ಭಟ್ಕಳ: ತಾಲೂಕಿನ ತಟ್ಟಿಹಕ್ಕಲು ಬಳಿಯ ಹೊಳೆಯಲ್ಲಿ ನಡೆದ ಚಿಪ್ಪಿಕಲ್ಲು ದುರಂತದ (Chippikallu tragedy) ವೇಳೆ ಯುವಕನೊಬ್ಬನ ಅಪ್ರತಿಮ ಸಾಹಸ ಇಡೀ ಭಟ್ಕಳದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ತೆಂಗಿನಗುಂಡಿಯ ಹೆಬಳೆ ಗ್ರಾಮದ ಬುದವಂತರ ಮನೆಯ ಯುವಕ ಗಿರೀಶ ದಿನಕರ ಮೊಗೇರ ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ಇಬ್ಬರ ಪ್ರಾಣವನ್ನು ಉಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದುರ್ಘಟನೆ ಸಂಭವಿಸುತ್ತಿರುವುದನ್ನು (Chippikallu tragedy) ಸ್ವಲ್ಪ ದೂರದ ತಮ್ಮ ಮನೆಯಿಂದಲೇ ಗಮನಿಸಿದ ಗಿರೀಶ, ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದರು. ತಮ್ಮ ದೋಣಿಯನ್ನು ತೆಗೆದುಕೊಂಡು ಮಿಂಚಿನ ವೇಗದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ ಅವರು, ನೀರಿನಲ್ಲಿ ಸಿಲುಕಿದ್ದ ಅಸಹಾಯಕ ಮುಗ್ಧ ಜನರನ್ನು ರಕ್ಷಿಸಲು ಮುಂದಾದರು.
ಭಟ್ಕಳ ದುರಂತ: ಮೃತಪಟ್ಟವರು ಒಟ್ಟು 11 ಮಂದಿ
ಅವರ ಈ ಸಾಹಸದಿಂದ ಇಬ್ಬರ ಪ್ರಾಣ ಉಳಿದಿದೆ. ಅಷ್ಟೇ ಅಲ್ಲದೆ, ಆರು ಮಂದಿಯ ಮೃತದೇಹಗಳನ್ನು ಗೌರವಯುತವಾಗಿ ದಡಕ್ಕೆ ತಲುಪಿಸಿದ್ದಾರೆ. ಅವರು ತೋರಿದ ನಿಸ್ವಾರ್ಥ ಸೇವೆ (Selfless service), ಸಮಯಪ್ರಜ್ಞೆ (punctuality) ಮತ್ತು ಸಾಹಸ(adventure)ವನ್ನು ಊರಿನ ಜನತೆ ಮುಕ್ತ ಕಂಠದಿಂದ ಶ್ಲಾಘಿಸುತ್ತಿದೆ.
Bhatkal tragedy/ ಭಟ್ಕಳ ಸಂತ್ರಸ್ತರಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ
