ಭಟ್ಕಳ: ಬಡವರಿಗೆ ಸಹಾಯ ಮಾಡಲೆಂದು ಕಾಂಗ್ರೆಸ್ ಪಕ್ಷ 20 ವರ್ಷಗಳ ಹಿಂದೆ ತಂದಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಕೈ ಬಿಟ್ಟು, ‘ವಿಬಿ ಜಿ ರಾಮ್ ಜಿ’ ಮಾಡಲು ಹೊರಟಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ (Mankal Vaidya) ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತಾಲೂಕಿನ ಸಚಿವರ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೊಡದೆ ಸದ್ದಿಲ್ಲದೇ ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದುಗೊಳಿಸಿದೆ. ಈ ಯೋಜನೆಯೂ ಗ್ರಾಮೀಣ ಬಡ ಕೂಲಿಕಾರ್ಮಿಕರ ಬದುಕಿಗೆ ಆಧಾರವಾಗಿತ್ತು. ಗ್ರಾಮ ಪಂಚಾಯತಿಗಳು ಗ್ರಾಮ ಮಟ್ಟದ ಅಧಿಕಾರದ ಕೇಂದ್ರವಾಗಿದ್ದವು. ಪಂಚಾಯತಿಯಲ್ಲಿ ೧೫ ದಿನಗಳಲ್ಲಿ ಜನರು ಕೇಳಿದ ಕಡೆ ಕೆಲಸವನ್ನು ಪಡೆದುಕೊಳ್ಳುತ್ತಿದ್ದರು. ಯಾವುದೇ ಗುತ್ತಿಗೆದಾರನ ಸಹಾಯವಿಲ್ಲದೆ ಪಲಾನುಭವಿಗೆ ನೇರವಾಗಿ ಅನುಧಾನವೂ ಅವರ ಖಾತೆಗೆ ಜಮೆಯಾಗುತಿತ್ತು ಎಂದರು.

ಇದನ್ನು ಓದಿ: “YUVA–2026” ಎಂಬ ಸಂದೇಶ ಪ್ರತಿಬಿಂಬಿಸುವ ಮಾನವ ಸರಪಳಿ

ಇಂದು ಆ ನಿಯಮಗಳನ್ನ ಬದಲಾವಣೆ ಮಾಡಿ, ವಿಬಿ ಜಿ ರಾಮ್ ಜೀ ಎಂದು ಹೆಸರನ್ನು ಬದಲಾಯಿಸಿದ್ದಾರೆ. ಈ ಮೊದಲು ಗ್ರಾಮ ಪಂಚಾಯತನ ಗ್ರಾಮ ಸಭೆಯಲ್ಲಿ ಅಧ್ಯಕ್ಷರು, ಸದಸ್ಯರು ಗುರುತಿಸಿದ ಕೆಲಸವನ್ನು ಪಲಾನುಭವಿಗಳಿಗೆ ನೀಡುತ್ತಿದ್ದರು. ಆದರೆ ಇಂದು ಯಾವ ಪಂಚಾಯತಗಳಿಗೆ ಕೆಲಸ ನೀಡಬೇಕು ಎನ್ನುವ ಆಯ್ಕೆ ದೆಹಲಿಯಲ್ಲೇ ಅಂತಿಮವಾಗಲಿದೆ. ಇದು ಸರಿಯಾದ ನಿರ್ಧಾರವಲ್ಲ ಕೈಬಿಡಬೇಕು ಎಂದರು. ರಾಜ್ಯದ ಪ್ರತಿ ಪಂಚಾಯತ ಹಾಗೂ ತಾಲೂಕಿನಿಂದ ಈ ಯೋಜನೆಯನ್ನು ವಿರೋಧ ಮಾಡುತ್ತೇವೆ ಎಂದು ಸಚಿವ ಮಂಕಾಳ ವೈದ್ಯ (Mankal Vaidya) ಹೇಳಿದರು.

ಇದನ್ನು ಓದಿ: AI course/ ಎ ಐ ಕೋರ್ಸ್ ಅನಾವರಣ

ನರೇಗಾ ಯೋಜನೆಯು ಬಡವರಿಗೆ ಅನುಕೂಲವಾಗಿತ್ತು, ಪ್ರತಿ ದಿನದ ಕೆಲಸಕ್ಕೆ 370 ರೂಪಾಯಿ ನೀಡುತ್ತಿದ್ದರು. ಇಂದು ಗುತ್ತಿಗೆದಾರರ ಮೂಲಕ ಕೆಲಸ ಮಾಡಬಹುದೆಂದು ಹೇಳಲಾಗುತ್ತಿದೆ. ಪುನ: ಉಳ್ಳವರ ಕೈ ಕೆಳಗೆ ಜೀತದಾಳಾಗಿ ದುಡಿಯುವ ಪರಿಸ್ಥಿತಿ ಈ ಕಾನೂನಿನಲ್ಲಿದೆ. ನಾವೂ ಸ್ವತಂತ್ರರಾಗಿ ನಮ್ಮ ಪಂಚಾಯತನಲ್ಲಿ ನಾವೂ ಕೇಳಿದ ಕೆಲಸ ಸಿಗಬೇಕು. ಈ ಹಿಂದಿನ ನರೇಗಾ ಯೋಜನೆಯಲ್ಲಿ ಇದ್ದ ಕಾನೂನು ಸರಿಯಾಗಿದೆ ಎಂದರು.

ಇದನ್ನು ಓದಿ: Marikamba Temple/ ನೂತನ ಆಡಳಿತ ಮಂಡಳಿ ಘೋಷಣೆ 

ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆ ಎಂಬ ಮಹಾತ್ಮರ ಹೆಸರನ್ನು ಯೋಜನೆಗೆ ಇಟ್ಟು, ಅವರ ಹೆಸರಲ್ಲಿ ಸಾಮಾನ್ಯ ಜನರು, ಬಡವರು ಉದ್ಯೋಗ ಮಾಡಬೇಕು, ಅವರಿಗೆ ಕೆಲಸ ಕೊಡಬೇಕು ಎಂದು ಯೋಜನೆ ಜಾರಿಗೆ ತಂದಿದ್ದೆವು. ಆದರೆ ಈ ಯೋಜನೆಯಲ್ಲಿ “ರಾಮನನ್ನ ಯಾಕೆ ತಂದರು ಗೊತ್ತಿಲ್ಲ” ಎನ್ನುತ್ತಾ, ನಾನು ಬಹಳ ರಾಮನ ಭಕ್ತ ಅದರ ಬಗ್ಗೆ ಏನು ಮಾತನಾಡಲು ಹೋಗಲ್ಲ’ ಎಂದು ಯೋಜನೆಯ ವಿರುದ್ಧ ಆಕ್ರೋಶ ಹೊರ ಹಾಕಿದರು.

ಇದನ್ನು ಓದಿ: government school/ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಅಂಗಡಿಮನೆ, ತಾಲೂಕ ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಭಾಸ್ಕರ ಮೊಗೇರ ಬೆಳ್ಕೆ, ಜಾಲಿ ಪಟ್ಟಣ ಪಂಚಾಯತ ಸದಸ್ಯ ಈಶ್ವರ ಮೊಗೇರ ಮುಂತಾದವರು ಉಪಸ್ಥಿತರಿದ್ದರು.

ಇದನ್ನು ಓದಿ: wild boar/ ಕಾಡು ಹಂದಿ ಅಡ್ಡ ಬಂದು ಆಟೋ ಪಲ್ಟಿ, ಚಾಲಕ ಗಂಭೀರ