ಭಟ್ಕಳ: ೨೪ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವಿ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಬಂದ ಹೆಮ್ಮೆಯ ಸೈನಿಕಗೆ ಅದ್ದೂರಿ ಸ್ವಾಗತದೊಂದಿಗೆ (grand welcome) ಕೋಟದಮಕ್ಕಿ ಗ್ರಾಮಸ್ಥರು ಬರಮಾಡಿಕೊಂಡರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರ್ಡೇಶ್ವರದ (ಮುರುಡೇಶ್ವರ) ಕೋಟದಮಕ್ಕಿ ಗ್ರಾಮದ ರಾಮದಾಸ ದೇವಾಡಿಗ ಹಾಗೂ ಸೀತಾ ದಂಪತಿಯ ಪುತ್ರ ಜನಾರ್ಧನ ರಾಮದಾಸ ದೇವಾಡಿಗ ಭಾರತದ ರಾಜಸ್ಥಾನ, ಪಂಜಾಬ, ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಗೌರವಯುತ ಸೇವೆ ಸಲ್ಲಿಸಿದ್ದಾರೆ. ಈ ವಿಶೇಷ ಸಂದರ್ಭವನ್ನು ಗೌರವಿಸುವ ಉದ್ದೇಶದಿಂದ ರವಿವಾರ ಸಂಜೆ ೫ ಗಂಟೆಗೆ ಅವರ ಗ್ರಾಮದ ಸ್ನೇಹ ಯುವಕ ಸಂಘದ ಅಧ್ಯಕ್ಷ ಜಗದೀಶ ದೇವಾಡಿಗ ಹಾಗೂ ಪದಾಧಿಕಾರಿಗಳು & ಉತ್ಸಾಹಿ ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದನ್ನು ಓದಿ: Farewell/ ಸೇವಾ ನಿವೃತ್ತಿಯಾದ ಮುಖ್ಯ ಶಿಕ್ಷಕಗೆ ಬೀಳ್ಕೊಡುಗೆ
ಜನಾರ್ಧನ ರಾಮದಾಸ ದೇವಾಡಿಗ ಅವರನ್ನು ಅದ್ದೂರಿ ಸ್ವಾಗತದೊಂದಿಗೆ (grand welcome) ಮುರ್ಡೇಶ್ವರದ ಮುಖ್ಯ ದ್ವಾರದಿಂದ ಅವರ ಸ್ವಗೃಹಕ್ಕೆ ಊರಿನ ಸಮಸ್ತ ದೇಶಭಕ್ತ ಗ್ರಾಮಸ್ಥರು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ದೇವಾಡಿಗ ಸಮಾಜದ ಅಧ್ಯಕ್ಷ ಲಕ್ಷಣ ಕೋಟದಮಕ್ಕಿ, ದೇವಾಡಿಗ ಯುವ ವೇದಿಕೆಯ ಅಧ್ಯಕ್ಷ ನಾಗರಾಜ ದೇವಾಡಿಗ ನೆರಿಕುಳಿ, ಮುಖಂಡ ಪರಮೇಶ್ವರ ದೇವಾಡಿಗ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದನ್ನು ಓದಿ: Tribute/ ಎಲ್ ಎಸ್ ನಾಯ್ಕರ ಶ್ರದ್ಧಾಂಜಲಿ ಸಭೆ
ಇದೇ ಸಂದರ್ಭದಲ್ಲಿ, ಭಟ್ಕಳ ತಾಲೂಕಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಮ್. ಡಿ ಪಕ್ಕಿ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಸದಸ್ಯರಾದ ರವೀಂದ್ರ ನಾಯ್ಕ, ವಾಸು ಮೊಗೇರ, ಗಣಪತಿ ಮೊಗೇರ ಹಾಗೂ ರಾಜೇಶ, ಅವರ ಸ್ವಗೃಹಕ್ಕೆ ತೆರಳಿ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಿ ಶುಭ ಹಾರೈಸಿದರು.
ಇದನ್ನು ಓದಿ: talent show/ ಕಲಾ ಸೌರಭ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ



