ಭಟ್ಕಳ: ಮುಸ್ಲಿಂ ಯುವಕರು ಹಿಂದೂ ಧರ್ಮದ ಶ್ರದ್ದಾ ಭಕ್ತಿ ಕೇಂದ್ರವಾದ ಮುರಿನಕಟ್ಟೆ (Murinakatte)ಯನ್ನು  ದ್ವಂಸಗೊಳಿಸಿದ್ದನ್ನು ಖಂಡಿಸಿರುವ ಮಾಜಿ ಶಾಸಕ ಸುನೀಲ ನಾಯ್ಕ, ಮುರಿನಕಟ್ಟೆಯನ್ನು ಅಲ್ಲಿ ಕಟ್ಟಿಯೇ ಸಿದ್ದ ಎಂದು  ಹೇಳಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಾನುವಾರದಂದು  ಭಟ್ಕಳ ಬಿಜೆಪಿ ಮಂಡಲ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಅನ್ಯ ಕೋಮಿನ ಯುವಕರು ನಮ್ಮ ಅನಾದಿಕಾಲದ ಇತಿಹಾಸ ಇರುವ ಅಮ್ಮನ ಹೊರೆ ಇಡುವ ಮುರಿನಕಟ್ಟೆ (Murinakatte)ಯನ್ನು ಸಾವಿರಾರು ಸಂಖ್ಯೆಯಲ್ಲಿ ಬಂದು ಏಕಾಏಕಿ ಕೇಕೆ ಹಾಕಿ ಧ್ವಂಸ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ  ತಂದಿದ್ದಾರೆ. ಇದು ಖಂಡನೀಯ. ಮುರಿನಕಟ್ಟೆ ಅನ್ನುವುದು ನಮ್ಮ ಅಸ್ಮಿತೆಯ ಸಂಕೇತ. ಇದರ ಸಾಂಪ್ರದಾಯವನ್ನು ನೂರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೇವೆ. ನಾವು ಬೆಳಿಗ್ಗೆ ಕಟ್ಟಿದ ಕಟ್ಟೆಯನ್ನು ಸಂಜೆ ಬಂದು ಧ್ವಂಸ ಮಾಡಿದ್ದಾರೆ ಎಂದರು.

DC orders/ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶ

ರವಿವಾರದಂದು  ಶಿರಾಲಿಯಲ್ಲಿ ೧೧ ಜನರು ಮೃತಪಟ್ಟು ನಾವು ಶೋಕಾರಣೆಯಲ್ಲಿ ಇರುವ  ಸಂದರ್ಭದಲ್ಲಿ ಅದನ್ನು ದುರುಪಯೋಗ ಉಪಯೋಗಿಸಿಕೊಂಡ ಮುಸ್ಲಿಂ  ಜನರು ಬಂದು ಧ್ವಂಸ ಮಾಡಿದರು ಕೂಡ ಪೊಲೀಸರು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರ ಮೇಲೂ ಹಲ್ಲೆ  ಮಾಡಿದ್ದಾರೆ. ಆದರೆ ಪೊಲೀಸರಿಗೆ ಯಾರೂ ಕೈ ಕಟ್ಟಿಹಾಕಿದ್ದಾರೆ ಅಂತಾ ಗೊತ್ತಾಗಲಿಲ್ಲ ಎಂದು ಹೇಳಿದರು.

Murinakatte/ ಮುರಿನಕಟ್ಟೆ ವಿವಾದ: ನಾಲ್ಕು ಪ್ರಕರಣ ದಾಖಲು 

ಮುರಿನಕಟ್ಟೆ ಕಟ್ಟುವ ಸಲುವಾಗಿ ನಾನು ತಾಲೂಕು ಆಡಳಿತ ಹಾಗೂ ಅಧಿಕಾರಿಗಳೊಂದಿಗೆ ೫-೬ ಬಾರಿ ಸಭೆ ಮಾಡಿರುತ್ತೇನೆ. ಸ್ಥಳ ಪರಿಶೀಲನೆ ಮಾಡಿರುತ್ತೇನೆ. ಕಟ್ಟೆ ಕಟ್ಟಲು ನಿರಂತರ ಪ್ರಯತ್ನ ಮಾಡಿ ಭಾನುವಾರದಂದು ಹುರುಳಿಸಾಲ ಭಾಗದ ಹಿಂದೂ ಸಮಾಜದವರು ಕಟ್ಟೆಯನ್ನು ಕಟ್ಟಿದರೆ, ಇವರು ಅದನ್ನು ಕೆಡವುತ್ತಾರೆ. ಇವರಿಗೆ ಎಲ್ಲಿಯ ಧೈರ್ಯ ಎಂದು ನನಗೆ ತಿಳಿಯುದಿಲ್ಲ ಎಂದರು.

DC Lakshmi Priya/ ಮುರಿನಕಟ್ಟೆ ನಾಶಪಡಿಸಿದವರ ವಿರುದ್ಧ ಪ್ರಕರಣ ದಾಖಲು 

‘ಕಟ್ಟೆ ಕೆಡಿವಿದ್ದು ನನಗೆ ಬೇಜಾರಾಗಿದೆ. ನಾನು ಆ ಸ್ಥಳವನ್ನು ಪರಿಶೀಲನೆ ಮಾಡುತ್ತೇನೆ’ ಎಂದು ಉಸ್ತುವಾರಿ ಸಚಿವರು ಮಾಧ್ಯಮದವರಿಗೆ ಹೇಳಿದ್ದರು‌‌. ೧೮ ಗಂಟೆಯಾದರೂ ಇಲ್ಲಿಯವರೆಗೆ ಸ್ಥಳಕ್ಕೆ ಭೇಟಿಯೇ ನೀಡಿಲ್ಲ. ಕಟ್ಟೆಯನ್ನು ಧ್ವಂಸ ಮಾಡಿದವರ ಬಗ್ಗೆ ಕ್ರಮ ಕೈಗೋಳ್ಳುವಂತೆ ಸೂಚನೆ ನೀಡಲಿಲ್ಲ. ಇದು ಯಾರ ಒಲೈಕೆ ಅಂತಾ ಗೊತ್ತಾಗುತ್ತಿಲ್ಲ. ೩೦ ಸಾವಿರ ಮತ ಇರುವ ಮುಸ್ಲಿಮರು ಇವರಿಗೆ ಮುಖ್ಯವೋ ಅಥವಾ ಲಕ್ಷಕಿಂತ ಹೆಚ್ಚು ಮತ ನೀಡಿರುವ ಹಿಂದೂಗಳು ಮುಖ್ಯವೋ? ಇವರು ಹಿಂದೂಗಳ ಮತದಿಂದ  ಆಯ್ಕೆಯಾಗಲಿಲ್ಲವೇ? ಇವರು ನಿಜವಾದ ಹಿಂದೂ ಆದರೆ ಅದೇ ಸ್ಥಳದಲ್ಲಿ ಕಟ್ಟೆಯನ್ನು ಕಟ್ಟೆಕೊಡಬೇಕು. ಅವರಿಗೆ ಜಾಗ  ಗೊತ್ತಿಲ್ಲವೆಂದರೆ ನಾವು ಜಾಗ ಹುಡುಕಿಕೊಡುತ್ತೇವೆ ಎಂದು ಹೇಳಿದರು.

police custody/ ಮಧ್ಯರಾತ್ರಿ ಹಿಂದೂ ಕಾರ್ಯಕರ್ತರು ಪೊಲೀಸ್ ವಶಕ್ಕೆ 

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠರು ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ. ಅದರಲ್ಲಿ ಅವರು ಮುರಿನಕಟ್ಟೆಗೆ ಯಾವುದೇ ಹಾನಿ ಆಗಲಿಲ್ಲ ಎಂದು ಹೇಳಿಕೆ ನೀಡಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿರುತ್ತಾರೆ. ಮುಸ್ಲಿಮರು ಬಂದು ಕಟ್ಟೆಯನ್ನು ಕೆಡವಿದ ವಿಡಿಯೋ ಅಷ್ಟು ಸ್ಪಷ್ಟವಾಗಿದ್ದರೂ ಇವರು ಯಾರನ್ನು ಮೆಚ್ಚಿಸಲು ಈ ಹೇಳಿಕೆ ನೀಡಿರುತ್ತಾರೆ. ಇದೇ ಕೆಲಸವನ್ನು ಹಿಂದೂಗಳು ಮಾಡಿದ್ದರೆ ಅವರ ಮೇಲೆ ಲಾಠಿ ಚಾರ್ಜ್ ಮಾಡಿ ತಕ್ಷಣ ಪ್ರಕರಣ ದಾಖಲಿಸಿ ಹುಡುಕಿ ಅವರನ್ನು ಎಳೆದುಕೊಂಡು ಬಂದು ಅರೆಸ್ಟ್ ಮಾಡುತ್ತಿದ್ದೀರಿ. ಆದರೆ ಇಲ್ಲಿ ಮುಸ್ಲಿಮರಿಗೆ ಯಾವುದೇ ಕಾನೂನು ಇಲ್ಲ ಎಂದರು.

Prohibitory order/ ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿ

ಮುಂದಿನ ದಿನಗಳಲ್ಲಿ ನಾವು ಕಟ್ಟೆಯನ್ನು ಕಟ್ಟಿಯೇ ಸಿದ್ದ. ಅದಕ್ಕೆ ನಾವು ಪ್ರಕರಣವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧರಿದ್ದೇವೆ. ನಮ್ಮನ್ನು ತಡೆಯಿರಿ ನೋಡೋಣ. ನಿವಾಗಿ ಕಟ್ಟಿಸಿಕೊಟ್ಟರೇ ನಮ್ಮ ಅಭ್ಯಂತರ ಇಲ್ಲ. ಇಲ್ಲವಾದರೆ ನಾವು ಕಟ್ಟಿಕೊಳ್ಳುತ್ತೇವೆ ಎಂದರು.

Murinakatte/ ಮುರಿನಕಟ್ಟೆಗೆ ಮುಸ್ಲಿಮರಿಂದ ಹಾನಿ: ಹಿಂದೂಗಳಿಂದ ಠಾಣೆಗೆ ಮುತ್ತಿಗೆ

ಪಶ್ಚಿಮ ಘಟ್ಟ ಸಂರಕ್ಷಣಾ  ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Murinakatte/ ಮುರಿನಕಟ್ಟೆಗೆ ಹಾನಿ: ಭಟ್ಕಳ ಉದ್ವಿಘ್ನ