ಭಟ್ಕಳ: ಮೀನು ಮಾರುಕಟ್ಟೆ (fish market) ಸ್ಥಳಾಂತರ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಶನಿವಾರದಂದು ಹಳೆ ಬಸ್ ನಿಲ್ದಾಣ ಸಮೀಪದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮೀನು ಮಾರಾಟ ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು. ಅವರ ಸಂಕಷ್ಟ ಆಲಿಸಿದ ಸಚಿವ ಮಂಕಾಳ ವೈದ್ಯ (Mankal Vaidya) ಯಾವುದೇ ಕಾರಣಕ್ಕೂ ಇಗಿರುವ ಮೀನು ಮಾರುಕಟ್ಟೆಯನ್ನು (fish market) ಸ್ಥಳಾಂತರ ಮಾಡುವುದಿಲ್ಲ ಎಂದು ಧೈರ್ಯ ತುಂಬಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ, “ಭಟ್ಕಳ (Bhatkal) ತಾಲೂಕಿನಲ್ಲಿ ಮೊಟ್ಟ ಮೊದಲು ಪ್ರಾರಂಭವಾಗಿದ್ದ ಮಾರುಕಟ್ಟೆ ಇದಾಗಿದ್ದು. ತದನಂತರ ತಾಲೂಕಿನಾದ್ಯಂತ ೨೫ ಮೀನು ಮಾರುಕಟ್ಟೆ ಆರಂಭವಾಗಿದೆ. ಯಾವ ಯಾವ ಮೀನು ಮಾರಾಟ ಮಹಿಳೆಯರಿಗೆ ಎಲ್ಲಿಲ್ಲಿ ಅನುಕೂಲವಿದೆಯೋ ಅಲ್ಲಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದಾರೆ. ರಾಜಾಂಗಣದಲ್ಲಿರುವ ಹಳೆಯ ಮೀನು ಮಾರುಕಟ್ಟೆ ದುರಸ್ತಿ ಮಾಡುತ್ತೇವೆ ಎಂದು ಯಾರು ಕೂಡ ಹೇಳಿಲ್ಲ. ಹೊಸ ಮಾರುಕಟ್ಟೆ ನಿರ್ಮಾಣ ಮಾಡಿ ೫ ವರ್ಷ ಕಳೆದಿದೆ. ಆ ಹಿನ್ನೆಲೆಯಲ್ಲಿ ಸೆ ೧ರಿಂದ ಹೊಸ ಮೀನು ಮಾರುಕಟ್ಟೆ ಮೀನು ಗ್ರಾಹಕರಿಗೆ ತೆರೆಯುತ್ತಿದ್ದಾರೆ. ಅಲ್ಲಿ ವ್ಯಾಪಾರ ಮಾಡಲು ಹೋಗುವವರು ಹೋಗಬಹುದು. ರಾಜಾಂಗಣದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ಇಲ್ಲಿ ಮಾಡಬಹುದು” ಎಂದು ಹೇಳಿದರು.

ಇದನ್ನೂ ಓದಿ: horrific accident/ ಬೈಕ್‌ ಸವಾರ ದುರ್ಮರಣ

“ಹಳೇ ಮೀನು ಮಾರುಕಟ್ಟೆಯಲ್ಲಿ ಯಾವುದೇ ದೊಡ್ಡ ಮೀನು ವಾಹನಗಳನ್ನು, ಹಳೆಯ ಮೀನು ಮಾರುಕಟ್ಟೆ ಒಳಗಡೆ ಬರಬಾರದು. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡುತ್ತೇನೆ. ರಿಕ್ಷಾ ಮೂಲಕ ಮೀನುಗಳನ್ನು ತಂದು ಮೀನು ಮಾರಾಟ ಮಾಡಬಹುದಾಗಿದೆ. ದೊಡ್ಡ ವಾಹನಗಳನ್ನು ತರುವವರು ಹೊಸ ಮೀನು ಮಾರುಕಟ್ಟೆಯಲ್ಲಿ ಖಾಲಿ ಮಾಡಿಕೊಂಡು ಇಲ್ಲಿಗೆ ತೆಗೆದುಕೊಂಡು ಬನ್ನಿ. ಯಾರು ಕೂಡ ಗೊಂದಲಕ್ಕೆ ಒಳಗಾಗುವುದು ಬೇಡ” ಎಂದರು.

ಇದನ್ನೂ ಓದಿ: arrested the accused/ ೧೨ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು

“ಹಳೆಯ ಮೀನು ಮಾರುಕಟ್ಟೆ ಬೀಳುವ ಪರಿಸ್ಥಿತಿಯಲ್ಲಿ ಇದೆ. ಅದಕ್ಕೆ ನಾನು ಪುರಸಭೆಯವರೊಂದಿಗೆ ಮಾತುಕತೆ ನಡೆಸಿ ಸರ್ಕಾರದಿಂದ ಹಣ ತಂದು ಕೆಳ ಮಹಡಿಯಲ್ಲಿ ಮೀನು ಮಾರಾಟ ಮಾಡುವವರಿಗೆ ಹಾಗೂ ಮೇಲ್ಭಾಗದಲ್ಲಿ ಬೇರೆ ವ್ಯವಸ್ಥೆ ಮಾಡುವ ತನಕ ಈ ಕಟ್ಟಡ ದುರಸ್ತಿ ಮಾಡುವುದಿಲ್ಲ. ದುರಸ್ತಿ ಮಾಡುವ ವೇಳೆ ನಿಮ್ಮೆಲರ ಅಭಿಪ್ರಾಯ, ಒಪ್ಪಿಗೆ ತೆಗೆದುಕೊಂಡು ಮಾಡುತ್ತೇನೆ. ಯಾರೂ ಗೊಂದಲಕ್ಕೆ ಒಳಗಾಗ ಬೇಡಿ, ಸ್ವಚ್ಛತೆ ಕಾಪಾಡಿಕೊಳ್ಳಿ” ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ಇದನ್ನೂ ಓದಿ: Sad News/ ಪತಿಯ ಹಿಂಸೆ ತಾಳಲಾರದೆ ಜೀವನಕ್ಕೆ ವಿದಾಯ ಹೇಳಿದ ಯುವತಿ

Shreekanth Naik Asarakeriಭಟ್ಕಳ ನಗರ ಭಾಗದ ರಾಜಾಂಗಣದ (ಹಳೇ ಬಸ್ ನಿಲ್ದಾಣ) ಮೀನು ಮಾರುಕಟ್ಟೆ ಪುರಾತನ ಇತಿಹಾಸ ಹೊಂದಿದೆ.  ಮೀನು ಮಾರುಕಟ್ಟೆಯ ಮೀನು ಮಾರಾಟಗಾರರ ಹಾಗೂ ಅದಕ್ಕೆ ಹೊಂದಿಕೊಂಡ ವಿವಿಧ ಅಂಗಡಿಕಾರರ ಹಾಗೂ ರಿಕ್ಷಾ ಚಾಲಕರ ನಿಸ್ವಾರ್ಥ ಹೋರಾಟಕ್ಕೆ ಮಣಿದು, ಉಸ್ತುವಾರಿ ಸಚಿವರು ಭಟ್ಕಳದ ಮೀನು ಮಾರುಕಟ್ಟೆಗೆ ಆಗಮಿಸಿ ಮೀನು ಮಾರುಕಟ್ಟೆಯನ್ನು ಈಗಿರುವ ಸ್ಥಳದಲ್ಲೇ ಉಳಿಸಿಕೊಳ್ಳುವ ಬೇಡಿಕೆಗೆ ಸ್ಪಂದಿಸಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಪ್ರಸ್ತುತ ಮೀನು ಮಾರುಕಟ್ಟೆಯನ್ನು ಅದೇ ಜಾಗದಲ್ಲಿ ನವೀಕರಣಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು.

– ಶ್ರೀಕಾಂತ ನಾಯ್ಕ (ಮಾಜಿ ಸೈನಿಕ), ಮಾಜಿ ಸದಸ್ಯ, ಪುರಸಭೆ, ಭಟ್ಕಳ