ಭಟ್ಕಳ ಡೈರಿ ವರದಿ

ಭಟ್ಕಳ: ಇಲ್ಲಿನ ವೆಲ್ಫೇರ್ ಆಸ್ಪತ್ರೆ ಹಾಗೂ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ (BMYF) ವತಿಯಿಂದ ಸೆಪ್ಟೆಂಬರ್ ೨೦ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಮಂಗಳೂರಿನ ಎ ಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಎ ಜೆ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಸಹಯೋಗದಲ್ಲಿ ನಡೆಯಲಿರುವ ಶಿಬಿರವು ಬೆಳಗ್ಗೆ ೧೦ರಿಂದ ಮಧ್ಯಾಹ್ನ ೨ರವರೆಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಮೂತ್ರಶಾಸ್ತ್ರ ತಜ್ಞ ಡಾ ರೋಷನ್ ಶೆಟ್ಟಿ, ಮಕ್ಕಳ ತಜ್ಞೆ ಡಾ ಪವಿತ್ರಾ, ಕಿವಿ-ಮೂಗು-ಗಂಟಲು ತಜ್ಞೆ ಡಾ ದೀಪಲಕ್ಷ್ಮಿ ಹಾಗೂ ಮೂಳೆ ತಜ್ಞ ಡಾ ಹನ್ನಾನ್ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸಲಹೆ ನೀಡಲಿದ್ದಾರೆ. ಉಚಿತ ಇಸಿಜಿ (ECG) ತಪಾಸಣೆಯ ಸೌಲಭ್ಯವೂ ಇರಲಿದೆ.

ಹೆಚ್ಚಿನ ಪರೀಕ್ಷೆ ಅಥವಾ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಸೇವೆಗಳು ಲಭ್ಯವಿರಲಿವೆ. ಮುಂದಿನ ಚಿಕಿತ್ಸೆಗೆ ಶಿಫಾರಸು ಮಾಡಲಾದವರಿಗೆ ಪ್ರಯೋಗಾಲಯ ಪರೀಕ್ಷೆಗಳು, ರೇಡಿಯಾಲಜಿ, ಔಷಧಿಗಳು ಹಾಗೂ ಡಯಾಗ್ನೋಸ್ಟಿಕ್ ಸೇವೆಗಳಲ್ಲಿ ಶೇ ೨೦ರಿಂದ ಶೇ ೪೦ರವರೆಗೆ ರಿಯಾಯಿತಿ ನೀಡಲಾಗುವುದು. ಆಸ್ಪತ್ರೆ ದಾಖಲಾತಿಗೂ ಅಗತ್ಯ ರಿಯಾಯಿತಿಗಳು ಅನ್ವಯವಾಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎ ಜೆ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರೀತಮ್ ಫ್ರಾನ್ಸಿಸ್ ವಾಸ್, ವೆಲ್ಫೇರ್ ಆಸ್ಪತ್ರೆಯ ಆಡಳಿತಾಧಿಕಾರಿ ಅಬುಲ್ ಅಲಾ ಬರ್ಮಾವರ್, ಬಿಎಂವೈಎಫ್ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ, ಸಾಮಾಜಿಕ ಕಾರ್ಯದರ್ಶಿ ಜಹೀರ್ ಶೇಖ್ ಹಾಗೂ ಎ ಜೆ ಆಸ್ಪತ್ರೆಯ ಎಕ್ಸಿಕ್ಯೂಟಿವ್–ಮಾರ್ಕೆಟಿಂಗ್ ಅಶ್ರಫ್ ಸದಾ ಉಪಸ್ಥಿತರಿದ್ದರು.

ಇದನ್ನೂ ಓದಿ: 

ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು

ಮುರುಡೇಶ್ವರದಲ್ಲಿ ೪೦ ಅಡಿ ಆಳದ ಬಾವಿಗೆ ಬಿದ್ದ ಹೋರಿ ರಕ್ಷಣೆ

ಆಟೋ ಚಾಲಕರ ಗಣೇಶೋತ್ಸವ ಮೈದಾನದ ಜಾಗ ರದ್ದು: ಸುನೀಲ ನಾಯ್ಕ ಆಕ್ರೋಶ