ಭಟ್ಕಳ ಡೈರಿ ವರದಿ
ಭಟ್ಕಳ: ಅಂಕೋಲಾದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಸೆಪ್ಟೆಂಬರ್ ೨೯ರಂದು ನಡೆದ ಜಿಲ್ಲಾ ಮಟ್ಟದ ಬಾಲಕರ ಹಾಗೂ ಬಾಲಕಿಯರ ಖೋ-ಖೋ ಸ್ಪರ್ಧೆಯಲ್ಲಿ ಹೊನ್ನೆಮಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಬಾಲಕರ ಹಾಗೂ ಬಾಲಕಿಯರ ಖೋ-ಖೋ ವಿಭಾಗದಲ್ಲಿ ಹೊನ್ನೆಮಡಿ ಶಾಲೆಯ ತಂಡಗಳು ರನ್ನರ್ ಅಪ್ ಸ್ಥಾನ ಪಡೆದುಕೊಂಡಿವೆ.
ಈ ಸಾಧನೆಯೊಂದಿಗೆ ಶಾಲೆಯ ಮೂವರು ಬಾಲಕರು ಹಾಗೂ ಮೂವರು ಬಾಲಕಿಯರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆ ಶಾಲೆ ಹಾಗೂ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಎಸ್ಡಿಎಂಸಿ, ಮುಖ್ಯಾಧ್ಯಾಪಕರು, ಸಹ ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರು ಹಾಗೂ ತರಬೇತಿಗೆ ಸಹಕರಿಸಿದ ಹಳೇ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
ಇದನ್ನೂ ಓದಿ:
ಮಡಗಾಂವ್-ಮಂಗಳೂರು ವಂದೇ ಭಾರತ್ ರೈಲು ಬೆಂಗಳೂರಿಗೆ ವಿಸ್ತರಣೆ: ಉತ್ತರ ಕನ್ನಡ, ಕರಾವಳಿ ಭಾಗದ ಜನರಿಗೆ ಅನುಕೂಲ
ಬೆಂಗಳೂರು–ಮಡಗಾಂವ್ ನಡುವೆ ವಾರಾಂತ್ಯ ವಿಶೇಷ ರೈಲು; ಭಟ್ಕಳ ಸೇರಿ ಕರಾವಳಿಯಲ್ಲಿ ನಿಲುಗಡೆ
ಮೈಸೂರು ಯಾರ್ಡ್ನಲ್ಲಿ ಸುರಕ್ಷತಾ ಕಾಮಗಾರಿ: ಅ. ೨ರಂದು ಮುರುಡೇಶ್ವರ–ಬೆಂಗಳೂರು ರೈಲುಗಳ ಮಾರ್ಗ ಬದಲಾವಣೆ


