ಭಟ್ಕಳ: ಧಾರ್ಮಿಕ ಆಚರಣೆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮುರ್ಡೇಶ್ವರ ಬೀಚ್‌ನಲ್ಲಿ (Murdeshwar beach) ಮಾರ್ಚ ೪ರಂದು ಸಂಜೆ ೫ ಗಂಟೆಯಿಂದ ಊರ ಜನರ ಸಹಕಾರದಿಂದ ನಮ್ಮೂರ ಹೋಳಿ ಸಂಭ್ರಮ-೨೦೨೬ (Holi festival) ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದೆ ಎಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಎಂ ವೈದ್ಯ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರದ (Murdeshwar) ಆರೆನ್ನೆಸ್ ಮಿನಿಸಭಾಭವನದಲ್ಲಿ ಸೋಮವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಹೋಳಿ ಹಬ್ಬದ (Holi festival) ಸಂಭ್ರಮಾಚರಣೆ ಕುರಿತು ಮಾಹಿತಿ ನೀಡಿದ ಅವರು, ಮುರ್ಡೇಶ್ವರದಲ್ಲಿ ಈ ಸಲದಿಂದ ನಮ್ಮೂರ ಹೋಳಿ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಾರ್ಚ ೪ರ ಸಂಜೆ ೫ ಗಂಟೆಗೆ ಶ್ರೀ ಮುರುಡೇಶ್ವರ (Murudeshwara) ದೇವರಿಗೆ ಪೂಜೆ ಸಲ್ಲಿಸಿ ಹೋಳಿ ಸಂಭ್ರಮಕ್ಕೆ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ(Mankal Vaidya) ಚಾಲನೆ ನೀಡಲಿದ್ದಾರೆ ಎಂದರು.

Konkani folk/ ಕೊಂಕಣ ಖಾರ್ವಿ ಜಾನಪದ ಉತ್ಸವ ‘ಸಿಗ್ಮೆ ಪೊರೊಬ್’ ಚಾಲನೆ

ಹೋಳಿ ಸಂಭ್ರಮದಲ್ಲಿ ಹೋಳಿ ಕುಣಿತ, ಬಣ್ಣದ ಮಡಿಕೆ ಒಡೆಯುವುದು, ರಂಗೀಲಾ ಹಬ್ಬ ( ಬಣ್ಣ ಹಚ್ಚುವುದು), ಕಾಮದಹನ, ಮಳೆ ನೃತ್ಯ, ಲೈವ್ ಡಿಜೆ, ಸಮುದ್ರ ಸ್ನಾನ ಮುಂತಾದ ಕಾರ್ಯಕ್ರಮ ನಡೆಯಲಿದೆ. ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹೋಳಿ ಆಡಲು ಅವಕಾಶ ಕಲ್ಪಿಸಲಾಗಿದೆ. ಹೋಳಿಯಲ್ಲಿ ಪಾಲ್ಗೊಳ್ಳುವವರು ಬಿಳೆ ಬಣ್ಣದ ಬಟ್ಟೆ ಧರಿಸಿ ಬರಬೇಕು ಎಂದ ಅವರು, ಹೋಳಿ ಸಂಭ್ರಮದಲ್ಲಿ ಸಚಿವ ಮಂಕಾಳ ವೈದ್ಯರೂ ಸಹ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವುದರ ಮೂಲಕ ಹೋಳಿ ಸಂಭ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

vardhanthi utsav/ ಕರಿಕಲ್ ಧ್ಯಾನ ಕುಟೀರದಲ್ಲಿ ಶ್ರೀ ರಾಮ ದೇವರ ಪ್ರತಿಷ್ಠಾಪನ ವರ್ಧಂತ್ಯುತ್ಸವ

ಮುರುಡೇಶ್ವರ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಸ್ ಎಸ್ ಕಾಮತ್ ಮಾತನಾಡಿ, ಮುರುಡೇಶ್ವರ ಬೀಚಿನಲ್ಲಿ ಈ ಸಲ ಹೋಳಿ ಸಂಭ್ರಮವನ್ನು ಪ್ರವಾಸೋದ್ಯಮ ಉತ್ತೇಜನಕ್ಕಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದರು.

endosulfan/ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಆಶಾಕಿರಣ ಯೋಜನೆ ಆರಂಭ: ಭಟ್ಕಳದಲ್ಲಿ ೫೮೦ ಫಲಾನುಭವಿಗಳು 

ಈ ಸಂದರ್ಭದಲ್ಲಿ ಭಟ್ಕಳ ಅರ್ಬನ್ ಬ್ಯಾಂಕ್ ನಿರ್ದೇಶಕಿ ಬೀನಾ ವೈದ್ಯ, ಮಾವಳ್ಳಿ ಗ್ರಾ ಪಂ ಮಾಜಿ ಅಧ್ಯಕ್ಷೆ ನಯನಾ ನಾಯ್ಕ, ಸತೀಶ ನಾಯ್ಕ, ನಾಗೇಶ ನಾಯ್ಕ ಮುಂತಾದವರಿದ್ದರು.

Murudeshwara/ ಅಂಗನವಾಡಿಯ ನಿವೃತ್ತ ಶಿಕ್ಷಕಿಗೆ ದಾಯವಾದಿಗಳಿಂದ ಧಮಕಿ