ಭಟ್ಕಳ: ಮಾವ ಮತ್ತು ಅಳಿಯ ನಡುವಿನ ದ್ವೇಷ ಜಗಳಕ್ಕೆ ತಿರುಗಿ, ಬಡಿದಾಡಿಕೊಂಡ (clash) ಘಟನೆ ಭಟ್ಕಳ (Bhatkal)ದಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿವೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಜಾದ್ ನಗರದ ಶೇಡುಕುಳಿ ಹೊಂಡ ನಿವಾಸಿ ಅಮೀರ್ ಶೇಖ್ ಅವರು ಮನೆ ಬಾಡಿಗೆ ವಿಚಾರವಾಗಿ ಅಳಿಯ ಮಹಮ್ಮದ್ ಅಫಾನ್ ಇಸ್ಮಾಯಿಲ್ ಶೇಖ್ (೩೪) ಅವರೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಯ ಮುಂಭಾಗದಲ್ಲಿದ್ದ ಟೈಲ್ಸ್ ತುಂಡಿನಿಂದ ತಲೆಗೆ ಹೊಡೆದು ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಾಯಗೊಂಡ ಅಫಾನ್ ಅವರನ್ನು ಸ್ಥಳೀಯರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಹಮ್ಮದ್ ಅಫೀಫ್ ಎಂಬುವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Mobile phone seized/ ಫೇಸ್ಬುಕ್ ಖಾತೆ ತೆರೆದ ‘ಈ’ ಶಿಲ್ಪಿಗೆ ಪೊಲೀಸ್ ಆತಿಥ್ಯ, ಯಾಕೆ ಗೊತ್ತಾ?
ಪ್ರತಿಯಾಗಿ, ಅಮೀರ್ ಶೇಖ್ (೬೧) ಅಳಿಯ ಅಫಾನ್ ಇಸ್ಮಾಯಿಲ್ ಸಾಬ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಳೆದ ೭ ತಿಂಗಳಿಂದ ಬಾಡಿಗೆಗೆ ವಾಸಿಸುತ್ತಿದ್ದ ಅಫಾನ್ ಬಾಡಿಗೆ ಹಣ ಪಾವತಿಸದ ವಿಚಾರವಾಗಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಅದರ ತನಿಖೆ ನಡೆಯುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಟ್ಟೆಗಳ ವಿಚಾರವಾಗಿ ಮಾತಿನ ಚಕಮಕಿ ನಡೆದು, ಅಫಾನ್ ಕಲ್ಲಿನಿಂದ ತಲೆ ಹಾಗೂ ದೇಹಕ್ಕೆ ಹೊಡೆದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


