ಭಟ್ಕಳ: ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುವನ್ನು ಸಂಗ್ರಹಿಸಿ ಇಟ್ಟಿದ್ದ ಆರೋಪದ ಮೇಲೆ ಯುವಕನೊಬ್ಬನ ವಿರುದ್ಧ ಭಟ್ಕಳ (Bhatkal) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ಕಳ ತಾಲೂಕಿನ ಹೆಬಳೆಯ ಫಿರ್ದೋಸ್ ನಗರದ ಮೋಹಿದ್ದೀನ್ ಶೇಖ ಅವರ ಪುತ್ರ ಅಬ್ರಾರ್ ಶೇಖ (೨೪) ಆರೋಪಿಯಾಗಿದ್ದಾನೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪೊಲೀಸರ ಮಾಹಿತಿ ಪ್ರಕಾರ, ಭಟ್ಕಳ (Bhatkal) ನಗರದ ಮುಗ್ಧುಂ ಕಾಲೋನಿಯ ಮೌಂಟಿನ್ ಗ್ರೌಂಡ್ ಪ್ರದೇಶದಲ್ಲಿ ಆರೋಪಿತನು ಯಾವುದೇ ಪರವಾನಿಗೆ ಇಲ್ಲದೆ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದಾನೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು.
CEIR portal/ ಕಾಣೆಯಾದ 3 ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ
ದಾಳಿ ವೇಳೆ ಸುಮಾರು 84 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹೫ ಸಾವಿರ) ಹಾಗೂ ಅದನ್ನು ಸಾಗಿಸಲು ಬಳಸಲಾಗಿದ್ದ ₹೫ ಲಕ್ಷ ಮೌಲ್ಯದ ಬಿಳಿ ಬಣ್ಣದ ಹೋಂಡಾ ಸಿಟಿ ಕಾರು ಪತ್ತೆಯಾಗಿ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಗಾಂಜಾ ಪ್ಯಾಕ್ ಮಾಡಲು ಬಳಸುವ ೧೨ ಸಣ್ಣ ಪಾರದರ್ಶಕ ಖಾಲಿ ಸ್ಯಾಚೆಟ್‌ಗಳು ಸಹ ದೊರೆತಿವೆ. ಆರೋಪಿತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ (NDPS act) ಅಡಿಯಲ್ಲಿ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನವೀನ್ ಎಸ್ ನಾಯ್ಕ ಅವರು ದೂರು ದಾಖಲಿಸಿಕೊಂಡಿದ್ದಾರೆ.


