ಭಟ್ಕಳ: ತಾಲೂಕಿನ ಹೆಬಳೆ ಗ್ರಾಮದ ಗಾಂಧಿ ನಗರದಲ್ಲಿರುವ ಹೋಟೆಲ್‌ಗೆ ನುಗ್ಗಿ ಗಲಾಟೆ ನಡೆಸಿ ವಸ್ತುಗಳನ್ನು ಒಡೆದು ಹಾಕಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮೂವರ ವಿರುದ್ಧ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೆಬಳೆ ಗ್ರಾಮದ ಗಾಂಧಿನಗರ ನಿವಾಸಿ ಗೋವಿಂದಯ್ಯ ನಾಯ್ಕ (41) ಅವರು ನೀಡಿದ ದೂರಿನ ಮೇರೆಗೆ ದರ್ಶನ ಮೊಗೇರ, ಮಂಜು ಗೊಂಡ ಹಾಗೂ ಹೇಮಂತ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬುಧವಾರ ರಾತ್ರಿ ಗೋವಿಂದಯ್ಯ ನಾಯ್ಕ ತಮ್ಮ ಹೋಟೆಲ್‌ನಲ್ಲಿ ಗ್ರಾಹಕರಿಗೆ ಚಹಾ ಹಾಗೂ ತಿಂಡಿ ನೀಡುತ್ತಿದ್ದ ವೇಳೆ ಆರೋಪಿಗಳು ಹೋಟೆಲ್‌ಗೆ ನುಗ್ಗಿ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಹೋಟೆಲ್ ಬಂದ್ ಮಾಡುವಂತೆ ಒತ್ತಾಯಿಸಿ ಕೌಂಟರ್‌ನಲ್ಲಿದ್ದ ಹಣದ ಪೆಟ್ಟಿಗೆಯಲ್ಲಿ ಕೈ ಹಾಕಿ ಹಣ ತೆಗೆದುಕೊಳ್ಳಲು ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Holi festival/ ಖಾರ್ವಿ ಸಮಾಜದ ಹೋಳಿ ಹಬ್ಬ-ಕಡಲ ತೀರದಲ್ಲಿ ವಿಶಿಷ್ಟ ಆಚರಣೆ
ಇದೇ ವೇಳೆ ಹೋಟೆಲ್‌ನಲ್ಲಿದ್ದ ಟೀ ಗ್ಲಾಸ್ ಹಾಗೂ ಬಾಟಲ್‌ಗಳನ್ನು ಒಡೆದು ಹಾಕಿ, ಟೇಬಲ್ ಮತ್ತು ಕುರ್ಚಿಗಳನ್ನು ಎಸೆದು ಅಲ್ಲಿ ಇದ್ದವರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಹೋಟೆಲ್‌ಗೆ ಚಹಾ ಕುಡಿಯಲು ಬಂದಿದ್ದ ದುರ್ಗಪ್ಪ ನಾರಾಯಣ ಮೊಗೇರ್ (53) ಅವರನ್ನು ತಡೆದು ಕೈ ಹಾಗೂ ಕುರ್ಚಿಯಿಂದ ಹೊಡೆದು ಗಾಯಪಡಿಸಿದ್ದಲ್ಲದೆ, ಮತ್ತೆ ಹೋಟೆಲ್ ತೆರೆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Fuel shortage/ ಇಂಧನ ವ್ಯತ್ಯಯ ಭೀತಿ: ಭಟ್ಕಳದ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲು
ಈ ಕುರಿತು ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Case filed/ ವ್ಯಕ್ತಿಯಿಂದ ವಂಚನೆ: ಮಹಿಳೆಯಿಂದ ದೂರು



