ಭಟ್ಕಳ: ತಾಲೂಕಿನ ಸರ್ಪನಕಟ್ಟಾ ರೈಲ್ವೆ ಸೇತುವೆ ಸಮೀಪ ಭಾನುವಾರ (ಜ.4) ಬೆಳಗಿನ ಜಾವ ಅಪರಿಚಿತ ವ್ಯಕ್ತಿಯೊಬ್ಬರ (unidentified man) ಶವ ಪತ್ತೆಯಾಗಿದ್ದು, ರೈಲಿನ ಅಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮೃತ ವ್ಯಕ್ತಿ ಸುಮಾರು 35 ರಿಂದ 45 ವರ್ಷ ವಯಸ್ಸಿನ ಗಂಡಸಾಗಿದ್ದು (unidentified man), ಬೆಳಗಿನ ಜಾವ 4 ಗಂಟೆಗೆ ಮುನ್ನ ರೈಲ್ವೆ ಹಳಿಯ ಮೇಲೆ ಸಂಚರಿಸುತ್ತಿದ್ದ ರೈಲಿನ ಅಡಿಗೆ ಬಿದ್ದಿರುವ ಸಾಧ್ಯತೆ ಇದೆ.

ಇದನ್ನು ಓದಿ: Laborer injured/ ಭಟ್ಕಳದಲ್ಲಿ ಬೈಕ್ ಡಿಕ್ಕಿಯಾಗಿ ಕೂಲಿ ಕಾರ್ಮಿಕನಿಗೆ ಗಾಯ

ಮೃತದೇಹದ ಮೇಲೆ ನೀಲಿ ಬಣ್ಣದ ಚಡ್ಡಿ, ಕಡು ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಇದ್ದು, ಬಲ ಕೈಯಲ್ಲಿ ದಾರ (ಕೈದಾರ) ಕಂಡುಬಂದಿದೆ. ಮೃತನ ಹೆಸರು, ವಿಳಾಸ ಹಾಗೂ ಗುರುತು ಇನ್ನೂ ಪತ್ತೆಯಾಗಿಲ್ಲ.

ಇದನ್ನು ಓದಿ: car collision/ ಅತೀ ವೇಗದ ಕಾರು ಡಿಕ್ಕಿ: ಬೈಕ್ ಸವಾರ ಗಂಭೀರ

ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೃತನ ಗುರುತು ಪತ್ತೆಗಾಗಿ ಪೊಲೀಸರು ಪ್ರಯತ್ನ ಮುಂದುವರಿಸಿದ್ದು, ತಮ್ಮ ವ್ಯಾಪ್ತಿಯಲ್ಲಿ ಕಾಣೆಯಾದ ವ್ಯಕ್ತಿಗಳ ಪ್ರಕರಣಗಳೊಂದಿಗೆ ಚಹರೆ ಹೊಂದಿಕೆಯಾಗಿದ್ದರೆ ಅಥವಾ ಮೃತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇದನ್ನು ಓದಿ: Online fraud/ ಭಟ್ಕಳದಲ್ಲಿ ಆನ್‌ಲೈನ್ ವಂಚನೆ – ೧.೫೫ ಲಕ್ಷ ಹಣ ವರ್ಗಾವಣೆ

ಸಂಪರ್ಕ: ☎ 08385-226813 | 08385-227333 | 📱 9480805252 ತುರ್ತು ಸಹಾಯ: 100