ಭಟ್ಕಳ: ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿದ್ದ (harvesting arecanut) ವೇಳೆ ವಿದ್ಯುತ್ ತಂತಿ ತಗುಲಿ (electrocution) ಎತ್ತರದಿಂದ ಕೆಳಗೆ ಬಿದ್ದು ೬೨ ವರ್ಷದ ಕೃಷಿಕ ಮೃತಪಟ್ಟಿರುವ (farmer dies) ಘಟನೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ (police station) ವ್ಯಾಪ್ತಿಯ ಹಾಡುವಳ್ಳಿ ಸಮೀಪದ ಕುಂಟವಾಣಿ ಗ್ರಾಮದಲ್ಲಿ ನಡೆದಿದೆ.
Honnavar BJP/ ಕಾರವಾರದಲ್ಲಿ ಸರಣಿ ಹೋರಾಟಕ್ಕೆ ಹೊನ್ನಾವರ ಬಿಜೆಪಿ ಬೆಂಬಲ
ಮೃತರನ್ನು ಕುಂಟವಾಣಿ ಗ್ರಾಮದ ಶ್ರೀನಿವಾಸ ಚಿಕ್ಕಯ್ಯ ಶೆಟ್ಟಿ (೬೨) ಎಂದು ಗುರುತಿಸಲಾಗಿದೆ. ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಆ ೨೩ರಂದು ಸಂಜೆ ಸುಮಾರು ೬.೧೫ರ ವೇಳೆಗೆ ಶ್ರೀನಿವಾಸ ಶೆಟ್ಟಿ ಅವರು ತೋಟದಲ್ಲಿನ ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೈ-ಕಾಲು ಜಾರಿರಬಹುದು ಅಥವಾ ತೋಟದ ಮೂಲಕ ಹಾದುಹೋಗಿದ್ದ ೧೧ ಕೆವಿ ವಿದ್ಯುತ್ ಮಾರ್ಗವು ಅಲ್ಯುಮಿನಿಯಂ ಏಣಿಗೆ ತಗುಲಿರಬಹುದು ಎನ್ನಲಾಗಿದ್ದು, ಪರಿಣಾಮ ಅವರು ಎತ್ತರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ (farmer dies) ಎಂದು ದೂರಿನಲ್ಲಿ ತಿಳಿಸಲಾಗಿದೆ.
passes away/ ಸಮಾಜ ಸೇವಕ, ಶಿಕ್ಷಣ ಪ್ರೇಮಿ ರವಿ ಖಾರ್ವಿ ನಿಧನ: ಬಾಲ್ಯ ಸ್ನೇಹಿತರ ಕಂಬನಿ
ಮೃತರ ಪುತ್ರ ಪ್ರಶಾಂತ ಶ್ರೀನಿವಾಸ ಶೆಟ್ಟಿ (೩೮) ಅವರು ಆ ೨೩ರಂದು ರಾತ್ರಿ ೯.೧೫ರ ಸುಮಾರಿಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ತಮ್ಮ ತಂದೆಯ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (case registered), ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

