ಭಟ್ಕಳ: ತಾಲೂಕಿನ ಆರಾಧ್ಯ ದೇವತೆ ಶ್ರೀ ಮಾರಿಕಾಂಬ ದೇವಸ್ಥಾನದ (Marikamba Temple) ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶ್ರೀಪಾದ ಕಂಚುಗಾರ, ಉಪಾಧ್ಯಕ್ಷರಾಗಿ ಸುರೇಶ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಕೃಷ್ಣ ಮಹಾಲೆ ಆಯ್ಕೆಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಧಾರ್ಮಿಕ ಪರಂಪರೆ, ಪಾವಿತ್ರ್ಯ ಮತ್ತು ಸೇವಾಭಾವನೆಗೆ ಹೆಸರಾಗಿರುವ ಮಾರಿಕಾಂಬ ದೇವಸ್ಥಾನದ (Marikamba Temple) ಆಡಳಿತವನ್ನು ಮುಂದುವರಿಸಲು ನಿಷ್ಠಾವಂತ ಹಾಗೂ ಸಮಾಜಸೇವೆಗೆ ಬದ್ಧರಾದ ವ್ಯಕ್ತಿಗಳು ಆಯ್ಕೆಯಾಗಿದ್ದಾರೆ. ಇವರ ನೇತೃತ್ವದಲ್ಲಿ ದೇವಸ್ಥಾನದ ಅಭಿವೃದ್ಧಿ, ಭಕ್ತರ ಸೌಲಭ್ಯಗಳ ವೃದ್ಧಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ಸಿಗಲಿದೆ ಎಂಬ ವಿಶ್ವಾಸ ಭಕ್ತರಲ್ಲಿ ಮೂಡಿದೆ.

ಇದನ್ನು ಓದಿ: wild boar/ ಕಾಡು ಹಂದಿ ಅಡ್ಡ ಬಂದು ಆಟೋ ಪಲ್ಟಿ, ಚಾಲಕ ಗಂಭೀರ