ಭಟ್ಕಳ (Bhatkal): ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಬೀದಿಗಳಲ್ಲಿ ಆಟವಾಡುವ ಮಕ್ಕಳು ಸೇರಿದಂತೆ ಹಲವರ ಮೇಲೆ ಮಾರಾಣಾಂತಿಕ ಹಲ್ಲೆ (dog bite) ನಡೆಸುತ್ತಿವೆ. ಬೆನ್ನಟ್ಟಿ ಬರುವ ನಾಯಿಗಳಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಪರದಾಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಳಗಿನ ಜಾವ ತರಗತಿಗಳಿಗೆ ಮನೆಯಿಂದ ಹೊರಡುವ ವಿದ್ಯಾರ್ಥಿಗಳು ಅಥವಾ ತಡರಾತ್ರಿ ಪಾಳಿಯಿಂದ ಮನೆಗೆ ಮರಳುವ ಕಾರ್ಮಿಕರು, ಬೀದಿಗಳಲ್ಲಿ ಆಟವಾಡುವ ಮಕ್ಕಳು ಸೇರಿದಂತೆ ಹಲವು ಜನರನ್ನು ನಾಯಿಗಳ ಹಿಂಡುಗಳು ಅವುಗಳನ್ನು ಆಕ್ರಮಣಕಾರಿಯಾಗಿ ಬೆನ್ನಟ್ಟುತ್ತವೆ.

ಇದನ್ನು ಓದಿ: Lok Adalat / ೧೨ರಂದು ರಾಷ್ಟ್ರೀಯ ಬೃಹತ್ ಲೋಕ ಅದಾಲತ್ 

ಕಳೆದ ಮೂರು ದಿನಗಳಲ್ಲಿ ಮೂವರು ಬಾಲಕರು ಹಾಗೂ ಒರ್ವ ಕಾರು ಚಾಲಕರ ಮೇಲೆ ಶ್ವಾನ ದಾಳಿ ನಡೆಸಿ ಹಲ್ಲೆ ಮಾಡಿದೆ (dog bite).  ಪಟ್ಟಣದ ಜಾಲಿ ಕ್ರಾಸ್‌ನ ಬಳಿಯಲ್ಲಿ ಶ್ವಾನಗಳ ಗುಂಪೊಂದು ಬಾಲಕನ ಮೇಲೆ ಎರಗಿ, ಬಾಲಕನ ಕೆನ್ನೆ, ತಲೆ, ಕುತ್ತಿಗೆ ಸೇರಿದಂತೆ ಹಲವೆಡೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆದಿದ್ದಾನೆ. ಕಳೆದ ಹಲವು ದಿನಗಳಿಂದ ಮದಿನಾ ಕಾಲನಿ, ಮಗ್ದೂಮ್ ಕಾಲನಿ, ಜಾಲಿ ಕ್ರಾಸ್ ವಿವಿಧಡೆ ನಾಯಿಗಳ ದಾಳಿ ಹೆಚ್ಚಾಗಿದೆ. ಕಳೆದ ಮೂರು ದಿನಗಳಲ್ಲಿ ಭಟ್ಕಳ ಸರ್ಕಾರಿ ಅಸ್ಪತ್ರೆಯಲ್ಲಿ ೧೮ ಪ್ರಾಣಿ ಕಡಿತದ ಪ್ರಕರಣಗಳು ದಾಖಲಾಗಿದ್ದು, ಹಲವರು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ: Aashadha Ekadashi/ ಶ್ರೀ ಕ್ಷೇತ್ರ ಹೂತ್ಕಳದಲ್ಲಿ ಲಕ್ಷ ತುಳಸಿ ಅರ್ಚನೆ