ಭಟ್ಕಳ(Bhatkal): ಮುರುಡೇಶ್ವರ (Murdeshwar) ಸಮುದ್ರ ತೀರದಲ್ಲಿ ನಿರ್ಲಕ್ಷ ಚಾಲನೆ ಅಂಡ್ ವೀಲಿಂಗ್ (wheeling) ಮಾಡಿದ ಬೆಂಗಳೂರು (Bengaluru) ಮೂಲದ ವಾಹನ ಚಾಲಕನಿಗೆ ಮುರುಡೇಶ್ವರ ಪೊಲೀಸರು ದಂಡ ವಿಧಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಂಗಳೂರು ಮೂಲದ ಗಣೇಶ ಎನ್. ವಿ. ವೀಲಿಂಗ್ ಮಾಡಿದ ಆರೋಪಿ. ಮುರುಡೇಶ್ವರ (Murudeshwar) ಸಮುದ್ರ ತೀರದಲ್ಲಿ ಮಾರುತಿ ಸುಜುಕಿ ಕಂಪನಿಯ ಇಕೋ ಕಾರನ್ನು ಅಜಾಗರೂಕ ಹಾಗೂ ನಿರ್ಲಕ್ಷ್ಯ ಚಾಲನೆಯೊಂದಿಗೆ ವೀಲಿಂಗ್ ಮಾಡುತ್ತಿದ್ದ ಆರೋಪವಿದೆ. ವಾಹನ ಚಾಲಕನಿಗೆ ಒಂದು ಸಾವಿರ ದಂಡ ವಿಧಿಸಿದ ಮುರುಡೇಶ್ವರ ಠಾಣೆಯ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಆರೋಪಿಗಳನ್ನು ಬಂಧಿಸಿ ಕರೆದೊಯ್ದ ಗೋವಾ ಪೊಲೀಸರು