ಭಟ್ಕಳ: ಶ್ರೀ ಧರ್ಮಸ್ಥಳ (Dharmasthala) ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ , ಶಾಂತಿವನ ಟ್ರಸ್ಟ್ ಇತ್ತೀಚೆಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ಚಿತ್ರಾಪುರ ಮಠದ ಆಡಳಿತದಲ್ಲಿ ಬರುವ ಶ್ರೀವಲ್ಲಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಮಟ್ಟದಲ್ಲಿ ಸಾಧನೆ (Achievements) ತೋರಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶ್ರೀ ಕ್ಷೇತ್ರದ ಶಾಂತಿವನ ಟ್ರಸ್ಟ್ ನ ಪ್ರಕಟಣೆಯಾದ ಜ್ಞಾನ ಪಥ ಪುಸ್ತಕದ ಆಧಾರಿತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರದ ವಿದ್ಯಾರ್ಥಿ ಹರ್ಷದ್ ಮಂಜು ಗೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ನಾಗರಾಜ ಕೃಷ್ಣ ನಾಯ್ಕ ಭಾಷಣ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದು (Achievements) ಭಟ್ಕಳ (Bhatkal) ತಾಲೂಕು ಹಾಗೂ ಶ್ರೀವಲ್ಲಿ ಪ್ರೌಢಶಾಲೆಗೆ ಕೀರ್ತಿ ತಂದಿರುತ್ತಾರೆ.
ಇದನ್ನು ಓದಿ: Karki Shri/ ಭಟ್ಕಳದಲ್ಲಿ ‘ದೈವಜ್ಞ ದರ್ಶನ’ ಕಾರ್ಯಕ್ರಮ
ಶ್ರೀ ಕ್ಷೇತ್ರದ ಮಹೋತ್ಸವ ಸಭಾಭವನದಲ್ಲಿ ನಡೆದ ಅತ್ಯಂತ ಶಿಸ್ತು ಬದ್ಧ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀ ವೀರೇಂದ್ರ ಹೆಗ್ಗಡೆ ಹಾಜರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಪುರಸ್ಕರಿಸಿದ್ದು ವಿದ್ಯಾರ್ಥಿಗಳಿಗೆ ಅತ್ಯಂತ ಸಂತಷದಾಯಕ ಸಂಗತಿಯಾಗಿತ್ತು. ವೇದಿಕೆಯಲ್ಲಿ ಹೇಮಾವತಿ ಹೆಗ್ಗಡೆಯವರು, ವಾಗ್ಮಿಗಳಾದ ಸಂಧ್ಯಾ ಪೈ, ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಶಶಿಕಾಂತ್ ಜೈನ್, ನಿತ್ಯಾನಂದ ಪಡ್ರೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಇದನ್ನು ಓದಿ: Identification/ ಮೃತದೇಹದ ಗುರುತು ಪತ್ತೆ
ವಿಜೇತ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸಂಜಯ ಗುಡಿಗಾರ ಚಿತ್ರಕಲೆಯಲ್ಲಿ ಹಾಗೂ ರೇಷ್ಮಾ ನಾಯಕ ಭಾಷಣ ಸ್ಪರ್ಧೆಗೆ ಮಾರ್ಗದರ್ಶನ ನೀಡಿದ್ದರು.
ಇದನ್ನು ಓದಿ: Assault/ ಬೇಲಿಪ್ ಮೇಲೆ ಸಹೋದರರಿಬ್ಬರು ಹಲ್ಲೆ



