ಭಟ್ಕಳ: ಕರಾವಳಿ ಪ್ರದೇಶದಲ್ಲಿ (coastal region) ಸುರಿಯುತ್ತಿರುವ ಭಾರಿ ಮಳೆಗೆ ಕಾಡು ಪ್ರದೇಶಗಳಿಂದ (forest area) ಹಾವುಗಳು (snakes) ಹೊರಬಂದು ಮನೆಗಳಿಗೆ ಲಗ್ಗೆ ಇಡುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಮೂಡಭಟ್ಕಳದ ಹೆಬ್ಬಾಗಿಲು ಗ್ರಾಮದಲ್ಲಿ ಒಂದೇ ದಿನದಲ್ಲಿ ಎರಡು ಹೆಬ್ಬಾವುಗಳು ಮನೆಗಳಲ್ಲಿ ಪತ್ತೆಯಾಗಿವೆ. ಶೀಧರ ಭಟ್ಟರ ದನದ ಕೊಟ್ಟಿಗೆಯ ಹುಲ್ಲಿನ ರಾಶಿಯಲ್ಲಿ ಸುಮಾರು ೭ ಅಡಿ ಉದ್ದದ ಹೆಬ್ಬಾವು ಅಡಗಿ ಇದ್ದರೆ, ಮಂಜುನಾಥ ನಾಯ್ಕರ ಮನೆಯಲ್ಲಿ ೧೦ ಅಡಿ ಉದ್ದದ ಮತ್ತೊಂದು ಹೆಬ್ಬಾವು ಬಂದು ಅಡಗಿಕೊಂಡಿತ್ತು.
ಇದನ್ನು ಓದಿ: Sharabi river? ಶರಾಬಿ ನದಿ ಶುದ್ಧಗೊಳ್ಳುತ್ತಾ??
ಹಾವುಗಳು (snakes) ಮನೆಗಳ ಒಳಗೆ ನುಗ್ಗಿದ ಹಿನ್ನೆಲೆಯಲ್ಲಿ ಮನೆಮಂದಿ ಹಾಗೂ ನೆರೆಹೊರೆಯವರು ಭಯಭೀತರಾದರು. ಸ್ಥಳೀಯರಿಂದ ಮಾಹಿತಿ ಪಡೆದ ಕೂಡಲೇ ಉರಗ ಪ್ರೇಮಿಗಳಾದ ಲೋಕೇಶ ನಾಯ್ಕ (ಮುಟ್ಟಳಿ) ಹಾಗೂ ಮಾದೇವ ನಾಯ್ಕ (ಪುರವರ್ಗ) ಸ್ಥಳಕ್ಕೆ ಧಾವಿಸಿ ಚುರುಕಿನ ಕಾರ್ಯಾಚರಣೆ ನಡೆಸಿ ಎರಡೂ ಹೆಬ್ಬಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಈ ಹಾವುಗಳ ತೂಕ ಸುಮಾರು ೧೦ರಿಂದ ೨೫ ಕೆ ಜಿ ಇದ್ದುದಾಗಿ ಅಂದಾಜಿಸಲಾಗಿದೆ.
ಇದನ್ನು ಓದಿ: Tragic incident/ ಜೋಕಾಲಿ ಆಡುವಾಗ ಕುತ್ತಿಗೆಗೆ ಬಿಗಿದ ಶಾಲು, ಮುಂದೇನಾಯ್ತು ?



