ಭಟ್ಕಳ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ರಾಗಿ ಗಂಜಿಯಲ್ಲಿ ಇಲಿಪಾಷಾಣ ಸೇರಿಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಾಲಿ ವಾಸಿ ತಿಮ್ಮಪ್ಪ ಮಂಗಳ ಗೊಂಡ (೫೨) ಮೃತರು. ಇವರು ಕಳೆದ ಒಂದುವರೆ ವರ್ಷಗಳಿಂದ ಗಂಟಲು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳೂರು (Mangaluru) ಮತ್ತು ಮಣಿಪಾಲ (Manipal) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಕಾಯಿಲೆ ಗುಣಮುಖವಾಗದೇ ಇದ್ದುದರಿಂದ ತುಂಬಾ ನೋವಿನಿಂದ ಬಳಲುತ್ತಿದ್ದರು.ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ೧೪/೦೧/೨೦೨೬ರಂದು ಸಾಯಂಕಾಲ ಸುಮಾರು ೫ ಗಂಟೆಯ ಸಮಯಕ್ಕೆ ಮನೆಯಲ್ಲಿ ಇದ್ದ ಇಲಿಪಾಶಾಣ ಪೇಸ್ಟ್ ನ್ನು ಗಂಜಿಯಲ್ಲಿ ಮಿಕ್ಸ್ ಮಾಡಿ ಕುಡಿದಿದ್ದಾರೆ.

ಇದನ್ನು ಓದಿ: Sankranti/ ಭಟ್ಕಳದಲ್ಲಿ ಸಂಕ್ರಾಂತಿ ಸಡಗರ 

ಅಸ್ವಸ್ಥಗೊಂಡ ಅವರನ್ನು ಉಪಚಾರಕ್ಕೆ ಭಟ್ಕಳ (Bhatkal) ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ೧೫/೦೧/೨೦೨೬ರಂದು ಮಧ್ಯಾಹ್ನ ೧ ಗಂಟೆಯ ಸಮಯಕ್ಕೆ ಮೃತಪಟ್ಟಿದ್ದಾರೆ ಎಂದು ಮೃತನ ಮಗ ಮಹೇಶ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಡಿಯೋ ಸಹಿತ ಇದನ್ನು ಓದಿ: Makkala Santhe/ ಮುಂಡಳ್ಳಿಯಲ್ಲಿ ಮಕ್ಕಳ ಸಂತೆ