ಭಟ್ಕಳ: ಸ್ವಾಮಿ ವಿವೇಕಾನಂದ ದಿನಾಚರಣೆಯ ಪ್ರಯುಕ್ತ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ‘ಯುವ-೨೦೨೬’ ಕಾರ್ಯಕ್ರಮ ಜರುಗಿತು. ತನಿಮಿತ್ತ (AI course) ಎ ಐ ಕೋರ್ಸ್ ಅನಾವರಣಗೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಧುನಿಕ ತಂತ್ರಜ್ಞಾನ ಕಲಿಕೆಯಿಂದ ಯುವ ಜನತೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಅನುಕೂಲ ವಾಗುವುಂತೆ ಕಾಲೇಜಿನ ಬಿ ಕಾಂ, ಬಿಬಿಎ, ಬಿಸಿಎ ಕೋರ್ಸ ನ ಯುವ ವಿದ್ಯಾರ್ಥಿಗಳಿಗೆ ಆರ್ಟಿಫೀಶಲ್ ಇಂಟೆಲಿಜೆನ್ಸ್ ಕಲಿಕೆ ಪೂರಕವಾದ ಎಸ್.ಜಿ.ಎಸ್.ಸಿ ಎ.ಐ ಹಬ್ ನ ಅಡಿಯಲ್ಲಿ ಕಾಮರ್ಸ ವಿತ ಎ ಐ, ಬ್ಯುಸಿನೆಸ್ ವಿತ ಎ ಐ, ಟೆಕ್ನಾಲಜಿ ವಿತ ಎ ಐ ಎಂಬ ವಿನೂತನವಾದ ಪೂರಕ ತರಬೇತಿಯನ್ನು (AI course) ಅನಾವರಣಗೊಳಿಸಲಾಯಿತು.
ಇದನ್ನು ಓದಿ: Marikamba Temple/ ನೂತನ ಆಡಳಿತ ಮಂಡಳಿ ಘೋಷಣೆ
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಅಧ್ಯಕ್ಷ ಡಾ ಸುರೇಶ ನಾಯಕ, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಕಾಲೇಜು ಕೈಗೊಳ್ಳುತ್ತಿರುವ ತರಬೇತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿ: government school/ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ
ಬಿಸಿಎ ಉಪ ಪ್ರಾಚಾರ್ಯ ವಿಖ್ಯಾತ್ ಪ್ರಭು, ಎ.ಐ ತರಬೇತಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಪ್ರಾಚಾರ್ಯ ಶ್ರೀನಾಥ ಪೈ ಮಾತನಾಡಿ, ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅವರ ಉದ್ಯೋಗ ಸಾಮರ್ಥ್ಯ ಸುಧಾರಿಸಲು ಮತ್ತು ವೃತ್ತಿಪರ ಜಗತ್ತಿಗೆ ಅವರ ಸಿದ್ಧತೆ ಉತ್ತಮಗೊಳಿಸಲು ಸಹಕಾರಿ ಎಂದರು. ಬಿ ಕಾಂ ಅಕಾಡೆಮಿಕ ಸಂಯೋಜಕ ವಿಘ್ಞೇಶ ಪ್ರಭು, ಬಿಬಿಎ ಉಪ ಪ್ರಾಚಾರ್ಯ ವಿಶ್ವನಾಥ ಭಟ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನು ಓದಿ: wild boar/ ಕಾಡು ಹಂದಿ ಅಡ್ಡ ಬಂದು ಆಟೋ ಪಲ್ಟಿ, ಚಾಲಕ ಗಂಭೀರ



