ಕಾರವಾರ: ಭಟ್ಕಳ (Bhatkal) ತಾಲೂಕಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಹೊಳೆಯಲ್ಲಿ ಅನಧಿಕೃತವಾಗಿ ಕೆಂಪು ಮಣ್ಣು ತುಂಬಿ ಪರಿಸರ ನಾಶ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ (demands) ಆ ಭಾಗದ ಸಾರ್ವಜನಿಕರು ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮಿ ಪ್ರಿಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
“ವೆಂಕಟಾಪುರ ಹೊಳೆ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಮಾಡುವ ಉದ್ದೇಶದಿಂದ ಮಾಜಿ ಸಚಿವ ಮಂಕಾಳ ವೈದ್ಯರ (Mankal Vaidya) ಪುತ್ರಿ ಬೀನಾ ಮಂಕಾಳ ವೈದ್ಯ ಹಾಗೂ ಸಹೋದರ ಈರಪ್ಪ ಸುಬ್ಬ ಮೊಗೇರ ಅವರು ವ್ಯಾಪಕವಾಗಿ ಕಾಡುಮರಗಳನ್ನು ಕಡಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಸಿಆರ್‌ಝಡ್ (CRZ) ನಿಯಮಾವಳಿಗಳನ್ನು ಗಾಳಿಗೆ ತೂರಿ, ಯಾವುದೇ ಅನುಮತಿ ಪಡೆಯದೆ ಹೊಳೆಗೆ ಮಣ್ಣು ತುಂಬಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದಾಗಿ ಜಲಚರಗಳ ಆವಾಸಸ್ಥಾನ ನಾಶವಾಗುತ್ತಿರುವುದರ ಜೊತೆಗೆ ನೀರಿನ ಸಹಜ ಹರಿವಿಗೂ ಭಾರಿ ಅಡ್ಡಿಯಾಗಿದೆ. ಮಳೆಗಾಲದಲ್ಲಿ ನೀರಿನ ಹರಿವು ತಡೆಯಲ್ಪಡುವುದರಿಂದ ಹಿಂಬದಿಯ ಗ್ರಾಮಗಳಲ್ಲಿ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ” ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ.
Kalashabhisheka/ ಭಟ್ಕಳದ ಕಾಮಾಕ್ಷಿ ದೇವಸ್ಥಾನದಲ್ಲಿ ವಿಶೇಷ ಕಲಶಾಭಿಷೇಕ
“ಇತ್ತೀಚೆಗೆ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆ ಮತ್ತು ಸಾವು-ನೋವುಗಳಿಗೂ ಈ ರೀತಿ ಅಕ್ರಮವಾಗಿ ಮಣ್ಣು ತುಂಬಿರುವುದೇ ಮುಖ್ಯ ಕಾರಣ” ಎಂದು ಗ್ರಾಮಸ್ಥರು ದೂರಿದ್ದಾರೆ. ಆದ್ದರಿಂದ “ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಹೊಳೆಯಲ್ಲಿ ತುಂಬಲಾಗಿರುವ ಕೆಂಪು ಮಣ್ಣನ್ನು ತೆರವುಗೊಳಿಸಬೇಕು ಮತ್ತು ಪರಿಸರ ಹಾನಿಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಸ್ಥಳೀಯರು ಮನವಿಯ ಮೂಲಕ ಒತ್ತಾಯಿಸಿದ್ದಾರೆ (demands).
CEIR portal/ ಕಾಣೆಯಾದ 3 ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ


