ಭಟ್ಕಳ ಡೈರಿ ವರದಿ

ಬೈಂದೂರು: ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP Kageri) ಅವರು ಬೈಂದೂರಿನಲ್ಲಿ (Byndoor) ಚಾತುರ್ಮಾಸ್ಯ (chaturmasya) ವ್ರತ ನಿರತರಾಗಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಆಶೀರ್ವಾದ ಪಡೆದರು.

Aadhaar centre/ ಉತ್ತರ ಕನ್ನಡ ಮಧ್ಯಭಾಗದಲ್ಲಿ ಸುಸಜ್ಜಿತ ಆಧಾರ್ ಕಚೇರಿ ಸ್ಥಾಪನೆಗೆ ಆಗ್ರಹ

ಈ ಸಂದರ್ಭದಲ್ಲಿ ಸ್ವಾಮಿಯವರೊಂದಿಗೆ ಕೆಲಕಾಲ ಆಧ್ಯಾತ್ಮಿಕ ವಿಚಾರಗಳ ಕುರಿತು ಚರ್ಚಿಸಿದ ಸಂಸದ ಕಾಗೇರಿ (MP Kageri), ಅವರ ಆಶೀರ್ವಾದವನ್ನು ಸ್ವೀಕರಿಸಿದರು. ಚಾತುರ್ಮಾಸ್ಯ ವ್ರತದ ಹಿನ್ನೆಲೆಯಲ್ಲಿ ಸ್ವಾಮಿಯವರ ಸಾನ್ನಿಧ್ಯ ಪಡೆಯಲು ಭಕ್ತರು ಆಗಮಿಸುತ್ತಿರುವ ಸಂದರ್ಭದಲ್ಲಿ ಸಂಸದರ ಭೇಟಿ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ (former MLA) ಸುನಿಲ ನಾಯ್ಕ, ಭಟ್ಕಳ ಬಿಜೆಪಿ (Bhatkal BJP) ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಉಮೇಶ ನಾಯ್ಕ ಹಾಗೂ ದಾಸ ನಾಯ್ಕ ಉಪಸ್ಥಿತರಿದ್ದರು.

Chippikallu tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ಬೆಂಗಳೂರಿಗರ ನೆರವು