ಭಟ್ಕಳ: ಮುರ್ಡೇಶ್ವರ (Murdeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಮೂರು ಮೊಬೈಲ್‌ಗಳನ್ನು ಸಿಈಐಆರ್ ಪೋರ್ಟಲ್ (CEIR portal) ಮೂಲಕ ಪತ್ತೆಹಚ್ಚಿದ ಪೊಲೀಸರು, ಅವುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆಯ ಪಿಎಸೈ ಹನುಮಂತ ಬಿರಾದಾರ ನೇತೃತ್ವದ ತಂಡವು ತಾಂತ್ರಿಕ ತನಿಖೆ ನಡೆಸಿ ಕಾಣೆಯಾದ ಮೊಬೈಲ್‌ಗಳ ಸುಳಿವು ಪತ್ತೆಹಚ್ಚಿತು. ಬಳಿಕ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆಯ ನಂತರ ಅವುಗಳನ್ನು ನಿಜವಾದ ವಾರಸುದಾರರಿಗೆ ಮರಳಿ ನೀಡಲಾಯಿತು. ಮೊಬೈಲ್‌ಗಳನ್ನು ಮರಳಿ ಪಡೆದ ಸಾರ್ವಜನಿಕರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪಿಎಸೈ ಹನುಮಂತ ಬಿರಾದಾರ ಹಾಗೂ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

Sewage water/ ವೃದ್ಧ ದಂಪತಿಯ ಮನೆಗೆ ನುಗ್ಗಿದ ಚರಂಡಿ ನೀರು 

ಈ ಸಂದರ್ಭದಲ್ಲಿ, ಮೊಬೈಲ್ ಫೋನ್ ಕಳೆದುಹೋದ ಕೂಡಲೇ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಿಈಐಆರ್ ಪೋರ್ಟಲ್ (CEIR portal) ಮೂಲಕ ಮಾಹಿತಿಯನ್ನು ನೋಂದಾಯಿಸಿದರೆ ಪತ್ತೆ ಕಾರ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Karate/ ಬ್ಲಾಕ್ ಬೆಲ್ಟ್ ವಿತರಣೆ