ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ಗುಡಿಹಿತ್ತಲಿನ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಜಾಯಿಕಾಯಿ ಹಿತ್ತಲ ಕ್ರಾಸ್ ಬಳಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ (Bike accident) ದಂಪತಿ ಗಾಯಗೊಂಡಿದ್ದಾರೆ (Couple injured). ಶಿರಾಲಿಯ ಮೊಗೇರಕೇರಿ ನಿವಾಸಿ ರಮೇಶ ಮಾದೇವ ಮೊಗೇರ ನೀಡಿದ ದೂರಿನ ಮೇರೆಗೆ, ಗುಡಿಹಿತ್ತಲ ಗ್ರಾಮದ ನಿವಾಸಿ ಇಶಾಮ್ ಹಸನಸಾಬ್ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೂರಿನ ಪ್ರಕಾರ, ರಮೇಶ ಅವರು ತಮ್ಮ ಪತ್ನಿ ಮೋಹಿನಿ ರಮೇಶ ಮೊಗೇರ (೩೧) ಅವರೊಂದಿಗೆ ಬೈಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ(national highway)-೬೬ ಕಡೆಯಿಂದ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದ ಕಡೆಗೆ ತೆರಳುತ್ತಿದ್ದ ವೇಳೆ, ಇಶಾಮ್ ಹಸನಸಾಬ್ ತನ್ನ ಬೈಕನ್ನು ಗುಡಿಹಿತ್ತಲ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ-೬೬ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರು ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ (Bike accident) ಎಂದು ಆರೋಪಿಸಲಾಗಿದೆ. ಅಪಘಾತದಲ್ಲಿ ರಮೇಶ ಹಾಗೂ ಹಿಂಬದಿ ಸವಾರರಾಗಿದ್ದ ಅವರ ಪತ್ನಿ ಮೋಹಿನಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದಿದ್ದಾರೆ (couple injured).

Tribute/ ಶಿಕ್ಷಣದ ಮಹಾನ್ ಚೇತನ ಡಾ ಸುರೇಶ ನಾಯಕ