ಭಟ್ಕಳ: ರಾಷ್ಟ್ರೀಯ ಹೆದ್ದಾರಿ (National Highway)–66 ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಸೂಸಗಡಿ ಹೋಬಳಿಯ ಸೂಸಗಡಿ ಗ್ರಾಮದ ರಂಗಿನಕಟ್ಟೆ ಬಳಿ ಇರುವ ಅಶ್ವತ್ಥ ಮರದ ಕಟ್ಟೆಯನ್ನು ತೆರವುಗೊಳಿಸಲು (clearance) ತಾಲೂಕು ಆಡಳಿತ ನಿರ್ಧರಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಸಂಬಂಧ ಉತ್ತರ ಕನ್ನಡ (Uttara Kannada) ಜಿಲ್ಲಾಧಿಕಾರಿ ಆದೇಶದಂತೆ, ಸರ್ವೆ ನಂ 604ರಲ್ಲಿನ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಜಮೀನಿನ ಮಾಲೀಕರು ಸ್ವಾಧೀನ ನೋಟೀಸ್‌ಗೆ ಸ್ಪಂದಿಸದ ಕಾರಣ, ಭಟ್ಕಳ (Bhatkal) ತಹಶೀಲ್ದಾರರಿಗೆ ಜಮೀನನ್ನು ಬಲವಂತವಾಗಿ ಸ್ವಾಧೀನ ಪಡೆಯುವಂತೆ ಸೂಚನೆ ನೀಡಲಾಗಿದೆ.

ಇದನ್ನು ಓದಿ: Bomb threat/ ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ

ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದು, ರಂಗಿನಕಟ್ಟೆಯಲ್ಲಿರುವ ಅಶ್ವತ್ಥ ಕಟ್ಟೆ ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: Golden chain/ ಕೋರಿಯರ್‌ ನೆಪದಲ್ಲಿ ಅಜ್ಜಿಯ ಚಿನ್ನದ ಸರ ಹರಿದು ಪರಾರಿ

ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಅಶ್ವತ್ಥ ಕಟ್ಟೆಗೆ ಸಂಬಂಧಿಸಿದ ಪೂಜೆ, ಪ್ರಾರ್ಥನೆ ಹಾಗೂ ಇತರೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಡಿಸೆಂಬರ್ 23, 2025ರವರೆಗೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ವೈಯಕ್ತಿಕವಾಗಿ ಅಥವಾ ಒಟ್ಟಾಗಿ ಪೂಜೆ–ಕಾರ್ಯಕ್ರಮಗಳನ್ನು ನಡೆಸಿಕೊಳ್ಳಬಹುದು.

ಇದನ್ನು ಓದಿ: Blood donation/ ರಕ್ತದಾನ ಶಿಬಿರ ಉದ್ಘಾಟನೆ

ಡಿಸೆಂಬರ್ 24, 2025ರಂದು ಜಮೀನನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಹಸ್ತಾಂತರಿಸಿ, ನಿಯಮಾನುಸಾರ ಅಶ್ವತ್ಥ ಕಟ್ಟೆ ತೆರವು (clearance) ಕಾರ್ಯ ಕೈಗೊಳ್ಳಲಾಗುತ್ತದೆ. ಡಿಸೆಂಬರ್ 23ರ ನಂತರ ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.