ಭಟ್ಕಳ: ತರಕಾರಿ ವ್ಯಾಪಾರಿಯನ್ನು ಹೆದರಿಸಿ 20 ಲಕ್ಷ ರೂ ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ ಶಹರ ಪೊಲೀಸರು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ (Bhatkal police arrest).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಟಗಾಂವಿನ ಕಿದ್ವಾಯಿ ರಸ್ತೆಯ ನಿವಾಸಿ ಅನ್ವರಭಾಷ (೫೭) ನಮ್ಮ ತರಕಾರಿ ಅಂಗಡಿಯಲ್ಲಿ ಇದ್ದಾಗ, ಆಗಸ್ಟ್ ೧೬ರ ರಾತ್ರಿ ಒಬ್ಬ ಅಪರಿಚಿತ ಕರೆ ಮಾಡಿ, “ನಿನ್ನ ಮಗಳ ಖಾಸಗಿ ಫೋಟೋ, ವೀಡಿಯೋ ನನ್ನ ಬಳಿ ಇದೆ. ತಕ್ಷಣ ೨೦ ಲಕ್ಷ ರೂ ಕೊಡಬೇಕು. ಇಲ್ಲವಾದರೆ ಎಲ್ಲರಿಗೂ ಕಳುಹಿಸಿ ನಿನ್ನ ಮಾನ ಹಾಳು ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದ. ನಂತರ ಆಗಸ್ಟ್ ೧೮ ಮತ್ತು ೧೯ರಂದು ವ್ಯಾಪಾರಿಯ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ, “೧೫ ಲಕ್ಷ ರೂ ಆದರೂ ಕೊಡಬೇಕು” ಎಂದು ಒತ್ತಾಯಿಸಿದ್ದ. ಬೆದರಿಕೆಗಳಿಂದ ಕಂಗಾಲಾದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ಓದಿ: Dakke Kunita/ ದುಬೈಗೆ ತೆರಳಲಿದೆ ಭಟ್ಕಳದ ಡಕ್ಕೆ ಕುಣಿತ
ದೂರಿನ ಮೇಲೆ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ದಿವಾಕರ ಪಿ ಎಮ್ ಹಾಗೂ ಪಿ ಎಸ್ ಐ ನವೀನ್ ಎಸ್ ನಾಯ್ಕ ನೇತೃತ್ವದ ಪ್ರತ್ಯೇಕ ತಂಡ ಆರೋಪಿಗಳಾದ ಭಟ್ಕಳದ ಅಬ್ದುಹುರೇರಾ ಕಾಲೋನಿಯ ಮೊಹಮ್ಮದ ಫಾರಿಸ್ (೨೦), ಭಟ್ಕಳದ ಮೂಸಾನಗರದ ಮೊಹಮ್ಮದ ಅರ್ಷದ (೨೨) ಮತ್ತು ಕುಂದಾಪುರದ ಹಾಲಾಡಿ ನಿವಾಸಿಯಾಗಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ಅಮನ್ (೨೦) ಎಂಬವರನ್ನು ಪತ್ತೆ ಹಚ್ಚಿ ಬಂಧಿಸಿದೆ (Bhatkal police arrest). ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನು ಓದಿ: Breaking News/ ಟ್ಯಾಂಕರ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಈ ಕಾರ್ಯಾಚರಣೆ ಡಿವೈಎಸ್ಪಿ ಮಹೇಶ್ ಎಂ ಕೆ ಮಾರ್ಗದರ್ಶನದಲ್ಲಿ ನಡೆದಿದೆ. ಠಾಣೆಯ ಸಿಬ್ಬಂದಿ ದಿನೇಶ ನಾಯಕ, ವಿನಾಯಕ ಪಾಟೀಲ, ನಾಗರಾಜ ಮೊಗೇರ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗುಣಸಿ, ಲೊಕೇಶ ಕತ್ತಿ, ಮಹೇಶ ಅಮಗೋತ ರಾಘವೇಂದ್ರ ಗೌಡ, ಜಗದೀಶ ನಾಯ್ಕ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಬಬನ್ ಮತ್ತು ಉದಯ ಗುನಗಾ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿ: Threat / ಖಾಸಗಿ ಫೋಟೋ, ವಿಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ



