಕಿನ ಅವರ್ಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾತ್ಯಾಯಿನಿ ಪ್ರೌಢಶಾಲೆಯ ಮೇಲ್ಛಾವಣಿ ದುರಸ್ತಿಗೆ ರೂ ೬,೦೦,೦೦೦, ಹಳಿಯಾಳ (Haliyal) ತಾಲೂಕಿನ ಮುರ್ಕವಾಡದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ  ರೂ ೬,೦೦,೦೦೦ ಶಿಫಾರಸು ಮಾಡಲಾಗಿದೆ.

missing fisherman/ ನಾಪತ್ತೆಯಾಗಿದ್ದ ಮೀನುಗಾರನ ಶವ ಪತ್ತೆ

ಕುಮಟಾ (Kumta) ತಾಲೂಕಿನ ದೇವಗಿರಿ ಗ್ರಾ ಪಂ.ನಲ್ಲಿ ನಾಗತೀರ್ಥ ದೇವಸ್ಥಾನ ರಸ್ತೆ ರಚನೆಗೆ ರೂ ೫,೦೦,೦೦೦ ಮತ್ತು ಕುಮಟಾ ಪೇಟೆಯಲ್ಲಿ ಮುಕ್ರಿ ಸಮುದಾಯ ಭವನ ನಿರ್ಮಾಣಕ್ಕೆ ರೂ ೧೦,೦೦,೦೦೦ ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

Guru Purnima/ ಶ್ರೀವಲ್ಲಿ ಸಾಹಿತ್ಯ ಸಂಘದಿಂದ ಗುರುಪೂರ್ಣಿಮೆ ಉತ್ಸವ

ಹರಿಗೋಸಾವಿ ಮಠ ಟ್ರಸ್ಟ್ ಸಮುದಾಯ ಭವನದ ನಿರ್ಮಾಣಕ್ಕೆ ರೂ ೧೦,೦೦,೦೦೦ ಮತ್ತು ಕನ್ಮುಲೆ ಸರ್ವೆ ನಂ ೨೫ರ ಕೆರೆ ಏರಿಯ ಬಳಿ ರಕ್ಷಣಾ ಗೋಡೆ ನಿರ್ಮಾಣ ರೂ ೧೦,೦೦,೦೦೦ ರೂ ಶಿಫಾರಸು ಮಾಡಲಾಗಿದ್ದು, ಈ ಎರಡು ಕಾಮಗಾರಿಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ತಾಲೂಕು ನಮೂದಿಸಿಲ್ಲ.

Suspicious death/ ಶಿವಮೊಗ್ಗದ ಯುವಕ ಮುರ್ಡೇಶ್ವರದಲ್ಲಿ ಶಂಕಾಸ್ಪದ ಸಾವು