ಭಟ್ಕಳ: ಕೊಂಕಣಿ ಜಾನಪದ (Konkani folk) ಉತ್ಸವ ‘ಸಿಗ್ಮೆ ಪೊರೊಬ್-೨೦೨೬’ ಫೆಬ್ರವರಿ ೨೮ರಂದು ಭಟ್ಕಳ (Bhatkal) ಬಂದರಿನಲ್ಲಿ ಅದ್ದೂರಿಯಾಗಿ ನಡೆಯಿತು. ಭವ್ಯ ಮೆರವಣಿಗೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಕರ್ನಾಟಕ (Karnataka) ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಂಕಣ ಖಾರ್ವಿ ಸಮಾಜ ಮತ್ತು ಕೊಂಕಣ ಖಾರ್ವಿ ಕಲಾಮಂಡ್, ಭಟ್ಕಳ ಜಂಟಿಯಾಗಿ ಆಯೋಜಿಸಿದ್ದವು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೊಂಕಣಿ ಜಾನಪದದ (Konkani folk) ಈ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡಿನ ಜಲ ಸಾರಿಗೆ ಸಚಿವ ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಉದ್ಘಾಟಿಸಿದರು. “ಮೀನುಗಾರಿಕೆ ಕೇವಲ ಒಂದು ವೃತ್ತಿಯಲ್ಲ, ಕೊಂಕಣಿ ಖಾರ್ವಿ ಸಮುದಾಯದ ಉತ್ಸಾಹ, ಕಲೆ, ಸಂಸ್ಕೃತಿ ಮತ್ತು ಜೀವನವೂ ಆಗಿದೆ ಎಂದು ಅವರು ಶುಭ ಹಾರೈಸಿದರು.

vardhanthi utsav/ ಕರಿಕಲ್ ಧ್ಯಾನ ಕುಟೀರದಲ್ಲಿ ಶ್ರೀ ರಾಮ ದೇವರ ಪ್ರತಿಷ್ಠಾಪನ ವರ್ಧಂತ್ಯುತ್ಸವ

ಸ್ವಾಗತಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಅಲ್ವಾರೆಸ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ ಮಾತನಾಡಿದರು. ಸಚಿವರು ಮೀನುಗಾರಿಕೆ ಅಪಘಾತದಲ್ಲಿ ಮೃತಪಟ್ಟ ಮೀನುಗಾರನ ಕುಟುಂಬಕ್ಕೆ ಸರ್ಕಾರಿ ಚೆಕ್ ಅನ್ನು ವಿತರಿಸಿದರು.

endosulfan/ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಆಶಾಕಿರಣ ಯೋಜನೆ ಆರಂಭ: ಭಟ್ಕಳದಲ್ಲಿ ೫೮೦ ಫಲಾನುಭವಿಗಳು 

ಖಾರ್ವಿ ಸಮುದಾಯದ ನಾಯಕರಾದ ಸುಬ್ರಾಯ ಬಿ ಖಾರ್ವಿ, ರವಿ ಟಿ ನಾಯಕ್ ಮತ್ತು ರತ್ನಾಕರ್ ಎಂ ಖಾರ್ವಿ, ತಂಜಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ದಯಾನಂದ ಮಡ್ಕೇಕರ್, ಜೇಮ್ಸ್ ಲೋಬೊ ಮತ್ತು ಮಮ್ದು ಇಬ್ರಾಹಿಂ ಉಪಸ್ಥಿತರಿದ್ದರು. ಕೊಂಕಣಿ ಖಾರ್ವಿ ಕಲಾಮಂಡ್‌ನ ಸಂಚಾಲಕ ಶ್ರೀಧರ ಎಂ ಖಾರ್ವಿ ಧನ್ಯವಾದ ಅರ್ಪಿಸಿದರು. ಕೇಶವ ಗಣೇಶ ತಾಂಡೇಲ ನಿರೂಪಿಸಿದರು.

Murudeshwara/ ಅಂಗನವಾಡಿಯ ನಿವೃತ್ತ ಶಿಕ್ಷಕಿಗೆ ದಾಯವಾದಿಗಳಿಂದ ಧಮಕಿ