ಭಟ್ಕಳ: ಶಾಸಕ ಮಂಕಾಳ ವೈದ್ಯ (Mankal Vaidya) ಅವರಿಗೆ ಸಚಿವ ಸ್ಥಾನ (Ministerial Post) ಕೈತಪ್ಪಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ (Bhatkal) ಮೊದಲ ಬಾರಿಗೆ ಬಹಿರಂಗ ಅಸಮಾಧಾನ (Open Dissatisfaction) ವ್ಯಕ್ತವಾಗಿದೆ. ಭಟ್ಕಳ ತಾಲೂಕು ಮೊಗೇರ ಸಮಾಜ, ಪರ್ಶಿಯನ್ ಬೋಟ್ ಯೂನಿಯನ್, ನಾಡದೋಣಿ ಮೀನುಗಾರರ ಸಂಘ ಸೇರಿದಂತೆ ವಿವಿಧ ಮೀನುಗಾರರ ಸಂಘಟನೆಗಳು ಸುದ್ದಿಗೋಷ್ಠಿ (pressmeet) ನಡೆಸಿ ರಾಜ್ಯ ಸರ್ಕಾರದ (State government) ಕ್ರಮವನ್ನು ತೀವ್ರವಾಗಿ ಖಂಡಿಸಿವೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಟ್ಕಳ ತಾಲೂಕು ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ರಾಜ್ಯದ ಮೀನುಗಾರರ (fishermen) ಅಭಿವೃದ್ಧಿಗಾಗಿ ಶಾಸಕ ಮಂಕಾಳ ವೈದ್ಯ (Mankal Vaidya) ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಅಭಿವೃದ್ಧಿಪರ ನಾಯಕನಿಗೆ ಸಚಿವ ಸ್ಥಾನ ನೀಡದೆ ಕೊನೆ ಕ್ಷಣದಲ್ಲಿ ಕಸಿದುಕೊಂಡಿರುವುದು ಅತ್ಯಂತ ಅನ್ಯಾಯ ಎಂದು ಆರೋಪಿಸಿದರು.

Mankal Vaidya/ ಸಚಿವ ಲಕ್ಷ್ಮಣ ಸವದಿ ಸಭೆಗೆ ಮಂಕಾಳ ವೈದ್ಯ ಗೈರು: ಕಾರಣವೇನು?

ಸಚಿವರಾಗಿದ್ದ ವೇಳೆ ಮಂಕಾಳ ವೈದ್ಯ ಅವರು ಮೀನುಗಾರರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರತಿನಿಧಿಸಿ, ಮೀನುಗಾರರ ಪರ ಧ್ವನಿಯಾಗಿದ್ದರು. ಅವರ ಕಾರ್ಯವೈಖರಿಯನ್ನು ಮುರುಡೇಶ್ವರದಲ್ಲಿ (Murdeshwar) ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆಯ (World Fisheries Day) ಸಂದರ್ಭದಲ್ಲಿ ಅಂದಿನ ಉಪಮುಖ್ಯಮಂತ್ರಿ (DCM) ಡಿ ಕೆ ಶಿವಕುಮಾರ (D K Shivakumar) ಕೂಡ ಸಾರ್ವಜನಿಕವಾಗಿ ಶ್ಲಾಘಿಸಿದ್ದರು. ಅಂತಹ ಜನಪರ ಕಾಳಜಿಯ ನಾಯಕನಿಗೆ ಸಚಿವ ಸ್ಥಾನ ನೀಡದಿರುವುದು ರಾಜ್ಯ ಸರ್ಕಾರದ ಅವಮಾನಕಾರಿ ನಡೆ ಎಂದು ಮೀನುಗಾರ ಮುಖಂಡರು (Fishermen leaders) ಹೇಳಿದರು.

Mari jatra/ ಭಟ್ಕಳ ಮಾರಿ ಹಬ್ಬ ಸಂಪನ್ನ 

ಮಂತ್ರಿ ಸ್ಥಾನ ತಪ್ಪುವಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಅನುಮಾನ ವ್ಯಕ್ತಪಡಿಸಿದ ಮುಖಂಡರು, ಉನ್ನತ ಕುಟುಂಬದ ವ್ಯಕ್ತಿಗೆ ಸಚಿವ ಸ್ಥಾನ ಕಲ್ಪಿಸುವ ಉದ್ದೇಶದಿಂದ ಹಿಂದುಳಿದ ವರ್ಗದ ಹಾಗೂ ಮೀನುಗಾರ ಸಮುದಾಯದ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಮೀನುಗಾರ ನಾಯಕನಿಗೆ ಸಚಿವ ಸ್ಥಾನ ನೀಡದೆ ಸರ್ಕಾರ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದು, ಇದರಿಂದ ಮೀನುಗಾರ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Mariyamma/ ಮಾರಿಯಮ್ಮನ ದರ್ಶನಕ್ಕೆ ಮೊದಲ ದಿನ ಭಕ್ತಸಾಗರ

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಮಂಕಾಳ ವೈದ್ಯ ಅವರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಮೀನುಗಾರ ಸಮುದಾಯ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಭಟ್ಕಳ ತಾಲೂಕು ಮೊಗೇರ ಸಮಾಜ ಎಚ್ಚರಿಕೆ ನೀಡಿತು. ಅಭಿವೃದ್ಧಿಪರ ನಾಯಕನನ್ನು ಕಡೆಗಣಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.

Minister Laxman Savadi/ ಸಚಿವ ಲಕ್ಷ್ಮಣ ಸವದಿ ಜಿಲ್ಲಾ ಪ್ರವಾಸ: ಭಟ್ಕಳಕ್ಕಿಲ್ಲ ಭೇಟಿ, ಜನ ಬೇಸರ 

ಸುದ್ದಿಗೋಷ್ಠಿಯಲ್ಲಿ ಪರ್ಶಿಯನ್ ಬೋಟ್ ಯೂನಿಯನ್, ನಾಡದೋಣಿ ಮೀನುಗಾರರ ಸಂಘ, ಭಟ್ಕಳ ತಾಲೂಕು ಮೊಗೇರ ಸಮಾಜ ಸೇರಿದಂತೆ ವಿವಿಧ ಮೀನುಗಾರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.