ಭಟ್ಕಳ (Bhatkal): ಶಿರಾಲಿಯ ಗುರು ನಮನ ಬಳಗದವರಿಂದ ಇಲ್ಲಿಯ ಜನತಾ ವಿದ್ಯಾಲಯದ (Janata Vidyalaya) 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸುವ (School bag distribution) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗುರು ನಮನ ಬಳಗದ ಅಧ್ಯಕ್ಷ, ಸಾಹಿತಿ- ಶಿಕ್ಷಕ ಶ್ರೀಧರ ಶೇಟ ಶಿರಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿದರು (School bag distribution). ಅವರು ಮಾತನಾಡುತ್ತಾ ನಾವೆಲ್ಲರೂ ತಂದೆ- ತಾಯಿ- ಗುರು ಮತ್ತು ಸಮಾಜದ ಋಣವನ್ನು ತೀರಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ನಮಗೆ ಇದೇ ಶಾಲೆಯಲ್ಲಿ 35-40 ವರ್ಷಗಳ ಹಿಂದೆ ಕಲಿಸಿದ ಗುರುಗಳ ಗೌರವಾರ್ಥ ಗುರುನಮನ ಬಳಗವನ್ನು ರಚಿಸಿಕೊಂಡು, ಗುರುಗಳಿಗೆ ಗುರುವಂದನೆ ಸಲ್ಲಿಸುವುದರ ಜೊತೆಗೆ ಅವರ ಹೆಸರಿನಲ್ಲಿ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಇದನ್ನು ಓದಿ: Fake Aadhar card/ ನಕಲಿ ಆಧಾರ್ ಕಾರ್ಡ್ ಬಳಸಿದ ಇಬ್ಬರ ವಿರುದ್ದ ಕೇಸ್
ಗುರುನಮನ ಬಳಗದ ಕಾರ್ಯದರ್ಶಿ ಮಂಜುನಾಥ ಕೋಡಿಹಿತ್ತಲು ಪ್ರಾಸ್ತಾವಿಕ ಮಾತನಾಡಿ, ಗುರುನಮನ ಬಳಗ ಬೆಳೆದು ಬಂದ ದಾರಿ ವಿವರಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ, ಜನತಾ ವಿದ್ಯಾಲಯ ಪೂರ್ವ ವಿದ್ಯಾರ್ಥಿಗಳ ಪರಿವಾರದ ಅಧ್ಯಕ್ಷ ಶಂಕರ ನಾಯ್ಕ, ಉಪಾಧ್ಯಕ್ಷ ಪ್ರಭಾಕರ ನಾಯ್ಕ, ಸಹ ಕಾರ್ಯದರ್ಶಿ ಪತ್ರಕರ್ತ ವಿಷ್ಣು ದೇವಡಿಗ, ಖಜಾಂಚಿ ರಾಮರಾಯ ಕಾಮತ, ಜನತಾ ವಿದ್ಯಾಲಯ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಹೆಗಡೆ ಸಾಂದರ್ಭಿಕವಾಗಿ ಮಾತನಾಡಿದರು.
ಇದನ್ನು ಓದಿ: Roof collapse / ಭಾರಿ ಮಳೆಗೆ ಶಿಥಿಲ ಮನೆಯ ಮೇಲ್ಚಾವಣಿ ಕುಸಿತ
ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ರಾಮಕೃಷ್ಣ ಪ್ರಭು ಉಚಿತವಾಗಿ ನೀಡಿದ ಕಂಪಾಸ್ ಬಾಕ್ಸ್ ಗಳನ್ನು ವಿತರಿಸಲಾಯಿತು. ಪರಿವಾರದ ಕಾರ್ಯದರ್ಶಿ ನಟರಾಜ ದೇವಡಿಗ ನಿರೂಪಿಸಿದರು. ಶಿಕ್ಷಕಿ ಲೀಲಾವತಿ ಮೊಗೇರ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಆಶಾ ಭಟ್ ವಂದಿಸಿದರು. ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
ಇದನ್ನು ಓದಿ: RNS College/ ಆರ್ ಎನ್ ಶೆಟ್ಟಿ ಕಾಲೇಜಿನಲ್ಲಿ ಸ್ವಾಗತ ಕಾರ್ಯಕ್ರಮ



